ಬೆಂಗಳೂರು, ಮಾರ್ಚ್ 28, 2022(www.justkannada.in) : ಸಮಿಟ್ ಇಂಡಿಯಾ ಈಗ ಟೆಕ್ ಅವಾಂತ ಗಾರ್ಡ್ (ಟ್ಯಾಗ ) (Tech Avant Garde) ಸಹಯೋಗದೊಂದಿಗೆ ಆಯೋಜಿಸಿದ ಶೈಕ್ಷಣಿಕ ಶೃಂಗ ‘ವಸುದೈವ ಕುಟುಂಬಕಂ ಎಜುಕೇಶನ್ ಸಮಿಟ್’ (Vasudhaiva Kutumbakam Education Summit 2022) ಕಾರ್ಯಕ್ರಮದ ವಾರಗಳ ಸಭೆಗಳು ನಡೆಯುತ್ತಿದ್ದು,12ನೇ ವಾರದ ಶೃಂಗಸಭೆಯ ವಿಷಯ “ಮಿಶ್ರ ಶಿಕ್ಷಣ ಪದ್ಧತಿ ಮಾದರಿ ಅಧ್ಯಯನ” ಎಂಬ ವಿಷಯಗಳ ಬಗ್ಗೆ ಒಳನೋಟಗಳಿಂದ ತುಂಬಿದ ಕೆಲವು ಚರ್ಚೆ, ಆಲೋಚನೆಗಳೊಂದಿಗೆ ವಾರದ ಸಭೆ ಹೆಚ್ಚಿನ ಸಂಖ್ಯೆಯ ಶಿಕ್ಷಣತಜ್ಞರು, ಶಿಕ್ಷಕರು ಮತ್ತು ಪೋಷಕರು ಈ ಸಮ್ಮೇಳನಕ್ಕೆ ಹಾಜರಾಗಿದ್ದರು.
ಕಾರ್ಯಕ್ರಮದಲ್ಲಿ ಮಿಶ್ರ ಶಿಕ್ಷಣ ಮಾದರಿಯ ಕಾರ್ಯರೂಪದ ಬಗ್ಗೆ ಹಾಗೂ ಅವುಗಳ ಫಲಾನುಭವಿಗಳನ್ನು ಕರೆತಂದು ಸುದೀರ್ಘ ಚರ್ಚೆ ನಡೆಸಲಾಯಿತು. ಮಿಶ್ರ ಶಿಕ್ಷಣ ಪದ್ಧತಿಯ ಹೇಗೆ ತಮ್ಮ ತಮ್ಮ ಶಾಲೆಗಳಲ್ಲಿ ಅನುಷ್ಠಾನ ಮಾಡಿ ಯಶಸ್ಸನ್ನು ಕಂಡಿದ್ದಾರೆ ಎಂದು ತಿಳಿಸಲಾಯಿತು. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು, ನೂತನ ಶಿಕ್ಷಣ ನೀತಿ ಮತ್ತು ತಂತ್ರಜ್ಞಾನ, ಮಿಶ್ರ ಶಿಕ್ಷಣದ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಸರ್ಕಾರದ ನಡೆಯನ್ನು ತಿಳಿಸಿದರು.
ನೂತನ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ಸಚಿವ ಸಿ ಎನ್ ಅಶ್ವಥ್ ನಾರಾಯಣ್, ಐಟಿ/ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ” ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ನಿರ್ದೇಶನದಲ್ಲಿ ಮತ್ತು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಡೀ ಭಾರತದಲ್ಲಿ ಮೊದಲ ಬಾರಿಗೆ ನೂತನ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತಿದೆ, ಈ ಯೋಜನೆ ಮೂಲಕ ಗುಣಮಟ್ಟದ ಶಿಕ್ಷಣ ಹಾಗೂ ಮುಕ್ತ ಅಧ್ಯಯನಕ್ಕೆ ಅವಕಾಶ ನೀಡಲಾಗುತ್ತದೆ, ಇದರಿಂದ ಕೌಶಲ್ಯಾಧಾರಿತ ಯುವಜನತೆ ನಿರ್ಮಾಣ ಮತ್ತು ಉದ್ಯೋಗ ಸೃಷ್ಟಿಗೆ ಕರ್ನಾಟಕ ಅಣಿಯಾಗುತ್ತದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉಜ್ವಲ ಭವಿಷ್ಯದತ್ತ ಕರ್ನಾಟಕ ಸಾಗುತ್ತಿದೆ, ಮಿಶ್ರ ಶಿಕ್ಷಣ ಪದ್ಧತಿಯು ಕ್ರಾಂತಿಕಾರಕ ಬೆಳವಣಿಗೆಯಾಗಿದ್ದು ಮುಕ್ತ ಅಧ್ಯಯನ ಕ್ಷೇತ್ರವನ್ನು ನಿರ್ಮಾಣ ಮಾಡಿದೆ ” ಎಂದು ತಿಳಿಸಿದರು.
ಮಿಶ್ರ ಶಿಕ್ಷಣದ ಬಗ್ಗೆ ಮಾತನಾಡಿದ ಪ್ರಶಾಂತ್ ಝಾ, ತರಬೇತಿ ಮುಖ್ಯಸ್ಥರು, ಟೆಕ್ ಅವಂತ್ ಗಾರ್ಡ್, ಬೆಂಗಳೂರು, “ಡಿ.ಟಿ.ಎಚ್.ಎಲ್. ಎಂದರೆ ಡಿಜಿಟಲ್ ಟೆಕ್ನೋಲಜಿ ಹೋಲಿಸ್ಟಿಕ್ ಲರ್ನಿಂಗ್, ಇವುಗಳಲ್ಲಿ ಹಂತಹಂತವಾದ ಕಲಿಕೆಗಳು ಇರುತ್ತವೆ, ಶಾಲೆ ವ್ಯವಸ್ಥಾಪಕರಿಂದ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಎಲ್ಲರಿಗೂ ತಂತ್ರಜ್ಞಾನದ ವೇದಿಕೆಯಲ್ಲಿ ಶಿಕ್ಷಣದ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲಿಗೆ ಶಾಲೆ ವ್ಯವಸ್ಥಾಪಕರು ಮತ್ತು ಶಿಕ್ಷಕರಿಗೆ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಮೂಲಭೂತವಾಗಿ ತಂತ್ರಜ್ಞಾನದ ಉಪಕರಣಗಳ ಬಗ್ಗೆ ಮಾಹಿತಿ ನೀಡಿ ನಂತರ ವಿದ್ಯಾರ್ಥಿ ಖಾತೆ, ಶಿಕ್ಷಕರ ಖಾತೆ, ವ್ಯವಸ್ಥಾಪಕರ ಖಾತೆ, ಪೋಷಕರ ಖಾತೆ, ಬಗ್ಗೆ ಅರಿವು ನೀಡಲಾಗುತ್ತದೆ. ಮತ್ತು ಶಿಕ್ಷಕರನ್ನು ನೂತನ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ, ಈ ನಿಟ್ಟಿನಲ್ಲಿ ನಾಲೆಜ್ ಕಾನ್ ಕ್ಲೇವ್ ಮಾಡಿದಾಗ 72 ಶಾಲೆಗಳಿಂದ, 72 ದಿನಗಳು, 14 ನುರಿತ ಶಿಕ್ಷಕರಿಂದ ದಿನಕ್ಕೆ 2000 ಶಿಕ್ಷಕರಂತೆ 72 ದಿನಗಳು ತಂತ್ರಜ್ಞಾನದ ಮಾಹಿತಿಯನ್ನು ತಿಳಿಸಿಕೊಡಲಾಯಿತು.
ಮಿಶ್ರ ಶಿಕ್ಷಣವೆಂದರೆ ತಂತ್ರಜ್ಞಾನಕ್ಕೆ ಸೀಮಿತವಾದುದಲ್ಲ, ಅದನ್ನು ಮೀರಿದ್ದು ಬಹು ಶಿಸ್ತಿನ, ಬಹು ಆಯಾಮದ ಕಲಿಕೆ, ಭಾರತದ 95 ಲಕ್ಷದ ಶಿಕ್ಷಕರಲ್ಲಿ 25 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ, ಇನ್ನುಳಿದ ಅಷ್ಟು ಶಿಕ್ಷಕರಿಗೂ ಮಿಶ್ರ ಶಿಕ್ಷಣ ಮಾದರಿಯ ಶಿಕ್ಷಣ ಪದ್ಧತಿಯನ್ನು ಕಲಿಸಿ ಭಾರತವನ್ನು ಶಿಕ್ಷಣದ ವಿಶ್ವ ಗುರುವನ್ನಾಗಿ ಮಾಡುವುದೇ ನಮ್ಮ ಉದ್ದೇಶ” ಎಂದು ಹೇಳಿದರು.
ಟೆಕ್ ಅವಾಂತ ಗಾರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿ ಸೇಠ್ ಮಾತನಾಡಿ,”ಟೆಕ್ ಅವಾಂತ ಗಾರ್ಡ್ ತನ್ನ ಕಾರ್ಯ ನಿರ್ವಹಿಸಿದೆ, ಮತ್ತು ನಿರ್ವಹಿಸುತ್ತದೆ. ಭಾರತವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತದೆ, ಮಿಶ್ರ ಶಿಕ್ಷಣ ಪದ್ಧತಿ ಮತ್ತು ಕೌಶಲ್ಯಾಧಾರಿತ ನೂತನ ಶಿಕ್ಷಣ ನೀತಿ ಜಾರಿಗೆ ಸದೃಢವಾಗಿ ದುಡಿಯುತ್ತದೆ” ಎಂದು ತಿಳಿಸಿದರು.
ಶೃಂಗಕ್ಕೆ ನೋಂದಣಿ ಮಾಡಿಕೊಳ್ಳಲು ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಮಾಹಿತಿಗಾಗಿ ಸಂಪರ್ಕಿಸಿ: https://vasudhaivakutumbakam.live/
Key words: Karnataka – bright future- Minister – C N. Ashwath Narayan
ENGLISH SUMMARY…
Karnataka towards a bright future. Minister Dr. C.N. Ashwathanarayana
Bengaluru, March 28, 2022 (www.justkannada.in): The Summit India, in association with the Tech Avant-Garde, has organized the ‘Vasudaiva Kutumbakam Education Summit-2022.’ The 12th meeting in the series of the summit on the topic, “Mixed Educational System Model Research,” was held today. Today’s session witnessed the participation of education experts, teachers, and parents in large numbers.
A detailed discussion on the functioning of the mixed educational model and its benefits were discussed in today’s meet.
Speaking on the occasion, IT/BT and Science and Technology Minister Dr. C.N. Ashwathanarayana said, “The new NEP that is developed by the Govt. of India, under the guidance of Prime Minister Narendra Modi is being implemented in Karnataka under the guidance of Chief Minister Basavaraj Bommai. We are the first state to implement it in the entire country. Opportunity is being provided to the students to obtain quality education and research through this program. The new NEP helps in producing skill-based learning and job-ready youth. By taking the right decision at the right time our state is treading towards a brighter future, the mixed educational system is a revolutionary development, which has created a liberal research environment,” he observed.
Keywords: IT/BT Minister/ Dr. C.N. Ashwathanarayana/ Basavaraj Bommai/ new NEP