ಬೆಂಗಳೂರು, ಜ.29, 2020 : (www.justkannada.in news ) ಸುಳ್ ಸುದ್ಧಿ ಪ್ರಕಟಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ ಮಂಗಳವಾರ ವಿವಿಧ ಮಾಧ್ಯಮಗಳಿಗೆ ಬರೋಬ್ಬರಿ 73 ಲಕ್ಷ ರೂ. ದಂಡ ವಿಧಿಸಿದೆ.
ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ ಮತ್ತು ಕನ್ನಡ ಟೆಲಿವಿಷನ್ ನ್ಯೂಸ್ ಚಾನೆಲ್‌ಗಳಾದ ಬಿ-ಟಿವಿ, ಟಿವಿ-5 ಹಾಗೂ ದಿಗ್ವಿಜಯ ಚಾನಲ್ ಗಳೇ ಹೈಕೋರ್ಟ್ ‘ದಂಡ’ನೆಗೆ ಗುರಿಯಾದ ಮೀಡಿಯಾ ಹೌಸ್.
ಒಟ್ಟು ರೂ. 73 ಲಕ್ಷ ದಂಡದ ಜತೆಗೆ, . ಸುಳ್ಳು ಸುದ್ದಿ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಬೇಷರತ್ತಾಗಿ ಕ್ಷಮೆಯಾಚನೆಯನ್ನು ಮಾಡಬೇಕೆಂದು ಕೋರ್ಟ್ ಹೇಳಿದೆ.
ಏನಿದು ಘಟನೆ:
ಕಳೆದ ಡಿ. 16 ರಂದು “ನ್ಯಾಯಾಧೀಶರ ಮೇಲೆ ನಡೆದ ದಾಳಿಯಲ್ಲಿ ರೂ. 9 ಕೋಟಿ ವಶ ” ಎಂದು ಈ ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಇದನ್ನು ಗಮನಿಸಿದ ಕೋರ್ಟ್ ಕ್ರಮಕ್ಕೆ ಮುಂದಾಯಿತು. ನ್ಯಾಯಾಧೀಶರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿರುವ ಕಾರಣ, ಈ ಮಾಧ್ಯಮಗಳ ವಿರುದ್ಧ 1971ರ ಕಂಟೆಂಪ್ಟ್ ಆಫ್ ಕೋರ್ಟ್ ಆ್ಯಕ್ಟ್ ಅಡಿಯಲ್ಲಿ ತಪ್ಪಿತಸ್ಥರು ಎಂದು ಗುರುತಿಸಲಾಯಿತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದಂಗೌಡರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.
ಯಾವುದೇ ವರದಿಗಳು, ಯಾವುದೇ ಮೂಲ ಮತ್ತು ಪರಿಶೀಲನೆ ಇಲ್ಲದೆ ಈ ಸುದ್ದಿಯನ್ನು ಪ್ರಕಟಿಸಿದ್ದಾಗಿ ಮಾಧ್ಯಮ ಸಂಸ್ಥೆಗಳು ಒಪ್ಪಿಕೊಂಡಿವೆ. ಸುಳ್ಳು ಸುದ್ದಿ ಪ್ರಕಟಣೆಯಿಂದಾಗಿ ನ್ಯಾಯಾಂಗಕ್ಕೆ ಆಗಿರುವ ಹಾನಿಗೆ ನ್ಯಾಯಾಲಯದ ನಿರ್ದೇಶನದಂತೆ ದಂಡ ಕಟ್ಟಲು ಈ ಮಾಧ್ಯಮ ಸಂಸ್ಥೆಗಳು ಒಪ್ಪಿಕೊಂಡಿವೆ ಎನ್ನಲಾಗಿದೆ.
ಈ ಸುಳ್ಳು ವರದಿಯನ್ನು ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ದಿನಪತ್ರಿಕೆ, ಬೇಷರತ್ತಾದ ಕ್ಷಮೆಯಾಚಿಸುವುದರ ಜೊತೆಗೆ ರೂ.30 ಲಕ್ಷವನ್ನು ದಂಡವಾಗಿ ಪಾವತಿಸಲು ಒಪ್ಪಿಕೊಂಡಿದೆ.
ಕನ್ನಡದ ನ್ಯೂಸ್ ಚಾನಲ್ ಗಳಾದ BTV ಚಾನೆಲ್‌ಗೆ ರೂ. 20 ಲಕ್ಷ ದಂಡ, TV5 ಗೆ ರೂ. 8 ಲಕ್ಷ ಮತ್ತು ದಿಗ್ವಿಜಯ ಟಿವಿಗೆ ರೂ. 15 ಲಕ್ಷ ದಂಡ ಪಾವತಿಸುವಂತೆ ಸೂಚನೆಯನ್ನು ನೀಡಲಾಗಿದೆ.
key words : KARNATAKA HIGH COURT – ORDERS- 4 MEDIA HOUSES- PAY RS 73 LAKHS- false.news-penalty
ENGLISH SUMMARY :
PAY RS 73 LAKHS : KARNATAKA HIGH COURT ORDERS 4 MEDIA HOUSES FOR PUBLISHIHG/ TELECASTING FALSE NEWS
Karnataka high court imposed a total cost of ₹73 lakh on an English daily newspaper & three Kannada television news channels on Tuesday. To accept their unconditional apology for publishing & telecasting a false news report under the headline “₹9 crore seized in raid on judge” on Dec 16, 2019.
Chief Justice Abhay Oka and Justice Hemant Chandangoudar’ s comprising Division Bench passed the above order . while dropping the contempt of court proceedings by showing “leniency & mercy” on the media houses as per the Supreme court’s judgments by accepting their apology.