ಉಡುಪಿ,ಮೇ,11,2022(www.justkannada.in): ಇಡೀ ದೇಶದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಇರುವುದು ಕರ್ನಾಟಕದಲ್ಲಿ. ಧೇಶದಲ್ಲಿ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆರೋಪಿಸಿದರು.
ಉಡುಪಿಯಲ್ಲಿ ಇಂದು ಮಾತನಾಡಿದ ಆರ್.ಧೃವನಾರಾಯಣ್, ಕಾಂಗ್ರೆಸ್ ಮುಕ್ತ ಮಾಡುವುದಾಗಿ ಬಿಜೆಪಿ ಹಗಲು ಗನಸು ಕಾಣುತ್ತಿದೆ. ನಳೀನ್ ಕುಮಾರ್ ಕಟೀಲ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅರ್ಕಾವತಿ ಡೀನೋಟಿಫಕೇಷನ್ ನಲ್ಲಿ ಸಿದ್ಧರಾಮಯ್ಯ ಜೈಲಿಗೆ ಹೋಗ್ತಾರೆ ಅಂತಾರೆ. ಬಿಜೆಪಿಗೆ ತಾಕತ್ತಿದ್ದರೇ ಸಿದ್ದರಾಮಯ್ಯರನ್ನ ಬಂಧಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಯಾವುದೇ ಕಪ್ಪುಚುಕ್ಕೆ ಇಲ್ಲದ ಆಡಳಿತಗಾರ. ನಳೀನ್ ಕುಮಾರ್ ಕಟೀಲ್ ಅಸಮರ್ಥ ಅಧ್ಯಕ್ಷ. ಬಿಜೆಪಿ ಮನೆಗಳಲ್ಲಿ ದೊಡ್ಡ ಹೆಗ್ಗಣಗಳಿವೆ, ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಡಿಕೆಶಿ ಜೈಲಿಗೆ ಹೋಗಿದ್ದರು ಎಂದು ಅಪಾದನೆ ಮಾಡುತ್ತಾರೆ. ಅಮಿತ್ ಶಾ, ಮಾಜಿ ಸಿಎಂ ಬಿಎಸ್ ವೈ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ ಜೈಲಿಗೆ ಹೋಗಿದ್ದರು. ಬಿಜೆಪಿಯವರಿಗೆ ಎಸ್.ಸಿ ಮತ್ತು ಎಸ್ ಟಿ ಸಮುದಾಯದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
Key words: Karnataka – corruption – country-KPCC President- R. Dhruvanarayan.