ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ಅಶೋಕ್, ಸುರೇಶ್‌ಕುಮಾರ್, ಡಾ.ಕೆ.ಸುಧಾಕರ್‌ ಇವರಲ್ಲಿ ಯಾರು ಉಸ್ತುವಾರಿಗಳು : ಸಿದ್ದರಾಮಯ್ಯ ಪ್ರಶ್ನೆ.

 

ಬೆಂಗಳೂರು, ಜು.03, 2020 : (www.justkannada.in news) ಕೋವಿಡ್-19 ರೋಗ ದೇಶದಲ್ಲಿ ಮತ್ತು ರಾಜ್ಯದಲ್ಲಿ ದೊಡ್ಡ ಆತಂಕ ಉಂಟು ಮಾಡಿದೆ. ಕಳೆದ 5 ತಿಂಗಳಿಂದ ಕೊರೊನಾ ರೋಗದ ಬಗ್ಗೆ, ನಿಯಂತ್ರಣದ ಬಗ್ಗೆ, ಅದರಿಂದ ಸಾವಿಗೀಡಾದವರ ಬಗ್ಗೆ, ಶವಸಂಸ್ಕಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಸಚಿವರ ನಡುವೆ ಸಮನ್ವಯತೆ ಕೊರತೆಯಿಂದ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೇಳಿದಿಷ್ಟು….

ಚೀನಾದಿಂದ ಪ್ರಾರಂಭವಾಗಿ, ಎಲ್ಲಾ ದೇಶಗಳಲ್ಲಿ ಹರಡಿದೆ. ಕಳೆದ 3 ತಿಂಗಳ ಹಿಂದೆ ಭಾರತ ದೇಶದಲ್ಲಿ, ಮಾರ್ಚ್ 24 ಲಾಕ್‌ಡೌನ್ ಆಯಿತು. 534 ಸೋಂಕಿತರು ಇದ್ದರು. ಸಾವನ್ನಪ್ಪಿದವರು 10 ಜನ ಇದ್ದರು. ಯುರೋಪ್ ಅಮೆರಿಕಾ ದೇಶಗಳಲ್ಲಿ ಬಹಳ ಹೆಚ್ಚಾಗಿತ್ತು. ನಾವು ಬಹಳ ಕಡಿಮೆ ಇದ್ವೀ. ಮಾರ್ಚ್ 24 ರ ಮುಂಚೆ 4,25,000 ಯುರೋಪ್ ಅಮೆರಿಕಾದಲ್ಲಿ ಸೋಂಕಿತರು ಇದ್ದರು.
ಭಾರತಕ್ಕೆ ಬಹಳ ಸಮಯ ಇತ್ತು. ಸೋಂಕನ್ನು ಎದುರಿಸಲು ಬಹಳ ಸಮಯ ಇತ್ತು. ಇವರ ಬೇಜವಾಬ್ದಾರಿತನದಿಂದ, ನಿರ್ಲಕ್ಷ್ಯದಿಂದ, ಸರಿಯಾದ ಸಿದ್ಧತೆ ಇಲ್ಲದ ಕಾರಣ, ನಾವು ಜಗತ್ತಿನ 4 ನೇ ಸ್ಥಾನದಲ್ಲಿದ್ದೇವೆ. ಈಗ ಸುಮಾರು 6,25,000 ಸಾವಿರ ಸೋಂಕಿತರು ಆಗಿದ್ದಾರೆ.

jk-logo-justkannada-logo
ಶವಸಂಸ್ಕಾರ ಹೇಗೆ ಮಾಡಬೇಕು? ಎಂಬುದನ್ನು ತಿಳಿಸಬೇಕು. ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ. ಗೌರವವು ಇಲ್ಲ. ಶವಸಂಸ್ಕಾರದ ಸಮಯದಲ್ಲಿ ಆದ ಘಟನೆಯ ಜವಾಬ್ದಾರಿ ಆರೋಗ್ಯ ಸಚಿವರು ತೆಗೆದುಕೊಳ್ಳಬೇಕು. ಸಿಎಂ ಯಡಿಯೂರಪ್ಪರ ಮಾತು ಅವರು ಕೇಳ್ತಾರೆ ಅನ್ನೋದು ಗೊತ್ತಿಲ್ಲ. ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ಅಶೋಕ್, ಸುರೇಶ್‌ಕುಮಾರ್, ಡಾ.ಕೆ.ಸುಧಾಕರ್‌ ಇವರಲ್ಲಿ ಯಾರು ಉಸ್ತುವಾರಿಗಳು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಡಾ.ಕೆ.ಸುಧಾಕರ್ ಬಳಿಯಿದ್ದ ಖಾತೆ ಆರ್.ಅಶೋಕ್‌ಗೆ ಕೊಟ್ಟಿದ್ದು ಏಕೆ?ಅದಕ್ಕೆ ಸುಧಾಕರ್ ಗಲಾಟೆ ಮಾಡುತ್ತಾ ಕುಳಿತಿದ್ದಾರೆ ಎಂದರು.

ನಮ್ಮಲ್ಲಿ ಪರೀಕ್ಷೆಗಳು ಸರಿಯಾಗಿ ಆಗುತ್ತಿಲ್ಲ. ಬೇರೆ ದೇಶಗಳಲ್ಲಿ ಹೋಲಿಕೆ ಮಾಡಿದ್ರೆ, ನಮ್ಮಲ್ಲಿ ಪರೀಕ್ಷೆಗಳು ಆಗುತ್ತಿರುವುದು ಬಹಳ ಕಡಿಮೆ. ಅಮೆರಿಕದಲ್ಲಿ 10 ಲಕ್ಷ ಜನರಿಗೆ 1 ಲಕ್ಷ ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ಇಟಲಿಯಲ್ಲಿ 10 ಲಕ್ಷಕ್ಕೆ 90 ಸಾವಿರ, ಬೆಲ್ಜಿಯಂನಲ್ಲಿ 10 ಲಕ್ಷಕ್ಕೆ 81 ಸಾವಿರ. ಕರ್ನಾಟಕದಲ್ಲಿ 10 ಲಕ್ಷಕ್ಕೆ 6741 ಮಂದಿಗೆ ಪರೀಕ್ಷೆ. ಭಾರತದಲ್ಲಿ 10 ಲಕ್ಷಕ್ಕೆ 69740 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಿದ್ಧರಾಮಯ್ಯ ಹೇಳಿದರು.

ಈ ವೈರಸ್ ದೇಹಕ್ಕೆ ಸೇರಿ, ಹೆಚ್ಚಾಗುತ್ತಾ ಹೋಗುತ್ತೆ. ಗಾಳಿಯಲ್ಲಿ ಈ ವೈರಸ್ ಪಸರಣವಾಗುವುದಿಲ್ಲ. ಅಂತರದಲ್ಲಿ ಇದ್ದರೇ ಆ ವೈರಸ್ ಪಸರಣವಾಗುವುದಿಲ್ಲ. ಅದು ನಮಗೆ ತಗುಲದ ಹಾಕದೇ ನೋಡಿಕೊಳ್ಳಬೇಕು ಅಷ್ಟೇ. ಒಬ್ಬರಿಂದ ಒಬ್ಬರಿಗೆ ಹರಡುವ ರೋಗ ಇದಲ್ಲ. ಜನ ಸತ್ತಾಗ ಶವಸಂಸ್ಕಾರಕ್ಕೂ ಹೆದರುತ್ತಿದ್ದಾರೆ. ಶವಸಂಸ್ಕಾರದ ಬೂದಿ ತೆಗೆದುಕೊಳ್ಳಲು ಜನ ಹೆದರುತ್ತಾರೆ. ಜೀವಕೋಶ ಸತ್ತಾಗ, ಜೀವಿಯೂ ಕೂಡ ಸತ್ತು ಹೋಗುತ್ತದೆ. ಶವದ ಜೊತೆಗೆ ವೈರಸ್ ಕೂಡ ಸಾಯುತ್ತದೆ. ಗ್ಲೌಸ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಅದ್ರೆ, ಸರ್ಕಾರದ ಕಡೆಯಿಂದಲೇ ಅಮಾನುಷವಾಗಿ ಮನುಕುಲಕ್ಕೆ ಅವಮಾನವಾಗಿ ನಡೆದುಕೊಳ್ಳುತ್ತಿದ್ದಾರೆ. ಬಳ್ಳಾರಿಯಲ್ಲಿ ಅವಮಾನವೀಯವಾಗಿ ನಡೆದುಕೊಂಡಿದ್ದಾರೆ. ಸರ್ಕಾರದ ಬೇಜವಾಬ್ದಾರಿತನದಿಂದ ಆಗಿರುವ ಘಟನೆ ಇದು. ಸಿದ್ಧರಾಮಯ್ಯ ಆರೋಪ.

ಮೊದಲೇ ಶವಸಂಸ್ಕಾರದ ಬಗ್ಗೆ ಮಾರ್ಗಸೂಚಿ ಏಕೆ ಹೊರಡಿಸಿಲ್ಲ? ಸರ್ಕಾರಕ್ಕೆ ಸಿದ್ಧರಾಮಯ್ಯ ಆರೋಪ. ಮೃತರ ದೇಹವನ್ನು ತಿಪ್ಪೆಗೆ ಎಸೆದಂತೆ ಎಸೆದು ಹೋಗಿದ್ದಾರೆ. ಆ ವ್ಯಕ್ತಿಗೆ ಏನು ಬೆಲೆ ಕೊಟ್ಟಂತೆ ಆಗುತ್ತದೆ? 6 ಜನರನ್ನು ಸಸ್ಪೆಂಡ್ ಮಾಡ್ತೀನಿ ಅಂದ್ರೆ, ಇದು ಸರೀನಾ? ಸಿದ್ಧರಾಮಯ್ಯ ಪ್ರಶ್ನೆ.
ನಾವು ಈ ರೀತಿ 4 ನೇ ಸ್ಥಾನಕ್ಕೆ ಹೋಗಬೇಕಾದ್ರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಸಿದ್ಧರಾಮಯ್ಯ ನೇರ ಆರೋಪ.

karnataka-covid-siddaramaiha-looty-bjp

ಕೇಂದ್ರ ಮತ್ತು ರಾಜ್ಯ ಏನು ಮಾಡುತ್ತಿದೆ? ಬೇರೆ ದೇಶಗಳಲ್ಲಿ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ ಅಂತಾರೆ. ಇವರ ಬೇಜವಾಬ್ದಾರಿತನದಿಂದಲೇ ಅವಘಢ ಸಂಭವಿಸಿದೆ. ನಮ್ಮಲ್ಲಿ, ನಮ್ಮ ರಾಜ್ಯದಲ್ಲಿ 18,016 ಸತ್ತವರ ಸಂಖ್ಯೆ 272, ಶೇಕಡಾ 2.5% ಯಿಂದ 3% ಮಂದಿ ಸಾವನ್ನಪ್ಪಿದ್ದಾರೆ. ಬಹಳ ಜನರಿಗೆ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಚಿಕಿತ್ಸೆಯೇ ಕೊಡದೇ ಹುಷಾರಾದವರು ಇದ್ದಾರೆ. ಸಿದ್ಧರಾಮಯ್ಯ ಹೇಳಿಕೆ.

ಸುದರ್ಶನ್ ಬಲ್ಲಾಳ್ ಹೇಳಿಕೆಯಲ್ಲಿ ಏನಿದೆ?
ಅವರ ಹೇಳಿಕೆಯ ಪ್ರಕಾರ ಮುಂದೆ ಇದು ಜುಲೈ ಅಂತ್ಯಕ್ಕೆ 40 ಸಾವಿರ ತಲುಪುತ್ತದೆ ಎಂದಿದೆ. ಇದೆಲ್ಲಾ ಸರ್ಕಾರಕ್ಕೆ ಮಾಹಿತಿ ಇದೆ. ತಜ್ಞರ ಸಮಿತಿ ಮಾಡಿಕೊಂಡಿದ್ದಾರೆ. ಇವರಿಗೆ ಮಾಹಿತಿ ಎಲ್ಲವು ಇದೆ. ಅದರೂ ನಿರ್ಲಕ್ಷ್ಯ ಮಾಡಿದ್ದಾರೆ.

oooo

key words : karnataka-covid-siddaramaiha-looty-bjp