ಬೆಂಗಳೂರು,ಮೇ,2021(www.justkannada.in): ದೇಶದಲ್ಲಿ ಕೊರೋನಾ 2ನೇ ಅಲೆ ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಭಾರಿ ಆತಂಕ ಸೃಷ್ಠಿಸಿದೆ. ಈ ಮಧ್ಯೆ ಕೊರೋನಾ ಆಕ್ಟಿವ್ ಪ್ರಕರಣಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಹೌದು, ಕರ್ನಾಟಕದಲ್ಲಿ 4.4 ಲಕ್ಷ ಕೋವಿಡ್ ಆಕ್ಟಿವ್ ಪ್ರಕರಣಗಳಿದ್ದು, ಮೊದಲ ಸ್ಥಾನ ಪಡೆದಿದೆ. ನಂತರ ಮಹಾರಾಷ್ಟ್ರದಲ್ಲಿ 3.3 ಲಕ್ಷ, ತಮಿಳುನಾಡಿನಲ್ಲಿ 3 ಲಕ್ಷ ಪ್ರಕರಣಗಳು, ಕೇರಳದಲ್ಲಿ 2.6 ಆಂಧ್ರ ಪ್ರದೇಶದಲ್ಲಿ 2 ಲಕ್ಷ ಕೊರೋನಾ ಆಕ್ಟಿವ್ ಪ್ರಕರಣಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ದೇಶದಲ್ಲಿ ದಿನದ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತಿದೆ. ದಿನ ನಿತ್ಯ 2.5 ಮತ್ತು 3 ಲಕ್ಷ ಗಡಿ ದಾಟುತ್ತಿದ್ದ ಕೊರೋನಾ ಸೋಂಕಿನ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 2,08,921 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 4,157 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3,11,388 ಕ್ಕೆ ಏರಿಕೆಯಾಗಿದೆ.
Key words: Karnataka – No. 1 -Covid –Active- Cases