ಮೈಸೂರು,ನ,27,2019(www.justkannada.in): ಉಪಚುನಾವಣೆಯ ನಂತರ ಕರ್ನಾಟಕದಲ್ಲೂ ಬದಲಾವಣೆಯಾಗಬಹುದು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಏನು ನಿರ್ಧಾರ ತೆಗೆದು ಕೊಳ್ತಾರೆ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನೀಡಿರುವ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಉಪಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಮಹರಾಷ್ಟ್ರ ರಾಜಕಾರಣ ಕರ್ನಾಟಕಕ್ಕೂ ಅನ್ವಯವಾಗಬಹುದು. ಫಲಿತಾಂಶದ ಬಳಿಕ ರಾಜ್ಯದಲ್ಲೂ ಬದಲಾವಣೆಯಾಗಬಹುದು. ಆದರೆ ಸೋನಿಯಾ ಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಬೇಕಿದೆ ಎಂದು ತಿಳಿಸಿದರು.
ಮತಕ್ಕಾಗಿ ಹೆಚ್.ವಿಶ್ವನಾಥ್ ನಮ್ಮನ್ನ ಹೊಗಳಿದ್ದಾರೆ….
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ಡಿ ದೇವೇಗೌಡರು, ಹೆಚ್.ವಿಶ್ವನಾಥ್ ಒಬ್ಬ ಸೀಜನ್ ರಾಜಕಾರಣಿ. ಅವರ ಮನಸ್ಸಿನಲ್ಲಿ ಇರೋದೆ ಬೇರೆ. ಹೊರಗಡೆ ಮಾತನಾಡೋದೆ ಬೇರೆ. ಜನರಿಗೆ ಇದು ಅರ್ಥವಾಗುತ್ತದೆ. ಹೆಚ್.ವಿಶ್ವನಾಥ್ ನನ್ನನ್ನ ಮತ್ತು ಸಿದ್ಧರಾಮಯ್ಯರನ್ನ ಹೊಗಳಿದ್ದಾರೆ. ಮತಕ್ಕಾಗಿ ನಮ್ಮನ್ನ ಹೊಗಳಿದ್ದಾರೆ. ಈಗ ನಮ್ಮಂತಹ ನಾಯಕರನ್ನ ಟೀಕೆ ಮಾಡಿದರೇ ತೊಂದರೆಯಾಗುತ್ತೆ ಎಂದು ಮತಕ್ಕಾಗಿ ಹೀಗೆ ಹೊಗಳಿದ್ದಾರೆ. ಇದು ಜನರಿಗೂ ಗೊತ್ತು ಎಂದು ಕಿಡಿಕಾರಿದರು.
Key words: Karnataka – change-Sonia Gandhi-decision-mysore-former PM-HD Deve Gowda