ಮೈಸೂರು, ಮಾ.24, 2020 : (www.justkannada.in news) : ಭಯಾನಕ ಕರೋನಾ ವೈರಸ್ ಭೀತಿ ನಡುವೆಯೂ ಸಮಾಜದಲ್ಲಿ ಕೆಲ ಗುಣಾತ್ಮಕ ಬದಲಾವಣೆಗಳು ಕಂಡು ಬರುತ್ತಿರುವುದು ವಿಶೇಷ. ಈ ಪೈಕಿ ಕನ್ನಡದ ಸುದ್ಧಿಮನೆಗಳ ಮುಖ್ಯಸ್ಥರನ್ನು ಒಂದಾಗಿಸಿದ ಕೀರ್ತಿ ಕರೋನಾಗೆ ಸಲ್ಲುತ್ತದೆ.
ಹೌದು, ಕರೋನಾ ಕಾರಣದಿಂದ ಜನ ಮನೆಯಲ್ಲೇ ಬಂಧಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ತನಕ ಉದ್ಯೋಗ, ಸಂಪಾಧನೆ ಇತ್ಯಾದಿ ಕಾರಣಗಳಿಂದ ಮನೆ ಹೊರಗೆ ಕಾಲಕಳೆಯುತ್ತಿದ್ದವರು ಈಗ ಅನಿವಾರ್ಯವಾಗಿ ‘ ವರ್ಕ್ ಫ್ರಮ್ ಹೋಂ’ ಮೂಲಕ ಮನೆಯಲ್ಲೇ ಇರುವಂತಾಗಿದೆ.
ಬಾರ್, ಪಬ್, ಮಾಲ್, ಸಿನಿಮಾ ಹಾಲ್ ಗಳು ಬಂದ್ ಆಗಿರುವ ಕಾರಣ ಕೌಟುಂಬಿಕ ಕೂಡುವಿಕೆಗೆ ಮನೆ ಉತ್ತಮ ವೇದಿಕೆಯಾಗಿದೆ. ಈ ನಡುವೆ ಕರೋನಾ ಮತ್ತೊಂದು ಅಚ್ಚರಿಗೂ ಕಾರಣವಾಗಿದೆ.
ಅದೇನು ಅಂದ್ರೆ, ಸುದ್ದಿ ಮಾಧ್ಯಮಗಳ ಮುಖ್ಯಸ್ಥರನ್ನು ಒಂದೇ ವೇದಿಕೆಗೆ ತಂದಿರುವುದು. ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ದಿನಗಳಿಂದ ವ್ಯಕ್ತವಾಗುತ್ತಿದ್ದ, ಪತ್ರಿಕೆಗಳ ಮೂಲಕವೂ ಕರೋನಾ ಹರಡುತ್ತದೆ. ಆದ್ದರಿಂದ ಮುದ್ರಣ ಮಾಧ್ಯಮವನ್ನು ಬ್ಯಾನ್ ಮಾಡಿ ಎಂಬ ಕೂಗಿಗೇ ಬೆಚ್ಚಿದ ಸಂಪಾದಕರುಗಳು ಭಿನ್ನಾಭಿಪ್ರಾಯ ತೊರೆದು ಒಕ್ಕೂರಲಿನಿಂದ ನಾವ್ ಕರೋನಾ ಹರಡಿಸೋದಿಲ್ಲ ಎಂದು ಸಾರಿ ಹೇಳುವಂತೆ ಮಾಡಿರುವುದು.
ಈ ಸಲುವಾಗಿಯೇ ಇಂದು ರಾಜ್ಯದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳಲ್ಲೂ ಏಕ ರೂಪದ ಸಂಪಾದಕೀಯ ಪ್ರಕಟವಾಗಿದೆ. ಬಹುಶಃ ಇದು ಪತ್ರಿಕಾ ರಂಗದಲ್ಲಿ ಇದೇ ಮೊದಲು.
key words : karnataka-media-print-corona-editors-union