ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ ಆರಂಭಿಸಲು ಕರ್ನಾಟಕ ಸರ್ಕಾರ ಚಿಂತನೆ

ಬೆಂಗಳೂರು, ಮೇ 21, 2020 (www.justkannada.in): ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ ಆರಂಭಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.

ಮಾರ್ಚ್ 24 ರಿಂದ ದೇವಸ್ಥಾನಗಳಲ್ಲಿ ಪೂಜೆ ನಡೆಯುತ್ತಿಲ್ಲ ಮತ್ತು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ಈಗ ಆನ್‌ಲೈನ್ ಮೂಲಕ ಪೂಜೆ ಹಾಗೂ ದೇವಸ್ಥಾನದಲ್ಲಿ ನಡೆಯುವ ಇನ್ನಿತರ ಧಾರ್ಮಿಕ ಕಾರ್ಯಗಳ ವೀಕ್ಷಣೆಗೆ ಆನ್‌ಲೈನ್‌ ಮೊರೆ ಹೋಗಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮುಜರಾಯಿ ಇಲಾಖೆಯ ಆಯುಕ್ತರು ಎಲ್ಲ ಜಿಲ್ಲೆಯ ಜಿಲ್ಲಾಧಿಗಳು ಹಾಗೂ ದೇವಸ್ಥಾನಗಳ ಕಾರ್ಯನಿರ್ವಹಕರಿಗೆ ಪತ್ರೆ ಬರೆದಿದ್ದಾರೆ. ಅವರ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ನಡೆಯುವ ಸೇವಾ ಪೂಜಾ ಕೈಕಂರ್ಯಗಳನ್ನು, ಆಯಾ ದೇವಾಲಯಗಳ ರೂಢಿ, ಸಂಪ್ರದಾಯ ಮತ್ತು ಆಚರಣೆಗೆ ಒಳಪಟ್ಟು ಆನ್‌ಲೈನ್‌ ಮೂಲಕ ವೀಕ್ಷಣೆಯ ವ್ಯವಸ್ಥೆ ಒದಗಿಸಬಹುದಾದ ದೇವಸ್ಥಾನಗಳ ಪಟ್ಟಿ ನೀಡಲು ಮನವಿ ಮಾಡಲಾಗಿದೆ.