ಬೆಂಗಳೂರು, ಡಿಸೆಂಬರ್ ೨೯, ೨೦೨೧ (www.justkannada.in): ಕರ್ನಾಟಕ ಸರ್ಕಾರವು, ವಿವಿಧ ಕಲ್ಯಾಣ ಯೋಜನೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ವೇದಿಕೆ ವಿನ್ಯಾಸಪಡಿಸಿದೆ. ವೆಬ್ ಪೋರ್ಟಲ್ ಆಧಾರಿತ ಈ ತಂತ್ರಜಾನ ಯಾರಿಗೆ ಯೋಜನೆಯ ಲಾಭವನ್ನು ಪಡೆಯುವ ಅರ್ಹತೆ ಇದೆ ಎಂದು ಅಂದಾಜಿಸುವಲ್ಲಿ ನೆರವಾಗಲಿದೆ. ಇದರಿಂದ ನಿರೀಕ್ಷೆಗಿಂತ ನೂರುಪಟ್ಟು ಹೆಚ್ಚಾಗಿ ಬರುವಂತಹ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸುಲಭವಾಗಲಿದೆ.
‘ಸುವಿಧಾ’ ಎಂದು ಹೆಸರಿಸಿರುವ ಈ ವೆಬ್ ಪೋರ್ಟಲ್ ನೇರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿಗಾವಣೆಯ ಅಡಿಯಲ್ಲೇ ಕಾರ್ಯನಿರ್ವಹಿಸಲಿದೆ. ಚುನಾವಣಾ ವರ್ಷದಲ್ಲಿ ಕಲ್ಯಾಣ ಯೋಜನೆಗಳಿಗೆ ಮಣೆ ಹಾಕುತ್ತಿರುವ ಸರ್ಕಾರದ ಪ್ರಯತ್ನದ ಜೊತೆಗೆ ಈ ಹೊಸ ತಂತ್ರಜ್ಞಾನ ಹಾಲಿ ರಾಜ್ಯ ಸರ್ಕಾರ ಪರಿಚಯಿಸುತ್ತಿರುವ ವಿವಿಧ ಇ-ಆಡಳಿತ ಉಪಕ್ರಮಗಳಲ್ಲಿ ಒಂದಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಅವರು ಹೇಳಿದಿಷ್ಟು…
“ಸುವಿಧಾ ಒಂದು ಸಮಗ್ರ ತಂತ್ರಜ್ಞಾನ ವ್ಯವಸ್ಥೆಯಾಗಿದ್ದು, ನಾಗರಿಕರಿಗೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನೆರವಾಗುತ್ತದೆ,”
“ಸುವಿಧಾ, ಪ್ರಮಾಣಪತ್ರಗಳು ಅಥವಾ ವಿವಿಧ ದಾಖಲೆಪತ್ರಗಳನ್ನು ಒದಗಿಸುವಂತಹ ಸೇವೆಗಳಿಗಾಗಿ ಮೀಸಲಿರುವ ‘ಸೇವಾ ಸಿಂಧು’ಗಿಂತ ಭಿನ್ನವಾಗಿದೆ. ‘ಸುವಿಧಾ’ ಫಲಾನುಭವಿಗಳೀಗೆ ನೇರ ಲಾಭವನ್ನು ಒದಗಿಸುವಂತಹ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದೆ,”
ಕರ್ನಾಟಕ ಸರ್ಕಾರ ಸುಮಾರು ೨೫೦ ವಿವಿಧ ಕಲ್ಯಾಣ ಯೋಜನೆಗಳನ್ನು ಹೊಂದಿದೆ, ಆದರೆ ಈ ಪೈಕಿ ಬಹುಪಾಲ ಯೋಜನೆಗಳು ಮ್ಯಾನ್ಯೂವಲ್ ಪ್ರಕ್ರಿಯೆಯನ್ನೇ ಅನುಸರಿಸುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಸಂಖ್ಯೆ ನಿಗಧಿತ ಆಯವ್ಯಯಕ್ಕಿಂತ ಹೆಚ್ಚಾಗಿರುತ್ತದೆ.
ಉದಾಹರಣೆಗೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗಳನ್ನು ಕೊರೆಯಲು ಅನುದಾನ ಒದಗಿಸಲಾಗುತ್ತಿದ್ದು ಇದಕ್ಕೆ ೯೩೦ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶವಿತ್ತು. ಆದರೆ ನಿಗಮಕ್ಕೆ ಮಂಜೂರಾತಿ ವರ್ಷದಲ್ಲಿ ೧೭,೩೦೦ ಅರ್ಜಿಗಳು ಬಂದವು. ಅಂತಿಮವಾಗಿ ‘ಮೊದಲು ಬಂದವರಿಗೆ ಆದ್ಯತೆ’ ಆಧಾರದ ಮೇಲೆ ಅರ್ಜಿಗಳನ್ನು ಆಯ್ಕೆ ಮಾಡಲಾಗುತ್ತದೆ.
“ಸುವಿಧಾ ಯೋಜನೆಯಡಿ, ಯೋಜನೆಯ ಲಾಭದ ಬಹಳ ಅಗತ್ಯವಿರುವಂತಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ‘ಅಗತ್ಯ ಅಂಕ’ (need score)ವನ್ನು ಒಳಗೊಂಡಿದೆ.
ಸುವಿಧಾ ಯೋಜನೆಯಡಿ ನಾವು ಇಲಾಖೆಗಳಿಗೆ ಯೋಜನೆಯ ಬಹಳ ಅಗತ್ಯವಿರುವಂತಹ ಫಲಾನುಭವಿಗಳನ್ನು ಆಯ್ಕೆ ಮಾಡಲು ನೆರವಾಗುವಂತಹ ‘need score’ ವ್ಯವಸ್ಥೆಯನ್ನು ಅಳವಡಿಸಿದ್ದೇವೆ. ಪ್ರಸ್ತುತ ನಾವು ಈ ಅಂಕಗಳನ್ನು ನೀಡುವ ಮಾನದಂಡಗಳನ್ನು ಅಂತಿಮಗೊಳಿಸುವ ಸಂಬಂಧ ಇಲಾಖೆಗಳೊಂದಿಗೆ ಸಮಾಲೋಚಿಸುತ್ತಿದ್ದೇವೆ,”
ಸುವಿಧಾ ಯೋಜನೆಯ ನಿರ್ದೇಶಕ ಅಭಿಷೇಕ್ ವಸಂತ ನಾಯಕ್ ಅವರು ಹೇಳುವಂತೆ….
‘ಸುವಿಧಾ’ಗೆ ಲಾಗ್‌ಇನ್ ಆಗುವಂತಹ ನಾಗರಿಕರು ಮೂಲ ಜನಸಂಖ್ಯಾಶಾಸ್ತ್ರದ ವಿವರಗಳನ್ನು ತುಂಬಬೇಕಾಗುತ್ತದೆ. “ಸುವಿಧಾ ವೆಬ್ ಪೋರ್ಟಲ್ ಕುಟುಂಬ (ಕುಟುಂಬ ದತ್ತಾಂಶ), FRUITS (ರೈತರು) ಹಾಗೂ ಇತರೆಯಂತಹ ವಿವಿಧ ಐಟಿ ವ್ಯವಸ್ಥೆಗಳೊಂದಿಗೆ ಸಂಪರ್ಕವನ್ನು ಹೊಂದಿರುವ ಕಾರಣದಿಂದಾಗಿ ನಾಗರಿಕರು ತುಂಬುವ ಈ ದತ್ತಾಂಶ ಸ್ವಯಂಚಾಲಿತವಾಗಿ ಪರಿಶೀಲನೆಗೆ ಒಳಪಡುತ್ತದೆ. ಹಾಲಿ ದತ್ತಾಂಶಗಳಿಂದ ಪರಿಶೀಲನೆಗೆ ಒಳಪಡದಿರುವಂತಹ ಮಾಹಿತಿಯನ್ನು ಮಾತ್ರ ಸಂಬಂಧಪಟ್ಟ ಇಲಾಖೆಗಳಿಂದ ಆಫ್‌ಲೈನ್‌ನಲ್ಲಿ ಪರಿಶೀಲಿಸಬೇಕಾಗುತ್ತದೆ,”
ಈ ತಂತ್ರಜ್ಞಾನ, ಕಲ್ಯಾಣ ಯೋಜನೆಗಳಿಗೆ ಕೇವಲ ಅರ್ಹ ನಾಗರಿಕರು ಮಾತ್ರ ಅರ್ಜಿ ಸಲ್ಲಿಸುವುದನ್ನು ಖಾತ್ರಿಪಡಿಸುತ್ತದೆ. ಜೊತೆಗೆ ‘ಸುವಿಧಾ’ ಡಿಬಿಟಿಗೂ ಸಂಪರ್ಕವನ್ನು ಹೊಂದಿದ್ದು, ವಿವಿಧ ಯೋಜನೆಗಳ ನಗದು ಲಾಭವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೇ ಪಾವತಿಸುವುದು ಸಾಧ್ಯವಾಗುತ್ತದೆ.
ಇದರ ಜೊತೆಗೆ ಸುವಿಧಾ ಹೆಚ್ಚಿನ ನಾಗರಿಕರ ದತ್ತಾಂಶವನ್ನು ಸಂಗ್ರಹಿಸುವಲ್ಲಿ ಫೀಡರ್ ಆಗಿಯೂ ಕಾರ್ಯನಿರ್ವಹಿಸಲಿದೆ. “ಇದು ದತ್ತಾಂಶವನ್ನು ಸೇವಿಸುವುದರ ಜೊತೆಗೆ ಕೊಡುಗೆಯನ್ನೂ ನೀಡಲಿದೆ. ಸುವಿಧಾ ‘ಕೇವಲ-ಒಮ್ಮೆ-ಮಾತ್ರ ಕೇಳಿ’ (ask-only-once) ಎಂಬ ತತ್ವವನ್ನು ಆಧರಿಸಿದೆ. ನಾವು ನಾಗರಿಕರನ್ನು ಕೇವಲ ಒಮ್ಮೆ ಮಾತ್ರ ದತ್ತಾಂಶವನ್ನು ತುಂಬಲು ಕೇಳುತ್ತೇವೆ,”
ಹಿಂದುಳಿದೆ ವರ್ಗಗಳ ಕಲ್ಯಾಣ ಇಲಾಖೆಯ ‘ಅರಿವು ವಿದ್ಯಾರ್ಥಿ ಸಾಲ ಯೋಜನೆ’ಯನ್ನು ಈಗಾಗಲೇ ‘ಸುವಿಧಾ’ಗೆ ಅಳವಡಿಸಲಾಗಿದೆ. ಇದೇ ರೀತಿ ಸಮಾಜ ಕಲ್ಯಾಣ, ರೇಷ್ಮೆ ಇಲಾಖೆ, ವಿಶೇಷಚೇತನರು ಹಾಗೂ ಇತರೆ ಇಲಾಖೆಗಳ ಸುಮಾರು ೧೨೫ ಇನ್ನಿತರೆ ಕಲ್ಯಾಣ ಯೋಜನೆಗಳನ್ನೂ ಸಹ ಶೀಘ್ರದಲ್ಲೇ ‘ಸುವಿಧಾ’ಗೆ ಸೇರ್ಪಡೆಗೊಳಿಸಲಾಗುವುದು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
key words : Karnataka- govt portal- suvidha- to rate citizens’ eligibility – for welfare schemes
ENGLISH SUMMARY :
New Karnataka govt portal to rate citizens’ eligibility for welfare schemes
Karnataka has designed a new technology platform that will not only allow online applications for welfare schemes, but also score citizens to determine who needs a benefit the most, a move that will come in handy when there are too many applicants.