ಸ್ಥಳೀಯ ಸಂಸ್ಥೆ ಚುನಾವಣೆ ಮೇ 29 ಕ್ಕೆ ನಿಗಧಿ : ರಾಜ್ಯ ಚುನಾವಣಾ ಆಯುಕ್ತರ ಹೇಳಿಕೆ

 

ಬೆಂಗಳೂರು, ಮೇ 02, 2019 : (www.justkannada.in news) ಮೇ 29 ರಂದು ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಗುರುವಾರ ಮಾತನಾಡಿದ ಅವರು ಹೇಳಿದಿಷ್ಟು….
103 ನಗರಸಭೆ, ಪುರಸಭೆ, ನಗರಪಾಲಿಕೆಗೆ ಚುನಾವಣೆ ಆಗಬೇಕಿದೆ. ವಾರ್ಡ್ ಮೀಸಲಾತಿ, ಪುನರ್ ರಚನೆ ವಿಚಾರ ಕೋರ್ಟ್ ನಲ್ಲಿದೆ. ಒಟ್ಟು 39 ವಾರ್ಡ್ ಗಳ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆ 39 ವಾರ್ಡ್ ಹಾಗೂ ಕುಂದಗೋಳ ಮತ್ತು ಚುಂಚೋಳಿ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಚುನಾವಣೆ ಆಗಲಿದೆ. ನೋಟಾ ಇರುತ್ತದೆ.
ಮೇ 29 ರಂದು ಸ್ಥಳೀಯ ಸಂಸ್ಥೆ ಚುನಾವಣೆ. ಮೇ 9 ರಂದು ಅಧಿಸೂಚನೆ. 16ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ. 17 ರಂದು ನಾಮಪತ್ರ ಪರಿಶೀಲನೆ. 20 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ. 29 ರಂದು ಬೆಳಿಗ್ಗೆ 7 ಗಂಟೆಯಿಂದ 5 ಗಂಟೆ ವರೆಗೆ ಸ್ಥಳೀಯ ಸಂಸ್ಥೆ ಚುನಾವಣೆ.

ತಾಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ಕ್ಷೇತ್ರಗಳಲ್ಲಿ ಉಪಚುನಾವಣೆ. 10 ತಾಲೂಕು ಪಂಚಾಯತ್ ಕ್ಷೇತ್ರ, 202 ಗ್ರಾಮಪಂಚಾಯತ್ ಸ್ಥಾನಗಳಿಗೆ ಉಪಚುನಾವಣೆ. ಮೇ 29 ರಂದೇ ಉಪಚುನಾವಣೆ ನಡೆಯಲಿದೆ. ಉಪಚುನಾವಣೆಗೆ ಮೇ 13 ರಂದು ಅಧಿಸೂಚನೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. 20 ರಂದು ನಾಮಪತ್ರ ವಾಪಸ್ ಗೆ ಕಡೆ ದಿನ. 29 ರಂದು ಚುನಾವಣೆ, ಮರು ಮತದಾನ ಅವಶ್ಯವಿದ್ದಲ್ಲಿ 30ರಂದು ಅವಕಾಶ. ಮೇ 31 ರಂದು ಫಲಿತಾಂಶ.

ಬಿಬಿಎಂಪಿ ಸಗಾಯಿಪುರ, ಕಾವೇರಿಪುರ ವಾರ್ಡ್‌ಗಳಿಗೂ ಚುನಾವಣೆ. ಆಸ್ತಿ ವಿವರ ಘೋಷಣೆ ಮಾಡದ ಸದಸ್ಯರ ಸದಸ್ಯತ್ವ ರದ್ದು. ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾಪಂಚಾಯತ್ ಸದಸ್ಯರು ಆಸ್ತಿ ವಿವರ ಘೋಷಣೆ ಮಾಡಬೇಕು.
2016-18 ರ ವರೆಗೆ ಆಸ್ತಿ ವಿವರ ಘೋಷಿಸದ ಸದಸ್ಯರ ಸದಸ್ಯತ್ವ ರದ್ದು. 2016 ರಲ್ಲಿ ತಾ.ಪಂ. ನ ಒಬ್ಬರು, ಗ್ರಾ.ಪಂ. ನ ಮೂವರ ಸದಸ್ಯತ್ವ ರದ್ದು. 2017 ರಲ್ಲಿ ಗ್ರಾ.ಪಂ. ನ 9 ಸದಸ್ಯರ ಸದಸ್ಯತ್ವ ರದ್ದು. 2018 ರಲ್ಲಿ ಗ್ರಾ.ಪಂ.ನ 12 ಸದಸ್ಯರ ಸದಸ್ಯತ್ವ ರದ್ದು ಪಡಿಸಲಾಗಿದೆ. 2016 ರಲ್ಲಿ ಆಸ್ತಿ ವಿವರದ ಸುಳ್ಳು ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರದ ಓರ್ವ ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ.

ಬೆಂಗಳೂರಿನ ಬಿಬಿಎಂಪಿ 2 ವಾರ್ಡ್ ಗಳಲ್ಲಿ ಉಪಚುನಾವಣೆ. ವಾರ್ಡ್ ನಂಬರ್ 60 ಸಗಾಯಿಪುರ, 103 ಕಾವೇರಿಪುರದಲ್ಲಿ ಉಪಚುನಾವಣೆ. ಪಾಲಿಕೆ ಸದಸ್ಯರ ನಿಧನದಿಂದ ಖಾಲಿಯಾದ ಜಾಗ.

ತುಮಕೂರು ಮಹಾನಗರಪಾಲಿಕೆ ವಾರ್ಡ್ 22ರಲ್ಲಿ ಉಪಚುನಾವಣೆ. ಬೆಂಗಳೂರು ಹೆಬ್ಬಗೋಡಿ ನಗರಸಭೆ ವಾರ್ಡ್ ನಂ.26. ಬೆಳಗಾವಿ ಸದಲಗ ಪುರಸಭೆ ವಾರ್ಡ್ ನಂ 19. ಮುಗಳಗೋಡ ಪುರಸಭೆ ವಾರ್ಡ್ ನಂ 2ರಲ್ಲಿ ಉಪಚುನಾವಣೆ ನಡೆಯಲಿದೆ.

karnataka local body elections on may 29, karnataka election commissioner declares.