ಬೆಂಗಳೂರು, ಜೂನ್ 4, 2020 : ( www.justkannada.in news ) ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಪೂರ್ಣ ಪ್ರಮಾಣದ ಆಡಳಿತ ಮಂಡಳಿಯ ಸಭೆಇಂದು ವಿಕಾಸಸೌಧದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭುಚವ್ಹಾಣ್, ‘ಅನಧಿಕೃತವಾಗಿ ಪ್ರಾಣಿಗಳ ಸಾಗಣೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು ಹಾಗೂ ಪ್ರಾಣಿ ಹಿಂಸೆಗೆ ಸಂಬಂಧಪಟ್ಟ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ದಿನಾಂಕ: ೨೫-೧೧-೨೦೧೯ ರಂದು ಮಂಡಳಿ ನೋಂದಣಿಯಾಗಿದ್ದು, ಸದ್ಯ ನಮ್ಮರಾಜ್ಯದಲ್ಲಿ ೮೫.೨೨ ಲಕ್ಷದನ, ೨೯.೯೮ ಲಕ್ಷಎಮ್ಮೆ, ೧೧೦.೯೧ ಲಕ್ಷ ಕುರಿ,೬೧.೯೬ಲಕ್ಷ ಮೇಕೆ , ೩.೨೬ಲಕ್ಷ ಹಂದಿ ಮತ್ತು ೬೧೭ಲಕ್ಷ ಕೋಳಿಗಳಿವೆ. ಈ ಎಲ್ಲಾ ಜಾನುವಾರುಗಳ ಆರೋಗ್ಯರಕ್ಷಣೆಗಾಗಿ ೪೨೧೪ ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
• ಪ್ರಾಣಿ ಹಿಂಸಾ ಪ್ರತಿಬಂಧಕ ಅಧಿನಿಯಮ, ೧೯೬೦ ಹಾಗೂ ನಿಯಮಗಳ ಪ್ರಕಾರ ಈ ಮಂಡಳಿಯ ಪ್ರಮುಖ ಕಾರ್ಯಗಳೆಂದರೆ:
• ಪ್ರಾಣಿಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಂದರ್ಭಾನುಸಾರ ಎದುರಾಗುವ ಸಮಸ್ಯೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆ ನೀಡುವುದು
• ಪಶು ಹಾಗೂ ಪಕ್ಷಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಸ್ಥಾಪಿಸಲಾದ ಪ್ರಾಣಿಕಲ್ಯಾಣ ಸಂಘಗಳು/ ನಿಕಾಯಗಳು/ ಸಂಸ್ಥೆಗಳಿಗೆ ಮಾನ್ಯತೆ ಹಾಗೂ ಸಲಗ್ನತೆ ನೀಡುವುದು
• ಪ್ರಾಣಿಗಳಿಗಾಗಿ ಶೆಡ್ಡುಗಳು, ನೀರಿನ ತೊಟ್ಟಿಗಳ ನಿರ್ಮಾಣವನ್ನು ಪ್ರೋತ್ಸಾಹಿಸುವುದು
• ಪ್ರಾಣಿಗಳನ್ನು ಕರುಣೆಯಿಂದ ನೋಡಿಕೊಳ್ಳಲು ಸಾರ್ವಜನಿಕರಲ್ಲಿಅರಿವು ಮೂಡಿಸುವುದು
• ಪ್ರಾಣಿಗಳಿಗೆ ಸಾಗಾಣಿಕೆ, ಪ್ರಾಣಿಗಳಿಗೆ ಉಂಟಾಗುವಅನವಶ್ಯಕ ನೋವು ಅಥವಾಯಾತನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿಕ್ರಮ ಕೈಗೊಳ್ಳುವುದು
ಮಂಡಳಿಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಅಡಿಯಲ್ಲಿ ಈ ಎಲ್ಲ ಕಾರ್ಯಗಳು ನಡೆಯಲಿವೆ.
ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರಾಣಿದಯಾ ಸಂಘಗಳ ಅಧ್ಯಕ್ಷರಾಗಿದ್ದು, ಪಶುಸಂಗೋಪನೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಮಂಡಳಿಗೆ ವಿವಿಧ ಕ್ಷೇತ್ರಗಳ ಅನುಭವಿಗಳನ್ನು ಸದಸ್ಯರನ್ನಾಗಿ ನೇಮಿಸಿದ್ದು, ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು, ಪ್ರಾಣಿಗಳ ಯೋಗಕ್ಷೇಮಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಪ್ರಾಣಿಗಳಿಗೆ ಯಾರಿಂದಲೂ, ಯಾವುದೇರೀತಿಯ ನೋವು, ಯಾತನೆ ಸಂಭವಿಸುವುದನ್ನು ತಡೆಯಬೇಕು ಎಂದು ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತರಾದ ನಟೇಶ್, ನಿರ್ದೇಶಕರಾದಎಂ.ಟಿ. ಮಂಜುನಾಥ ಹಾಗೂ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯ ಎಲ್ಲ ಸದಸ್ಯರು ಹಾಜರಿದ್ದರು.
ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯ ಸದಸ್ಯರು
ಸಭೆ ಸದಸ್ಯರು:
ಶ್ರೀ ವಿ. ಸುನೀಲ್‌ಕುಮಾರ್, ಕಾರ್ಕಳ
ರಾಮಪ್ಪಎಸ್. ಲಮಾಣಿ, ಶಿರಹಟ್ಟಿ
ನಿವೃತ್ತ ನ್ಯಾಯಾಧೀಶರು:
ಅಶೋಕ ಹಿಂಚಗೇರಿ
ಪ್ರಾಣಿಕಲ್ಯಾಣಕಾರ್ಯಕರ್ತರು:
ಶಿವಾನಂದ ಎಂ.ಡಂಬಳ, ಬೆಂಗಳೂರು.
ಡಾ: ಸೋನಾಲಿ ಸಮೀರ ಸರ್ನೊಬಾಟ್, ಬೆಳಗಾವಿ.
ವಸಂತಕುಮಾರ್, ವಕೀಲರು, ಔರಾದ್, ಬೀದರ್.
ಎಸ್‌ಪಿಸಿಎ ಸದಸ್ಯರು:
ಎಸ್.ಕೆ.ಮಿತ್ತಲ್, ಮೈಸೂರು.
ಹುಣಚಿರಾಯ ಮೋಟಗಿ, ಕಲಬುರಗಿ.
ಗೋಶಾಲ ಪ್ರಮುಖರು:
ಡಾ: ಕೃಷ್ಣಮೂರ್ತಿ, ರಾಮಚಂದ್ರಾಪುರ ಮಠ.
ಡಾ: ರಮೇಶ್‌ದೇವಕಟ್ಟೆ, ಔರಾದ್‌ತಾಲ್ಲೂಕು, ಬೀದರ್‌ಜಿಲ್ಲೆ.
ಜೀವನ್, ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು.
ವಿನಯ ಶೆಟ್ಟಿ, ಮಂಗಳೂರು.
key words : karnataka-bangalore-prabhu-cowhan-minister