ಬೆಂಗಳೂರು,ಫೆಬ್ರವರಿ,12,2024(www.justkannada.in): ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳು ದೇಶಕ್ಕೆ ಮಾದರಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಣ್ಣಿಸಿದರು.
ಇಂದಿನಿಂದ ಬಜೆಟ್ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಜಂಟಿ ಸದನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಮಾದರಿಯಾಗಿವೆ. ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ತೃಪ್ತಿ ನೀಡಿವೆ . ರಾಜ್ಯ ಸರ್ಕಾರ ನುಡಿದಂತೆ ಕೆಲಸ ಮಾಡುತ್ತಿದೆ ಕರ್ನಾಟಕದ ಜನತೆಗೆ ಗ್ಯಾರಂಟಿಯಿಂದ ಲಾಭವಾಗಿದೆ ಶಕ್ತಿಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಪಂಚ ಯೋಜನೆಗಳಿಂದ ಜನರ ಬದುಕು ಬೆಳಕಾಗಿದೆ . ಸರ್ಕಾದಿಂದ ಶಿಕ್ಷಣ ಕ್ಷೇತ್ರದಲ್ಲೂ ದೊಡ್ಡ ಬದಲಾವಣೆಯಾಗಿದೆ. ಕರ್ನಾಟಕ ಹೊಸ ಶಿಕ್ಷಣ ನೀತಿಯನ್ನ ರೂಪಿಸುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ ಸರ್ಕಾರದಿಂದ 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿಯ ಹಣವನ್ನ ನೀಡಲಾಗುತ್ತಿದೆ. ಡಿಬಿಟಿ ಮೂಲಕ ಹಣ ನೀಡಲಾಗುತ್ತಿದೆ. ಜಾತಿ ಬೇಧವಿಲ್ಲದೆ ಜನರಿಗೆ ಅಕ್ಕಿಕೊಡುವ ಕೆಲಸವಾಗುತ್ತಿದೆ. ಯುವನಿಧಿ ಗ್ಯಾರಂಟಿಯಿಂದ ಯುವಕರಿಗೆ ಅನುಕೂಲವಾಗಿದ್ದು ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ಪೂರೈಸಲಾಗುತ್ತದೆ ಎಂದು ತಿಳಿಸಿದರು.
Key words: Karnataka Government- guarantees – model – country – Governor Thawar Chand Gehlot