ಬೆಂಗಳೂರು, ಜೂ.06, 2020 : ( www.justkannada.in news ) ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಪರಿಕಲ್ಪನೆ ಅಡಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ,ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳನ್ನು ವಿಲೀನ ಗೊಳಿಸಲು ಶಿಪಾರಸ್ಸು ಮಾಡಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ಪತ್ರಕರ್ತರ ಜತೆ ಮಾತನಾಡಿದ ಸಚಿವ ಸಿ.ಟಿ.ರವಿ ಹೇಳಿದಿಷ್ಟು…
ಅನವಶ್ಯಕ ಹುದ್ದೆ ಗಳನ್ನು ರದ್ದು ಮಾಡಿ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಟೂರಿಸ್ಟ್ ವಾಹನಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.೧೦೦ರಷ್ಟು ವಾಹನ ತೆರಿಗೆ ಘೋಷಣೆ ಮಾಡಲಾಗಿತ್ತು. ಈಗ ಜೂನ್ ತಿಂಗಳಲ್ಲಿ ಶೇ.೫೦ರಷ್ಟು ವಾಹನ ತೆರಿಗೆ ಕಡಿತ ಮಾಡಲು ನಿರ್ಧಾರ ಮಾಡಿದ್ದೇವೆ. ಕರ್ನಾಟಕಕ್ಕೆ ಬರುವ ಇತರೆ ರಾಜ್ಯಗಳ ವಾಹನಗಳ ಎಂಟ್ರಿ ಟ್ಯಾಕ್ಸ್ ವಿನಾಯಿತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ಇರುವ ವಿನಾಯಿತಿ ಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇತರೆ ಭಾಷೆಗಳ ಚಿತ್ರಗಳ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅವಕಾಶ ಕಲ್ಪಿಸಲು ವಿಶೇಷ ಆಸ್ಥೆ ವಹಿಸಲು ತೀರ್ಮಾನ ಮಾಡಿದ್ದೇವೆ.
ಕೊಪ್ಪಳ ಸಮೀಪದ ಬಹದ್ದೂರ ಬಾಂಡ ಗಾಮದಲ್ಲಿ ಬಂಜಾರ ಹೆರಿಟೇಜ್ ವಿಲೇಜ್ ಸ್ಥಾಪಿಸಲು ನಿರ್ಧಾರ. ಬಂಜಾರ ಅಭಿವೃದ್ಧಿ ನಿಗಮ ಮತ್ತು ಕೆ ಎಸ್ ಟಿ ಡಿಸಿ ಸಹಯೋಗದಲ್ಲಿ ಈ ಯೋಜನೆ ಸಾಕಾರ ಆಗಲಿದೆ. ಜತೆಗೆ, ಆದಿವಾಸಿ ಕಲ್ಚರಲ್ ಹೆರಿಟೇಜ್ ಅನ್ನು ರಾಮನಗರದ ಜಾನಪದ ಲೋಪದಲ್ಲಿ ಸ್ಥಾಪನೆ ಮಾಡಲು ನಿರ್ಣಯ.
ಈಗಾಗಲೇ ಸಿಎಂ, ಡಿಸಿಎಂ ಲಕ್ಷ್ಮಣ ಸವದಿ ಜತೆ ಬೆಳಗ್ಗೆ ಪ್ರವಾಸೋದ್ಯಮ ಇಲಾಖೆಯ ಸಭೆ ನಡೆಸಿದ್ದೇನೆ. ಶೇ.೧೦೦ರಷ್ಟು ನಷ್ಟ ಅನುಭವಿಸಿದ ಕ್ಷೇತ್ರ ಎಂದರೆ ಪ್ರವಾಸೋದ್ಯಮ. ಸುಮಾರು ೩೫ ಲಕ್ಷ ಮಂದಿ ಇದನ್ನೇ ಅವಲಂಬಿಸಿದ್ದಾರೆ. ಆದ್ರೆ ಈಗ ರಾಜ್ಯದಲ್ಲಿ ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೇವೆ.
ವಿವಿಧ ಯೋಜನೆಗಳ 30 ಕೋಟಿ ಸಬ್ಸಿಡಿ ಬಾಕಿ ಇದೆ. ಪಾರದರ್ಶಕ ವಾಗಿ ಸಿನಿಯಾರಿಟಿ ಆಧಾರದ ಮೆಲೆ ಸಬ್ಸಿಡಿ ಕೊಡುತ್ತಿದ್ದೇವೆ. ಹೊಸ ಪಾಲಿಸಿಯಲ್ಲಿ ಹಳೆಯ ಸಬ್ಸಿಡಿ ಪಾಲಿಸಿ ಪರಿಷ್ಕರಣೆ ಮಾಡುತ್ತೇವೆ.
oooo
KEY WORDS : Karnataka-bjp-c.t.ravi-minister-tourism-information
–