ಬೆಂಗಳೂರು, ಮೇ 04, 2020 (www.justkannada.in): ಕಾರ್ಮಿಕರು ಸ್ವಂತ ಊರುಗಳಿಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿ ಕರ್ನಾಟಕ ಪೊಲೀಸ್ ಇಲಾಖೆ ಇ ಪಾಸ್ ನೀಡಲು ಚಿಂತನೆ ನಡೆಸಿದೆ.
ಅನಗತ್ಯವಾಗಿ ಅಂತರ ಜಿಲ್ಲೆ ಪ್ರಯಾಣ ಮಾಡುವವರನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಯಾಣಿಕರಿಗೆ ಇ ಪಾಸ್ ನೀಡಲು ನಿರ್ಧರಿಸಿದೆ. ಈ ಸಂಬಂಧ ಕರ್ನಾಟಕ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ರಾಜ್ಯಾದಂತ್ಯ ಅಂತರ ಜಿಲ್ಲೆ ಪ್ರಯಾಣ ಮಾಡುವ ಜನರಿಗಾಗಿ ಇ ಪಾಸ್ ಆರಂಭಿಸಲು ಮುಂದಾಗಿದ್ದೇವೆ. ಇಂದು ಸಂಜೆಯೊತ್ತಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಕೇವಲ ಅಂತರ ಜಿಲ್ಲೆ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದ್ದು, ಅಂತರ ರಾಜ್ಯ ಪಾಸ್ ಕುರಿತು ಮಾಹಿತಿ ನೀಡಿಲ್ಲ. ಇ ಪಾಸ್ ಪಡೆಯಲು ಯಾವ ವೆಬ್ ಸೈಟ್ಗೆ ಭೇಟಿ ನೀಡಬೇಕು, ಯಾವ ದಾಖಲೆ ಸಲ್ಲಿಸಬೇಕು ಮತ್ತು ಪಾಸ್ ಪಡೆಯಲು ಯಾರು ಅರ್ಹರು ಎಂಬ ವಿಷಯಗಳ ಜೊತೆ ಡಿಜಿಪಿ ಲಿಂಕ್ ಹಂಚಿಕೊಳ್ಳಲಿದ್ದಾರೆ.