ಕಲಬುರಗಿ, ಜೂ.23, 2019 (www.justkannada.in news): ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ವೆಚ್ಚ ಸಖತ್ ಕಾಸ್ಟ್ಲೀಯಾಗಿದ್ದು ರಾಜಕೀಯ ವಲಯದಲ್ಲಿ ಟೀಕೆ ಕೇಳಿ ಬಂದಿದೆ.
ಸರ್ಕಾರಿ ಶಾಲೆಯಲ್ಲಿ ಹಾಸಿಗೆ ಇಲ್ಲದೆ ಕೇವಲ ಚಾಪೆಯಲ್ಲೇ ಮಲಗಿ ಸರಳತೆ ಮೆರೆದಿದ್ದ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಭಾರತೀಯ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನ್ಯೂಸ್ ಆಗಿತ್ತು. ಅದೇ ರೀತಿ ಇದೀಗ ಸಿಎಂ ಅವರ ಒಂದು ದಿನದ ಗ್ರಾಮ ವಾಸ್ಯವ್ಯಕ್ಕೆ ವೆಚ್ಚ ಮಾಡಿದ ಹಣದ ನ್ಯೂಸ್ ಸಹ ಅಷ್ಟೆ ಟ್ರೆಂಡಿಂಗ್ ಆಗುತ್ತಿದೆ.
ಚಂಡರಕಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯದ 24 ಗಂಟೆಗಳಿಗೆ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ ರುಪಾಯಿ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ವೆಚ್ಚವಾದ ಹಣದ ವಿವರ ಹೀಗಿದೆ….
ಊಟದ ವ್ಯವಸ್ಥೆಗೆ ಸುಮಾರು 25 ಲಕ್ಷ ರೂ, ಕಚೇರಿಗಳ ಶಿಫ್ಟ್ ಗೆ ಮತ್ತು ಅರ್ಜಿ ಸ್ವೀಕರಿಸುವ ಕೌಂಟರ್ ಗೆ 25 ಲಕ್ಷ ರೂ. ಸುಮಾರು 25 ಸಾವಿರ ಮಂದಿಗೆ ಊಟ ತಯಾರಿಸಲಾಗಿತ್ತು, ಹಾಗೂ ರಾತ್ರಿ ಊಟಕ್ಕೆ 500 ಮಂದಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಇದ್ದರು, ಇದೇ 25 ಲಕ್ಷ ಹಣದಲ್ಲಿ ಬೆಳಗಿನ ಉಪಹಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು.
ಇನ್ನುಳಿದ 50 ಲಕ್ಷ ಹಣವನ್ನು ಕುಮಾರಸ್ವಾಮಿ ಭಾಗವಹಿಸುವ ವೇದಿಕೆ, ಜನತಾ ದರ್ಶನ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಲಾಗಿದೆ,
key words : karnataka-cm-kumaraswamy-gramavasthvya-spend-one.crore