ಪಬ್ಲಿಕ್ ಟಿವಿಯ ಈ ‘ ಖಾಸಗಿ ಸಂಗತಿ’ ಓದಿದ ಮೇಲೆ ಸಂಪಾದಕ ಎಚ್.ಆರ್.ರಂಗನಾಥ್ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ..?

Karnataka-public.tv-Bangalore-editor-h.r.ranganath-journalist

 

ಮೈಸೂರು, ಡಿ.03, 2021 : (www.justkannada.in news ) : ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಈಗಷ್ಟೆ ತಮ್ಮ ಮಗಳ ವಿವಾಹ ಮಾಡಿ ಮುಗಿಸಿದ್ದಾರೆ. ಈ ವಿವಾಹದ ಆರತಕ್ಷತೆ ನಾಳೆ ಅಂದ್ರೆ ಡಿ. 4 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಈ ನಡುವೆ ಪಬ್ಲಿಕ್ ಟಿವಿಯ ವರದಿಗಾರರೊಬ್ಬರು, ಸಂಸ್ಥೆಯ ಖಾಸಗಿ ಸಂಗತಿಯೊಂದನ್ನು ಅಭಿಮಾನದಿಂದ ಹಂಚಿಕೊಂಡಿದ್ದಾರೆ. ಅವರೇ ಮೈಸೂರಿನ ಪಬ್ಲಿಕ್ ಟಿವಿ ಬ್ಯೂರೋ ಮುಖ್ಯಸ್ಥ ಕೆ.ಪಿ.ನಾಗರಾಜ್. ಈಗ ಒವರ್ ಟು ಕೆಪಿನಾ…

ಮತ್ತೊಮ್ಮೆ ಪಬ್ಲಿಕ್ ಟಿವಿಯ ಖಾಸಗಿ ವಿಚಾರವನ್ನು ನಿಮ್ಮ‌ ಮುಂದೆ ಹಂಚಿ ಕೊಳ್ತಿದ್ದೇನೆ. ಕಳೆದ ಬಾರಿಯಂತೆ ಈ ಬಾರಿಯೂ ಸ್ಪಷ್ಟಪಡಿಸುತ್ತೀದ್ದೇನೆ ಇದನ್ನು ಬರೆಯುತ್ತಿರುವುದು ಯಾರಿಗೋ ಟಾಂಗ್ ಕೊಡಲಿಕ್ಕೋ ಅಥವಾ ನಮ್ಮ ಸಂಸ್ಥೆ ಮಾತ್ರ ಗ್ರೇಟ್ ಎಂದು ಹೇಳಿ ಕೊಳ್ಳುವುದಕ್ಕೋ ಅಲ್ಲ. ಬದಲಾಗಿ ಒಂದು ಉತ್ತಮ ಮಾದರಿ ನಮ್ಮ ಕಣ್ಮುಂದೆ ಇರಲಿ ಎಂಬ ಕಾರಣಕ್ಕಷ್ಟೆ.

ಪಬ್ಲಿಕ್ ಟಿವಿ ಮುಖ್ಯಸ್ಥ ರಾದ ಎಚ್.ಆರ್. ರಂಗನಾಥ್ ಅವರ ಮಗಳ ಮದುವೆ ವಿಚಾರ ಎಲ್ಲರಿಗೂ ಗೊತ್ತಿದೆ. ಡಿ. 4 ಕ್ಕೆ ಮದುವೆ ಅರತಕ್ಷತೆ ಇದೆ. ಈ ಹಿನ್ನೆಲೆಯಲ್ಲಿ ರಂಗನಾಥ್ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಗೂ ಸಂಬಳ ಹೆಚ್ಚು ಮಾಡಿದ್ದಾರೆ. ಅದು ಕಳೆದ ಏಪ್ರಿಲ್ ತಿಂಗಳಿಂದ ಅನ್ವಯವಾಗುವುದರಿಂದ 8 ತಿಂಗಳ ಅರಿಯರ್ಸ್ ಬಂದಿದೆ.

ನನ್ನ ತಿಳುವಳಿಕೆ ಪ್ರಕಾರ ತಮ್ಮ ಮನೆಯ ಸಂಭ್ರಮಕ್ಕೆ ತಾವು ಮುನ್ನಡೆಸುತ್ತಿರೋ ಸಂಸ್ಥೆಯಲ್ಲಿನ ಸಿಬ್ಬಂದಿಗೆ ಸಂಬಳವನ್ನು ಹೆಚ್ಚು ಮಾಡಿದ್ದು ಜೊತೆಗೆ 8 ತಿಂಗಳ ಅರಿಯರ್ಸ್ ಕೂಡ ಕೊಡುತ್ತಿರುವುದು ಕನ್ನಡದ ಪತ್ರಿಕೋದ್ಯಮದ ಮಟ್ಟಿಗೆ ಹೊಸದು!. ಸಂಸ್ಥೆಯಲ್ಲಿನ ಕೆಲಸ ಮಾಡುವವರನ್ನು ಅಕ್ಷರಶಃ ತಮ್ಮ ಕುಟುಂಬದ ಸದಸ್ಯರು ಎಂದು ಭಾವಿಸಿದರೆ ಮಾತ್ರ ಇಂಥದ್ದು ಸಾಧ್ಯವೇನೋ? ಇದರ ಜೊತೆಗೆ ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರ ಮನೆಗೆ ರಂಗನಾಥ್ ಖುದ್ದಾಗಿ ಹೋಗಿ ಉಡುಗೊರೆ ನೀಡಿ ಮಗಳ ಮದುವೆಗೆ ಆಹ್ವಾನಿಸಿದ್ದಾರೆ.

Corona,Hardship,Publick TV Editor,Co.Owner,HR Ranganath,marvels ...!
ಮಾಧ್ಯಮ ಕ್ಷೇತ್ರ ಅಂತಲ್ಲ ಯಾವ ಕ್ಷೇತ್ರದ ಯಾವ ಸಂಸ್ಥೆಯ ಮುಖ್ಯಸ್ಥರು ಹೀಗೆ ವರ್ತಿಸಿರಲಾರರು!! ಒಂದು ಸಂಸ್ಥೆಯ ಮುಖ್ಯಸ್ಥರಿಗೆ ಆರ್ಥಿಕ ಶಿಸ್ತು ಇದ್ದಾಗ, ಸಂಸ್ಥೆಯ ನೌಕರರು ಬರೀ ನೌಕರರಲ್ಲ ಅವರು ತಮ್ಮ ಕುಟುಂಬ ಸದಸ್ಯರು ಎಂಬ ಮನೋಭಾವ ಇದ್ದಾಗ ಇಂತಹ ಸ್ಪಂದನೆಗಳು ಉಂಟಾಗುತ್ತವೇನೋ?. ನನ್ನ ಮಗಳ ಮದುವೆಗೆ ಬನ್ನಿ ಅಂತಾ ಗ್ರೂಪ್ ನಲ್ಲಿ ಒಂದು ಮೇಸೇಜ್ ಹಾಕಿದ್ದರು ನಡೆಯುತ್ತಿತ್ತು. ಜೊತೆಗೆ ಕರೋನಾದ ಹಿನ್ನೆಲೆಯಲ್ಲಿ ಸಂಬಳ ಹೆಚ್ಚಿಸಲ್ಲ ಎನ್ನಬಹುದಿತ್ತು. ಆದರೆ ಎಚ್.ಆರ್. ರಂಗನಾಥ್ ಈ ಯಾವ ಅಡ್ವಂಟೆಜ್ ಗಳನ್ನು ಬಳಸಿ ಕೊಳ್ಳಲಿಲ್ಲ. ಇದು ಅವರಿಗೆ ತಮ್ಮ ಸಂಸ್ಥೆಯ ನೌಕರರ ಮೇಲಿನ ಪ್ರೀತಿ, ಕಾಳಜಿಗೆ ಸಾಕ್ಷಿ!.‌

Corona,Hardship,Publick TV Editor,Co.Owner,HR Ranganath,marvels ...!
ಇಂತಹ ಮಾದರಿಗಳು ಪತ್ರಿಕೋದ್ಯಮದಲ್ಲಿ ಹೆಚ್ಚಲಿ!!
– ಕೆ.ಪಿ. ನಾಗರಾಜ್.

key words : Karnataka-public.tv-Bangalore-editor-h.r.ranganath-journalist