ಬೆಂಗಳೂರು, ಆ.04, 2021 : (www.justkannada.in news ) 22 ವರ್ಷಗಳ ನಂತರ ಉಪ ಮುಖ್ಯಮಂತ್ರಿ ಗಳಿಲ್ಲದ ಸಚಿವ ಸಂಪುಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರದ್ದು.
1989-94 ರಲ್ಲಿ ಅಧಿಕಾರಕ್ಕೆ ಮರಳಿ ಬಂದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಪದಚ್ಯತಿಯ ನಂತರದಲ್ಲಿ ಮೂರು ಮುಖ್ಯಮಂತ್ರಿ ಗಳನ್ನು ಕಂಡು, ಪ್ರಥಮ ಬಾರಿಗೆ ಕಾಂಗ್ರೆಸ್ ವರಿಷ್ಠ ಮಂಡಳಿ ಎಸ್ ಎಂ ಕೃಷ್ಣ ಅವರನ್ನು ವೀರಪ್ಪ ಮೊಯಿಲಿ ಮಂತ್ರಿ ಮಂಡಲದಲ್ಲಿ ಉಪ ಮುಖ್ಯಮಂತ್ರಿ ಮಾಡಿತು.
ತದನಂತರದಲ್ಲಿ ಅಧಿಕಾರಕ್ಕೆ ಬಂದ ಜನತಾ ದಳದ ಸರ್ಕಾರದಲ್ಲಿ ಜೆ ಹೆಚ್ ಪಟೇಲ್, ಆ ಹುದ್ದೆ ಅಲಂಕರಿಸಿದರು. ಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದ ನಂತರ, ಪಟೇಲರು ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ. ಹೀಗೆ ಉಪ ಮುಖ್ಯಮಂತ್ರಿ ಗಳ ನೇಮಕ ಅಭಾದಿತವಾಗಿ ಎಲ್ಲಾ ಸರ್ಕಾರದಲ್ಲೂ ನಡದಿತ್ತು .
ಇದಕ್ಕೆ ಅಪವಾದ ಎಂಬಂತೆ, 1999-2004 ರಲ್ಲಿ ಎಸ್ ಎಂ ಕ್ರಷ್ಣ ಸರಕಾರ ದಲ್ಲಿ ಉಪ ಮುಖ್ಯಮಂತ್ರಿ ನೇಮಕ ಮಾಡಿರಲಿಲ್ಲ.
೨೦೦೪-೨೦೦೭ ರವರಗೆ ಇದ್ದ ಸಮ್ಮಿಶ್ರ ಸರ್ಕಾರ ದಲ್ಲಿ ಧರಂ ಸಿಂಗ್ ಸಂಪುಟದಲ್ಲಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ. ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ದಲ್ಲಿ ಯಡಿಯೂರಪ್ಪ ಉಪ ಮುಖ್ಯ ಮಂತ್ರಿ ಯಾಗಿದ್ದರು.
ಇದೊಂದು ಅವಧಿ ಬಿಟ್ಟರೆ ಇಪ್ಪತ್ತೆರಡು ವರ್ಷಗಳ ನಂತರ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಗಳನ್ನು ನೇಮಿಸುವ ಅನಿಷ್ಠ ಪಧ್ಧತಿಗೆ ತಿಲಾಂಜಲಿ ನೀಡಲಾಗಿದೆ.
ಇದಕ್ಕೆ ಬಿಜೆಪಿ ವರಿಷ್ಠರ ಸಾಥ್ ಸಹ ಇದೆ. ನಾಲ್ಕಾರು ಮಂದಿ ಉಪ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿಗೆ ಇಳಿದಿದ್ದೆ ಇದಕ್ಕೆ ಕಾರಣವಿರಬಹುದು. ಯಡಿಯೂರಪ್ಪ ನವರ ಮಂತ್ರಿ ಮಂಡಲ ದಲ್ಲಿ ಮೂವರು ಉಪ ಮುಖ್ಯ ಮಂತ್ರಿಗಳಿದ್ದರು. ಇದು ಸಹ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು. ಬಹುಶಃ, ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ವರಿಷ್ಠರು ಈ ಬಾರಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.
ಸಂವಿಧಾನಾತ್ಮಕವಾಗಿ ಉಪ ಮುಖ್ಯಮಂತ್ರಿ ಹುದ್ದೆಯೇ ಇಲ್ಲಾ. ಇದು ರಾಜಕೀಯ ಅನುಕೂಲ ಕ್ಕಾಗಿ ಸೃಷ್ಠಿಸಿದ ಹುದ್ದೆಯೇ ವಿನ: ಬೇರೇನೂ ಇಲ್ಲಾ.
ಬಿ ಶ್ರೀರಾಮುಲು ರವರಿಗೆ ಉಪ ಮುಖ್ಯ ಮಂತ್ರಿ ಮಾಡಲೇಬೇಕು ಎಂಬ ಬೇಡಿಕೆ ಅವರ ಸಮುದಾಯದ ಸ್ವಾಮೀಜಿಗಳಿಂದಲೇ ಬಂದಿತ್ತು. ಆದರೆ ಬಿಜೆಪಿ ಇದಕ್ಕೆ ಸೊಪ್ಪು ಹಾಕಲಿಲ್ಲಾ.
-ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಮಾಜಿ ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ.
ENGLISH SUMMARY….
After 22 years Basavaraj Bommai led government is special because of this reason..!
Bengaluru, August 4, 2021 (www.justkannada.in): Basavaraj Bommai’s cabinet is considered as special because of absence of the posts of Deputy Chief Ministers’ after 22 years!
Yes. The State saw three Chief Ministers in between 1989-94 under the Congress party rule after the downfall of then Chief Minister Veerendra Patil. S.M. Krishna was made the Deputy Chief Minister in Veerappa Moily’s government.
Following this Janata Dal came to power and J.H. Patel became the Chief Minister. As H.D. Devegowda became the Prime Minister, J.H. Patel was made the Chief Minister and Siddaramaiah was the Deputy Chief Minister. Thus, the post of Deputy Chief Ministers existed in almost all the governments in the State.
There were no Deputy Chief Ministers only during the period of S.M. Krishna’s government between the years 1999-2004.
Siddaramaiah was the DCM again during Dharam Singh’s rule under the coalition government from the year 2004-2007. B.S. Yediyurappa was the DCM during the JDS-BJP coalition.
This time no DCM post has been declared may be because of the tough competition in the party by four to five people. There were three DCM’s in the B.S. Yediyurappa’s government, which earned wide criticism. May be because of this the BJP high command has refused DCMs post this time.
Constitutionally DCM post doesn’t exist. Whereas it is created only for political gain and nothing else.
Heads of several maths had demanded to provide DCM post for B. Sriramulu at any cost. However, it appears that the BJP high command has not budged to the pressure.
– M. Siddaraju, Senior Journalist, Former President, Karnataka Media Academy
key words : karnataka-politics-bjp-governament-no-DCMs-post-after-23years