ಬೆಂಗಳೂರು,ಜೂ,25,2020(www.justkannada.in): ಕರ್ನಾಟಕ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ 2002ಕ್ಕೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. 15 ಕೋಟಿ ವೆಚ್ಚದ ಒಳಗೆ ಕೈಗಾರಿಕಾ ಸ್ಥಾಪನೆ ಮಾಡುವುದಿದ್ದರೆ ಜಿಲ್ಲಾ ಸಮಿತಿ ಕ್ಲಿಯರೆನ್ಸ್, 15ಕೋಟಿಗಿಂತ ಹೆಚ್ಚು ವೆಚ್ಚದ ಕೈಗಾರಿಕಾ ಸ್ಥಾಪನೆಗೆ ರಾಜ್ಯಮಟ್ಟದ ಸಮಿತಿಯಿಂದ ಕ್ಲಿಯರೆನ್ಸ್. ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿಯನಿಯಮ 2002ಕ್ಕೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ ಸಿಕ್ಕಿದೆ. ಕೈಗಾರಿಕೆಗಳು ಸ್ಥಾಪನೆಗೆ ಏಕಗವಾಕ್ಷಿ ಮೂಲಕ ಅನುಮತಿ ನೀಡುವುದು ಕಾಯ್ದೆ ತಿದ್ದುಪಡಿ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಮಿತಿಯಲ್ಲಿ ಕ್ಲಿಯರೆನ್ಸ್ ಕೊಟ್ಟರೆ ಕೈಗಾರಿಕಾ ಸ್ಥಾಪನೆ ಮಾಡುವುದಕ್ಕೆ ಅನುಮತಿ ನೀಡಲಾಗುವುದು. ಕೈಗಾರಿಕಾ ಆರಂಭಿಸಲು ಅನುಮತಿ ನೀಡಿದ ದಿನದಿಂದ ಮೂರು ವರ್ಷದ ಅವಧಿ ಇರುತ್ತೆ ಇಡೀ ದೇಶದಲ್ಲಿ ಗುಜರಾತ್, ರಾಜಸ್ಥಾನದಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ಆದ್ರೆ ನಮ್ಮ ರಾಜ್ಯದಲ್ಲಿ ಸಣ್ಣ ಮತ್ತು ಬೃಹತ್ ಕೈಗಾರಿಕೆಗಳು ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಿಗಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಯಾವುದಾದರೂ ಒಂದು ಭೂಮಿಗೆ ಕ್ಲಿಯರೆನ್ಸ್ ದೊರೆತರೇ ತಕ್ಷಣವೇ ಕೈಗಾರಿಕೆ ಪ್ರಾರಂಭಿಸಲು ಅವಕಾಶವಿರುತ್ತದೆ. ಯಾವುದೇ ಪರಿವರ್ತನೆಗಾಗಿ ಕಾಯುವ ಅಗತ್ಯವಿಲ್ಲ. ಭೂಮಿ ಪರಿವರ್ತನೆಗೆ ಕಾಯುವ ಅಗತ್ಯವಿಲ್ಲ. ಈ ನಿಯಮ ಗುಜರಾತ್, ರಾಜಸ್ತಾನದಲ್ಲಿ ಇದೆ. ಈ ಎರಡು ರಾಜ್ಯಗಳಲ್ಲಿ ಸಣ್ಣ ಕೈಗಾರಿಕೆಗೆ ಮಾತ್ರ ಅವಕಾಶವಿದೆ. ನಮ್ಮಲ್ಲಿ ಎಲ್ಲಾ ಕೈಗಾರಿಕೆಗಳಿಗೂ ಅನುಮತಿ ನೀಡಲಾಗಿದೆ. ಕೈಗಾರಿಕೆ ಸ್ಥಾಪನೆಗೆ ಒಪ್ಪಿಗೆ ಸಿಕ್ಕರೆ ಸಾಕು. ನಿಗದಿತ ಸ್ಥಳದಲ್ಲಿ ಕೈಗಾರಿಕೆ ಪ್ರಾರಂಭಿಸಬಹುದು ಎಂದು ಮಾಹಿತಿ ನೀಡಿದರು.
Key words: Karnataka Industrial Facility Amendment- Act-Cabinet -approval