ಬೆಂಗಳೂರು, ಜುಲೈ 09, 2020 (www.justkannada.in): ಕೊರೊನಾ ನಿಯಂತ್ರಣ ಜೊತೆಗೆ ಕೊರೊನಾ ವಾರಿಯರ್ಸ್ ಸೇಫ್ಟಿಗೆ ಸರ್ಕಾರ ಮೇಗಾ ಪ್ಲಾನ್ ಮಾಡಿದೆ.
ಬೆಂಗಳೂರಿನ ಕೊರೊನಾ ಕೇರ್ ಸೆಂಟರ್ ಗೆ ರೋಬೋಟ್ ಬಳಕೆಗೆ ಸರ್ಕಾರ ನಿರ್ಧಾರ ಮಾಡಿದೆ. ಬೆಂಗಳೂರಿನ ಬೃಹತ್ ಕೊರೊನಾ ಕೇರ್ ಸೆಂಟರ್ ಆಗಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕೋವಿಡ್ ಕೇರ್ ಸೆಂಟರ್ ನಲ್ಲಿ ರೋಬಟ್ ಬಳಕೆಗೆ ಸರ್ಕಾರ ನಿರ್ಧರಿಸಿದೆ.
ಜಯದೇವ ಆಸ್ಪತ್ರೆ ಮುಖ್ಯಸ್ಥ ಮಂಜುನಾಥ್ ಅವರು ಇಂದು ರೋಬೋಟ್ ವೀಕ್ಷಣೆ ಮಾಡಿದರು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 4 ರೋಬೋಟ್ ಬಳಸುಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.
ಮೊದಲ ಹಙತವಾಗಿ ಎಗ್ಸಿಬ್ಯುಷನ್ ಸೆಂಟರ್ ನಲ್ಲಿ ಕೊರೊನಾ ವಾರಿಯರ್ ಆಗಿ ರೋಬೋಟ್ ಕಾರ್ಯಾಚರಣೆ ನಡೆಸಲಿದೆ. ಪ್ರತಿ ವಾರ್ಡ್ ಗಳಿಗೆ ಹೋಗಿ ಚಿಕಿತ್ಸೆ ಪಡೆಯುವವರ ಯೋಗ ಕ್ಷೇಮ ವಿಚಾರಸಲಿವೆ ರೋಬೋಗಳು.