ಬೆಂಗಳೂರು, ಜೂ.05, 2020 : ( www.justkannada.in news ) ರಾಜ್ಯದ ದಿನಪತ್ರಿಕೆಗಳಿಗೆ ಬಾಕಿ ಇರುವ 50 ಕೋಟಿ ರೂ. ಜಾಹೀರಾತು ಬಾಬ್ತುನ್ನು ತಕ್ಷಣವೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸಂಪಾದಕರುಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಕಷ್ಟ.ಸಮಸ್ಯೆಗಳನ್ನು ಮುಖ್ಯಮಂತ್ರಿ ಗಳ ಗಮನಕ್ಕೆ ತರಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ತಕ್ಷಣವೆ ಬಾಕಿ ಇರುವ 50 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಆದೇಶಿಸಿದರು.
ಈ ನಿಯೋಗದಲ್ಲಿ ಕೆಯುಡ್ಲುಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಐಎಫ್ ಡ್ಲುಜೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಹಿರಿಯ ಸಂಪಾದಕ ಎಸ್.ನಾಗಣ್ಣ, ಹಾಸನದ ಆರ್.ಪಿ.ವೆಂಕಟೇಶ್ ಮೂರ್ತಿ, ಎನ್.ರವಿಕುಮಾರ್, ರಶ್ಮಿಪಾಟೀಲ್, ಚೆಲುವರಾಜ್, ಸೋಮಶೇಖರ್ ಕೆರೆಗೋಡು ಮತ್ತಿತರರು ಹಾಜರಿದ್ದರು.
key words : karnataka-media-pending-advertisement-bills-50.crore-release-immediately-cm-b.s.yadiyurappa-orders-KUWJ
ಮುಖ್ಯಮಂತ್ರಿಗಳ ನಿರ್ದೇಶನ ಮೇರೆಗೆ ವಾರ್ತಾ ಇಲಾಖೆಯಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಂಪಾದಕರ ಸಮಾಲೋಚನಾ ಸಭೆ ನಡೆಸಲಾಯಿತು.