ಬೆಂಗಳೂರು, ಏಪ್ರಿಲ್ 10, 2020 (www.justkannada.in): ಕರ್ನಾಟಕ ಪೊಲೀಸ್ ಇಲಾಖೆ ನಕಲಿ ಸುದ್ದಿಗಳನ್ನ ಪತ್ತೆಹಚ್ಚಲು ನ್ಯೂಸ್ ಬಸ್ಟಿಂಗ್ ವೆಬ್ಸೈಟ್ ಪ್ರಾರಂಭಿಸಿದೆ.
ಸುದ್ದಿಯ ನಿಜಾಂಶಕ್ಕೆ factcheck.ksp.gov.in” ಅನ್ನು ಗಮನಿಸಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ. ಇನ್ನು ಈ ಟ್ವೀಟ್ಗೆ ಸಾಕಷ್ಟು ಟ್ವೀಟ್ಗಳು ಬಂದಿವೆ.
ಈಗಾಗಲೇ ಈ ವೆಬ್ಸೈಟ್ನಲ್ಲಿ ನಕಲಿ ಸುದ್ದಿಗಳ ಗುಂಪನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಈ ಹಿಂದೆ ಕರೆನ್ಸಿ ಸಂಬಂದ ಹಾಗೂ ಇತರೆ ವಿಚಾರಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದವರನ್ನ ನಾವಿಲ್ಲಿ ಗಮನಿಸಬಹುದಾಗಿದೆ.
ಕೊರೊನಾ ವೈರಸ್ ಭೀತಿಯಲ್ಲಿ ನಕಲಿ ಸುದ್ದಿಗಳು ವ್ಯಾಪಾಕವಾಗಿ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತಿಚಿಗೆ ನಡೆದಿದ್ದ ಅನ್ಯದರ್ಮದ ಸಮಾವೇಶ ಹಾಗೂ ಅಲ್ಲಿ ನಡೆದ ಕಾರ್ಯಕ್ರಮ ವಿಚಾರ ಕುರಿತು ಸುಳ್ಳು ಮಾಹಿತಿಯನ್ನ ಹರಿಬಿಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಸಂಕಷ್ಟ ಗ್ಯಾರಂಟಿ ಎಂದು ಅರಿತಿರುವ ಕರ್ನಾಟಕ ಪೊಲೀಸರು ನಕಲಿ ಸುದ್ದಿ ಪತ್ತೆ ಹಚ್ಚುವ ವೆಬ್ಸೈಟ್ ಲಾಂಚ್ ಮಾಡಿದ್ದಾರೆ.