ಮೈಸೂರು,ನವೆಂಬರ್, 18,2020(www.justkannada.in): ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಪ್ರಜಾಪಾರ್ಟಿ ಖಂಡಿಸಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಪ್ರಜಾಪಾರ್ಟಿ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಆರ್.ಲೋಕೇಶ್ ,ಉಪಚುನಾವಣೆ ದೃಷ್ಟಿಕೋನದಿಂದ ಪ್ರಾಧಿಕಾರ ರಚನೆಯಾಗಿದೆಯೇ ಹೊರತು ಅಭಿವೃದ್ಧಿ ದೃಷ್ಟಿಯಿಂದಲ್ಲ. ಇದು ಜನಾಂಗ, ಧರ್ಮ, ಸಮಾಜಗಳ ಒಡೆಯುವ ಹುನ್ನಾರ. ಅಸಂವಿಧಾನಿಕ ಪ್ರಾಧಿಕಾರ ಸ್ಥಾಪನೆ ಮಾಡಿ ಸಂವಿಧಾನಕ್ಕೆ ದ್ರೋಹ ಮಾಡಲಾಗುತ್ತಿದೆ ಎಂದು ಮರಾಠಿ ಪ್ರಾಧಿಕಾರ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಮರಾಠಿ ಪ್ರಾಧಿಕಾರಕ್ಕೆ 50ಕೋಟಿ ಬೃಹತ್ ಹಣ ಮೀಸಲಿಟ್ಟು ಉಪಚುನಾವಣೆಗೆ ಆಮಿಷ ಒಡ್ಡಲಾಗ್ತಿದೆ. ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿ ಜಾತಿ ಜಾತಿಗಳ ನಡುವಿನ ಸಾಮರಸ್ಯ ಕದಡಲಾಗುತ್ತಿದೆ. ಈ ಹಿನ್ನೆಲೆ ಸರ್ಕಾರದ ವಿರುದ್ಧ “ಕರ್ನಾಟಕ ಬಚಾವೋ ಸರ್ಕಾರ ಹಠಾವೋ” ಕಾರ್ಯಕ್ರಮ ನಡೆಸುತ್ತೇವೆ ಎಂದು ತಿಳಿಸಿದರು. ಹಾಗೆಯೇ ಕೂಡಲೇ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚನೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದರು.
Key words: Karnataka Prajaparty- condemns -government’s- decision -Marathi Development Authority