ಮತ್ತೆ ಮತ್ತೆ ಟ್ರೋಲಿಗರಿಗೆ ಆಹಾರವಾಗುತ್ತಿದೆ ‘ ಟಿವಿ-9’….?

 

ಮೈಸೂರು, ಮೇ 18, 2020 : (www.justkannada.in news ) : ಕನ್ನಡ ನ್ಯೂಸ್ ಚಾನಲ್ ಗಳು ಟ್ರೋಲಿಗರಿಗೆ ಸಖಾತ್ತಾಗಿಯೇ ಆಹಾರವಾಗುತ್ತಿರುವುದು ತಿಳಿದೆ ಇದೇ. ಟಿವಿ-9 ಮಾಡಿದ ಯಡವಟ್ಟೊಂದು (?) ಇದೀಗ ನೆಟ್ಟಿಗರು ಕಾಲೆಳೆಯಲು ಕಾರಣವಾಗಿದೆ.
ಕರೋನಾ ಪಾಸಿಟಿವ್ ಪ್ರಕರಣದ ಸುದ್ಧಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ನಿತ್ಯ ಎರಡು ಸಲ ಬುಲೆಟಿನ್ ಬಿಡುಗಡೆ ಮಾಡುತ್ತದೆ. ಈ ಬುಲೆಟಿನ್ ನಲ್ಲಿ ಸೋಂಕಿತರ ಸಂಖ್ಯೆ ಹಾಗೂ ಅವರ ವಿವರಗಳನ್ನು ನೀಡಲಾಗುತ್ತದೆ. ಹೀಗೆ ನೀಡುವ ವೇಳೆ Asmyptomatic ಅಂದ್ರೆ ರೋಗದ ಯಾವುದೇ ಗುಣ ಲಕ್ಷಣಗಳು ಇಲ್ಲದೆ ಇರೋದು. ಈ ಬಗೆಗೂ ಮಾಹಿತಿ ನೀಡಿರುತ್ತಾರೆ.

 karnataka-media-kannada-troll-tv.9-trolled

ಆದರೆ ಟಿವಿ-9 ವಾಹಿನಿ ಬೃಹಸ್ಪತಿ, ಇದನ್ನೇ A – smyptomatic ಎಂದು ತಿಳಿದುಕೊಂಡು ‘ A’ ಸಿಂಪ್ಟಮ್ಯಾಟಿಕ್ ಹೊಂದಿರುವ ರೋಗಿಗಳ ಸಂಖ್ಯೆ ಎಂದು ಸುದ್ದಿಯನ್ನು ಬ್ರೇಕಿಂಗ್ ಪ್ಲೇಟ್ ನಲ್ಲಿ ಹಾಕುವ ಮೂಲಕ ಪ್ರಮಾದವೆಸಗಿದ್ದಾನೆ ಎನ್ನಲಾಗಿದೆ.
ಇದನ್ನೇ ಕಾಯುತ್ತಿದ್ದ ಟ್ರೋಲ್ ಪೇಜ್ ಗಳು ಸ್ಕ್ರೀನ್ ಶಾಟ್ ತೆಗೆದು, ಟಿವಿ-9 ಕನ್ನಡ ನ್ಯೂಸ್ ಚಾನಲ್ ನ ಪತ್ರಕರ್ತರ ಮಾನ ಹರಾಜು ಹಾಕುತ್ತಿವೆ.

ಕೆಲ ದಿನಗಳ ಹಿಂದೆಯಷ್ಟೆ ವಾಹಿನಿಯ ಆಯ್ಯಂಕರ್ ರಂಗನಾಥ್ ಭರದ್ವಾಜ್ , ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜತೆ ಹಿಂದಿ ಭಾಷೆಯಲ್ಲಿ ಸಂದರ್ಶನ ಮಾಡಿದ್ದು ಟ್ರೋಲಿಗರಿಗೆ ಆಹಾರವಾಗಿತ್ತು. ಇದೀಗ Asmyptomatic ಸರದಿ…

key words : karnataka-media-kannada-troll-tv.9-trolled