ಸುಪ್ರೀಂಕೋರ್ಟ್ ಗೆ ಕರ್ನಾಟಕ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

ನವದೆಹಲಿ,ಆಗಸ್ಟ್,18,2021(www.justkannada.in): ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಶಿಫಾರಸು ಮಾಡಿದೆ.

ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ಹೆಸರು ಸೇರಿ 9 ನ್ಯಾಯಮೂರ್ತಿಗಳ ಹೆಸರನ್ನ ಶಿಫಾರಸು ಮಾಡಲಾಗಿದೆ. ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ.   ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ ಅವರ ಹೆಸರು ಇದೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

ENGLISH SUMMARY…

Name of Karnataka’s Senior Judge B.V. Nagarathna recommended to Supreme Court
New Delhi, August 18, 2021 (www.justkannada.in): The Supreme Court Collegium, led by the Hon’ble Chief Justice of India N.V. Ramana has recommended nine names for the appointment of Supreme Court judges.
The name of the senior judge from Karnataka B.V. Nagarathna is also included in the list of the 9 recommended names. There are three women in the list of a total of nine recommended names. They are Telangana High Court Judge Hima Kohli, Karnataka High Court Judge B.V. Nagarathna, and Gujarat High Court Judge Bela Trivedi.
Places of nine judges are vacant in the Hon’ble Supreme Court. This number will increase to 10 as Justice Navin Sinha is retiring today.
Keywords: Supreme Court/ Nine judges/ name/ recommended/ B.V. Nagarathna/ women judges

Key words: Karnataka-Senior Justice- B.V Nagaratna-. Name – Recommended-supreme court