ಬೆಂಗಳೂರು, ಏ.24, 2023 : (www.justkannada.in news ) ರಾಜ್ಯದಲ್ಲಿ ಚುನಾವಣಾ ಅಖಾಡ ಸಂಪೂರ್ಣ ‘ಸ್ಪಷ್ಟ’ವಾಗಿದೆ. ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ಮತದಾನದ ಕದನಕ್ಕೆ ವೇದಿಕೆ ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಇತಿಹಾಸ ಸೃಷ್ಟಿಸಲು ಹರಸಾಹಸ ಮಾಡುತ್ತಿದೆ. ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆ ಏರಲು ತೀವ್ರ ಹೋರಾಟದಲ್ಲಿ ತೊಡಗಿದೆ. ಇನ್ನು ಜೆಡಿಎಸ್ ರಾಜಕೀಯ ಲೆಕ್ಕಾಚಾರದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹವಣಿಸುತ್ತಿದೆ.
ಅಂದಾಜು 5.21 ಕೋಟಿ ಮತದಾರರು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮತ್ತು ಆಯಾ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುತ್ತಾರೆ. ರಾಜ್ಯದ ಚುನಾವಣಾ ಇತಿಹಾಸವನ್ನು ಗಮನಿಸಿದರೆ 1985ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಆಡಳಿತಾರೂಢ ಜನತಾ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತ್ತು. ನಂತರದ ಚುನಾವಣೆಯಲ್ಲಿ, ರಾಜ್ಯವನ್ನು ಆಳಿದ ಯಾವುದೇ ರಾಜಕೀಯ ಪಕ್ಷವು ಆಡಳಿತ ವಿರೋಧಿ ಅಲೆಯಿಂದಾಗಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ರಾಜಕೀಯ ಪರಿಣತರ ಅಭಿಪ್ರಾಯಗಳು, ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮಾಧ್ಯಮ ವರದಿಗಳು ಆಡಳಿತಾರೂಢ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಸೂಚಿಸುತ್ತಿವೆ. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನಿರೀಕ್ಷಿತ ನಿರಾಶಾದಾಯಕ ಪ್ರದರ್ಶನದ ವಾದವನ್ನು ಬಲಪಡಿಸುವ ಇತರ ಅಂಶಗಳೆಂದರೆ, ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮತ್ತು ಇತರ ಕೆಲವು ನಾಯಕರು ಪಕ್ಷವನ್ನು ನಿರ್ಗಮಿಸಿರುವುದು. ಲಿಂಗಾಯತ ನಾಯಕರಿಗೆ ಬಿಜೆಪಿ ಮಾಡಿದ ಅನ್ಯಾಯ ಮತ್ತು ಉದ್ದೇಶಪೂರ್ವಕವಾಗಿ ಲಿಂಗಾಯತ ಸಮುದಾಯದ ಗೌರವಾನ್ವಿತ ನಾಯಕ ಬಿಎಸ್ ಯಡಿಯೂರಪ್ಪನವರಿಗೆ ಮಾಡಿದ ಅವಮಾನ, ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನಿರಾಕರಣೆ ಇದುವರೆಗೆ ಸುರಕ್ಷಿತ ಪಕ್ಷದ ಪರವಾಗಿ ನಿಂತಿದ್ದ ಸಮುದಾಯದ ಸದಸ್ಯರನ್ನು ಕೆರಳಿಸಿದೆ. ಇದು ವಿರೋಧಿ ಪಕ್ಷಗಳು ಅಧಿಕಾರಕ್ಕೆ ಏರಲು ಸಹಾಯ ಮಾಡಲಿದೆ.
ಕರ್ನಾಟಕ ಖಂಡಿತವಾಗಿಯೂ ಕೇಸರಿ ಬ್ರಿಗೇಡ್’ನ ಪ್ರಮುಖ ಕೇಂದ್ರ. 2024 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಷ ಮತ್ತಷ್ಟು ಪ್ರಯತ್ನ ಮಾಡಬೇಕಾಗಿದೆ. 2019 ರಲ್ಲಿ ಬಿಜೆಪಿ 28 ರಲ್ಲಿ 26 ಸ್ಥಾನಗಳಲ್ಲಿ ಗೆದ್ದು ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತ್ತು. ಇನ್ನು ಮಂಡ್ಯದಲ್ಲಿ ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಸೋಲಿಸಿ ಜಯಗಳಿಸಿದ ಏಕೈಕ ಸ್ವತಂತ್ರ ಅಭ್ಯರ್ಥಿ ಸುಮಲತಾ ಕೂಡ ಕಮಲ ಪಾಳೆಯ ಸೇರಿರುವುದು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಸಂಸತ್ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಹಿನ್ನಡೆ ನರೇಂದ್ರ ಮೋದಿ ಪಕ್ಷಕ್ಕೆ ಹಿನ್ನಡೆ ಎಂದು ಸಾಬೀತುಪಡಿಸುತ್ತದೆ.
ಭ್ರಷ್ಟಾಚಾರ ಆರೋಪಗಳು, ಸಿಡಿ ಹಗರಣಗಳು, ಆಂತರಿಕ ಕಚ್ಚಾಟಗಳು ಆಡಳಿತಾರೂಢ ಬಿಜೆಪಿಯನ್ನು ಬೆಚ್ಚಿಬೀಳಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕಮಲ ಪಕ್ಷದ ಮೇಲೆ ದಾಳಿ ಮಾಡಲು ಈ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ಇನ್ನು ಬಿಜೆಪಿ ತಾನು ಲಿಂಗಾಯತರ ಪಕ್ಷ, ತಾನು ಆ ಸಮುದಾಯಕ್ಕೆ ನಿಷ್ಠನಾಗಿರುತ್ತೇನೆ ಮತ್ತು ಅಧಿಕಾರಕ್ಕೆ ಬಂದರೆ ಲಿಂಗಾಯತ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಮನವರಿಕೆ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದೆ. ಬಿಜೆಪಿಯ ಈ ಲಿಂಗಾಯತ ಕಾರ್ಡ್ ಆಟ ಬಹುಸಂಖ್ಯಾತರಾದ ಒಬಿಸಿ, ದಲಿತರನ್ನು ಕೆರಳಿಸಿದೆ. ಜತೆಗೆ ಬಿಜೆಪಿಯ ಹಿಜಾಬ್, ಹಲಾಲ್, ಅಜಾನ್ ಮತ್ತು ಇತರ ಭಾವನಾತ್ಮಕ ವಿಷಯಗಳು ಪಕ್ಷದ ಬಗೆಗೆ ಮುಸ್ಲಿಮರು ಮುನಿಸಿಕೊಳ್ಳುವಂತೆ ಮಾಡಿದೆ.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದರ ಮೇಲೆ ಕೈ ಪಕ್ಷದ ಗಮನ ಕೇಂದ್ರೀಕರಿಸಿದೆ ಎಂಬ ಅಭಿಪ್ರಾಯ ಜನ ಸಾಮಾನ್ಯರಲ್ಲಿ ಕಂಡುಬಂದಿದೆ. ಜತೆಗೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಪ್ರಚಾರದ ಪ್ರಮುಖ ಸಮಯವನ್ನು ಉನ್ನತ ಹುದ್ದೆ ಪಡೆಯುವತ್ತ ತಮ್ಮ ಒಲವು ವ್ಯಕ್ತಪಡಿಸಲು ಮೀಸಲಿಟ್ಟರು. ಗುಂಪುಗಾರಿಕೆ, ಬಂಡಾಯದಿಂದ ಕಾಂಗ್ರೆಸ್ ಮುಕ್ತವಾಗಿಲ್ಲ.
ಸಹಜವಾಗಿಯೇ ಜೆಡಿಎಸ್ ಮುಖ್ಯ ಉದ್ದೇಶ, ಪ್ರಾರ್ಥನೆ ಒಂದೇ ಆಗಿದೆ ಅದು ಸ್ಪಷ್ಟ ಬಹುಮತ ಬಾರದಿರುವುದು. ಇನ್ನು ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ಪ್ರಬಲ ಆಕಾಂಕ್ಷಿಯಾಗಿದ್ದ ಹಾಸನ ಸೀಟು ಟಿಕೆಟ್ ವಿಚಾರದಲ್ಲಿ ಕುಟುಂಬದಲ್ಲಿ ಎದ್ದಿದ್ದ ಬಂಡಾಯವನ್ನು ಎದುರಿಸುವಲ್ಲಿ ಹೆಚ್ ಡಿ ದೇವೇಗೌಡ ಕುಟುಂಬ ಯಶಸ್ವಿಯಾಗಿದೆ. ಆದರೆ, ಕುಮಾರಸ್ವಾಮಿ ಅವರು ರೇವಣ್ಣ ಮತ್ತು ಭವಾನಿ ಅವರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಪಕ್ಷ ನಿಷ್ಠ ಸ್ವರೂಪ್ ಪ್ರಕಾಶ್ ಅವರನ್ನು ಚುನಾವಣಾ ಕಣಕ್ಕಿಳಿಸುವ ಮೂಲಕ ಕುಟುಂಬ ರಾಜಕಾರಣದ ಪಟ್ಟವನ್ನು ಕೊಂಚ ದೂರವಿಟ್ಟಿದ್ದಾರೆ.
ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ದೇವೇಗೌಡರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 2018ರಲ್ಲಿ ಒಕ್ಕಲಿಗ ಬೆಲ್ಟ್ನಲ್ಲಿ ಜೆಡಿಎಸ್ 30 ಸ್ಥಾನಗಳನ್ನು ಗೆದ್ದು ಒಟ್ಟು 37 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಒಕ್ಕಲಿಗ ಸಮುದಾಯದವರು ಕಾಂಗ್ರೆಸ್ ಬೆಂಬಲಿಸುವಂತೆ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ. ಒಕ್ಕಲಿಗರು ಶಿವಕುಮಾರ್ ಮನವಿಗೆ ಮಣಿದರೆ, ಪ್ರಮುಖವಾಗಿ ಇದರ ಹೊಡೆತ ಬೀಳುವುದು ಜೆಡಿಎಸ್’ಗೆ ಆಗಿರಲಿದೆ.
ಇನ್ನು ಗಣಿ ಧಣಿ ಜನಾರ್ದನ ರೆಡ್ಡಿ ಅವರ ಪ್ರಗತಿ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ವೇಗಕ್ಕೆ ಅಡ್ಡಿಯಾಗಲಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿಬಿಜೆಪಿಗೆ ಜನಾರ್ಧನ ರೆಡ್ಡಿ ಪಕ್ಷ ಕಂಟಕವಾಗುವ ಸಾಧ್ಯತೆ ಇದೆ. ಮೇ 13 ರಂದು ಮತ ಎಣಿಕೆಯಾದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಜನಾರ್ದನ ರೆಡ್ಡಿ ಹಣೆಬರಹ ಗೊತ್ತಾಗಲಿದೆ.
ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ದೊಡ್ಡ ಮಟ್ಟದ ಸವಾಲನ್ನು ಎದುರಿಸುತ್ತಿದ್ದಾರೆ. ಲಿಂಗಾಯತ ಸಮುದಾಯದ ವಿ ಸೋಮಣ್ಣ ರವರನ್ನು ಕಮಲ ಪಾಳೆಯ ಬೆಂಗಳೂರಿನಿಂದ ಆಮದು ಮಾಡಿಕೊಂಡಿದೆ ಸಿದ್ದರಾಮಯ್ಯ ಅವರನ್ನು ಸೋಲಿಸಲು.
ದೇವೇಗೌಡರ ಪಕ್ಷಕ್ಕೆ ಸಿದ್ದರಾಮಯ್ಯ ಇನ್ನಿಲ್ಲದ ಮಗ್ಗುಲ ಮುಳ್ಳು. ತಮ್ಮ ಪುತ್ರ ಕುಮಾರಸ್ವಾಮಿ ಯ ಸರ್ಕಾರ ಕೆಡವಿದರು ಎಂಬ ಸಿಟ್ಟು ಸಿದ್ದರಾಮಯ್ಯ ನವರ ಮೇಲಿದೆ. ಆದರೆ ಇವರ ಪಕ್ಷದ ಅಡಗೂರು ವಿಶ್ವನಾಥ್, ಗೋಪಾಲಯ್ಯ, ಮತ್ತು ನಾರಾಯಣ ಗೌಡ ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರಿದ್ದು ಮಾತ್ರ ಇವರಿಗೆ ಹೊಡೆತ ಎನಿಸಲಿಲ್ಲಾ. ಕನಕಪುರ ದಲ್ಲಿ ಶಿವಕುಮಾರ್ ಹಣಿಯಲು ಬೆಂಗಳೂರಿನ ಸಾಮ್ರಾಟ್ ಆರ್ ಆಶೋಕ್ ರವರನ್ನು ಕಳುಹಿಸಿದೆ ಬಿಜೆಪಿ. ಬಿಜೆಪಿಯ ತಂತ್ರಗಳು ಫಲ ಕೊಡುವುದೊ ಇಲ್ಲವೊ ಗೊತ್ತಾಗುವುದು ಮೇ 13 ರಂದೇ.
ಆರ್ ಎಸ್ ಎಸ್ ನ ಕಟ್ಟಾಳು ಜಗದೀಶ್ ಶೆಟ್ಟರ್ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಗಳನ್ನು ಉಲ್ಟಾ ಹೊಡೆಸಿ ಕಾಂಗ್ರೆಸ್ ಕೈ ಬಲಪಡಿಸಲು ಸಜ್ಜಾಗಿದ್ದಾರೆ. ಅವರನ್ನು ಸೋಲಿಸಲು ಬಿಜೆಪಿಯ ಸ್ವಯಂ ಘೋಷಿತ ಚಾಣಕ್ಯ ಅಮಿತ್ ಶಾ ಸೇರಿದಂತೆ ಹಲವರು ತಂತ್ರ ರೂಪಿಸುತ್ತಿದ್ದಾರೆ. ಈಗ ಶೆಟ್ಟರ್ ಸೋತರೆ, ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ್ ಜೋಷಿ ವಿರುಧ್ದ ಸೆಣುಸುವವರು ಶೆಟ್ಟರ್ ರವರೇ. ಹಾಗಾಗಿ ಜೋಷಿಯವರಿಗೆ ಶೆಟ್ಟರ್ ಗೆಲುವು ವಿಧಾನ ಸಭಾ ಚುನಾವಣೆಯಲ್ಲಿ ಬಹು ಮುಖ್ಯ.
ರಘು ಆಚಾರ್ ಕಾಂಗ್ರೆಸ್ ತೊರೆದು, ಜೆಡಿಎಸ್ ಆಲಿಂಗಿಸಿಕೊಂಡು ಚುನಾವಣೆ ಕಣಕ್ಕಿಳಿದಿದ್ದಾರೆ. ಅವರು ಕಾಂಗ್ರೆಸ್ ಸೋಲಿಸುವರೊ, ಗೌಡರ ಪಕ್ಷಕ್ಕೆ ಬಲ ತರುವರೊ ನೋಡಬೇಕು.
ಅಥಣಿಯಲ್ಲಿ ಮತ ಸಮರವೇ ನಡೆದಿದೆ. ಈ ರಣಾಂಗಣದಲ್ಲಿ ಭಬ್ರುವಾಹನ ಅರ್ಜುನ ರ ಯುಧ್ದ ನೆನಪಿಸುವಂತಿದೆ, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ಸೆಣಸಾಟ. ಲಕ್ಷ್ಮಣ ಸವದಿ ಪ್ರಬಲ ಗಾಣಿಗ ಲಿಂಗಾಯತ ಸಮುದಾಯದ ನಾಯಕ. ಅವರ ಪ್ರತಿಸ್ಪರ್ಧಿ ಪಂಚಮಸಾಲಿ ಪೈಕಿ. ಇಬ್ಬರೂ ಲಿಂಗಾಯಿತರೆ. ಸವದಿಯವರಿಗೆ ಎಲ್ಲಾ ಸಮುದಾಯದ ಬೆಂಬಲ ವ್ಯಕ್ತವಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತಿದೆ. ರಮೇಶ್ ಜಾರಕಿಹೊಳಿ ತಮ್ಮ ಶಿಷ್ಯನ್ನು ಗೆಲ್ಲಿಸಲೇಬೇಕು ಎಂದು ಹಠ ತೊಟ್ಟಿದ್ಸಾರೆ. ಮತದಾರ ಯಾರಿಗೆ ಸೈ ಎನ್ನುವನು ಕಾದು ನೋಡೋಣ.
ಬಿಜೆಪಿ, ಇದುವರೆವಿಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಕುಟುಂಬ ರಾಜಕಾರಣ ಮಾಡುವ ಪಕ್ಷ ಎಂದು ಟೀಕಿಸುತ್ತಿತ್ತು. ಈ ಬಾರಿ ಕರ್ನಾಟಕದಲ್ಲಿ ಕಮಲ ಪಕ್ಷ ಯಾರು ಯಾರಿಗೆಲ್ಲಾ ಟಿಕೇಟ್ ನೀಡಿದೆ ಎಂಬ ಪಟ್ಟಿ ಅವಲೋಕಿಸಿದರೆ, ಮೋದಿಯವರು ಕುಟುಂಬ ರಾಜಕಾರಣದ ಬಗ್ಗೆ ಟೀಕಿಸುವ ಸಾಹಸಕ್ಕೆ ಹೋಗಲಾರರು.
- ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.
Key words : Karnataka-election.2023-bangalore-bjp-congress-jds
ENGLISH SUMMARY :
Will Congress make it? Or BJP create history in Karnataka?
Battle lines have been clearly drawn. The stage is set for the May 10 battle of ballots in Karnataka where ruling BJP is straggling to create history by returning to power, Congress engaged in a herculean fight to return to power and JDS praying for a hung house to be in political reckoning.
An estimated 5.21 crore electorate will decide the poll fortunes BJP, Cong and JDS parties and their respective nominees.
Going by the state’s electoral history only in 1985 Ramakrishna Hegde led Janata Party returned to power. In the elections that ensued, no political party that ruled the state has able to retae power, due to anti incumbency factor.
If views of psephologists, prepoll surveys and media reports are any indication, ruling BJP seemed to have immersed in anti incumbency wave.
A host of other factors that bolsters the argument of expected dismal performance of BJP in the next month assembly election include exit of prominent lingayat leaders from North Karnataka like Jagadish Shettar, Laxman Savadi and few others. The ill- treatment meted by BJP to lingayat leaders and deliberate insult heaped on lingayat community respected leader B S Yediyurappa, refusing ministerial berth to B Y Vijayendra have angered that community members which has been hitherto stood by the safe party and helped it ascend to power.
Karnataka is certainly a major state for the saffron brigade, and it has to fare well to retain power at the Centre in 2024 Lok Sabha election. In 2019 BJP won an all time record 26 seats out of 28. The lone independent Sumalatha who had triumphed in Mandya defeating Nikhil son of H D Kumaraswamy if JDS,howet has niwy been supporting saffron party.
Any reverse in next month’s assembly elections being held an year ahead of parliament polls would prove disastrous for the Narendra Modi has party.
A spate of corruption allegations, CD scams, internal bickerings, have rocked the ruling BJP and opposition Cong ress & JDS have left no opportunity to attack it.
The BJP is spending most of its time convincing that it is a party of lingayats, it will remain loyal to that community and make a lingayat as Chief minister, if voted to power. This Lingayat card played by BJP has angetedy majority OBCs, dalits. Of course BJP has declared its anathema towards Muslims by raking up hijab, hallal, azan and other emotive issues.
On the part of Congress, it is doing all possible effort to return to power. But there seemed to be a perception among people that the grand old party concentrated more on who would be the Chief Ministerial candidate that going fiercely against BJP highlighting its government failures.
Former chief minister Siddaramaiah and KPCC Chief D K Shivakumar devoted major time of their campaigning to express their penchant for the top post. Congress is not free from groupism, rebellion,.
Of course the JDS main prayer is for fractured verdict. The H D Devegowda family succeeded in countering rebellion within the family in respect of Hassan seat ticket issue, where Bhavani, wife of H D Revanna, was a strong aspirant. However, Kumaraswamy managed dispose off Revanna and Bhavani threats and stuck to his original plan if fielding party Ioyalist Swarup Prakash.
Devegowda party has been putting up an impressive show in old Mysore region, where vokkaligas are in dominant position. In 2018 JDS won 30 seats in vokkaliga belt out if it’s tally of 37.
This time around, with KPCC chief D K Shivakumar , who also hail from vokkaliga community has been pleading the community to support Congress to make him chief minister. In the event of vokkaligas heeding to Shivakumar appeal, the major looser could be JDS.
Mining baron Janardhana Reddy has floated his own party Kalyana Karnataka pragathi paksha Andy likely to pose a threat to BJP in parts of Bellary and Koppal districts.
Anyway on May 13, when votes are counted the poll date of BJP, Congress , JDS and Janardhana Reddy will be known.