ಬೆಂಗಳೂರು, ಜು.03, 2020 : (www.justkannada.in news) ಕರೋನಾ ಸಂಕಷ್ಟದಲ್ಲಿ ವೃತ್ತಿ ಬದುಕು ಆಧಾರಿತ ಸಮುದಾಯಗಳಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ …
ಮುಖ್ಯಮಂತ್ರಿ ಯಡಿಯೂರಪ್ಪ ಅಸಹಾಯಕರು. ಪರಿಹಾರ ಘೋಷಣೆ ಮಾಡಿ ತಿಂಗಳುಗಳು ಕಳೆದಿದೆ. ನಾನು ಮನವಿ ಕೊಟ್ಟು, ಎರಡು ತಿಂಗಳು ಆಯ್ತು. ಮಡಿವಾಳರು, ಅಟೋ ಚಾಲಕರು, ಕ್ಷೌರಿಕರಿಗೆ ಕೊಟ್ಟ ಪರಿಹಾರ ತಲುಪಿದೇಯಾ? ಎಂದು ಪ್ರಶ್ನಿಸಿದರು.
ನನಗೆ ಇರುವ ಮಾಹಿತಿ ಪ್ರಕಾರ 1.5 ಲಕ್ಷ ಜನರಿಗೆ ಪರಿಹಾರ ಸಿಕ್ಕಿದೆ. 7.5 ಲಕ್ಷ ಜನಕ್ಕೆ ಪರಿಹಾರ ಕೊಡಬೇಕಿತ್ತು. ಲಾಕ್‌ಡೌನ್ ಆದೇಶ ಜಾರಿಯಾದಾಗಲೇ ಪರಿಹಾರ ನೀಡಬೇಕಿತ್ತು. ಅದ್ರೆ ಸರ್ಕಾರ ಅದಕ್ಕೂ ಮಾನದಂಡ ಜಾರಿಗೆ ತಂದಿತ್ತು. ಲೈಸೆನ್ಸ್ ಇದ್ದವರಿಗೆ ಮಾತ್ರವಲ್ಲ, ಎಲ್ಲರಿಗೂ ಪರಿಹಾರ ಕೊಡಬೇಕು ಎಂದು ನಾನು ಹೇಳಿದ್ದೇ. ಅದ್ರೆ ಸರ್ಕಾರ ಮಾಡಿದ್ದೇನು..? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
oooo
key words : karnataka-covid-siddaramaiha-looty-bjp