ಬೆಂಗಳೂರು, ಜುಲೈ 06, 2019 (www.justkannada.in): ಸಮ್ಮಿಶ್ರ ಸರಕಾರದ ವಿರುದ್ಧ ದಂಗೆ ಎದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಅತೃಪ್ತ ಶಾಸಕರಿಗೆ ಸ್ಪೀಕರ್ ಭೇಟಿ ಮರೀಚಿಕೆಯಾಗಿದೆ
ಸೋಮವಾರದವರೆಗೂ ಸ್ಪೀಕರ್ ರಮೇಶ್ ಕುಮಾರ್ ಅಲಭ್ಯ ಎಂದು ಉನ್ನತ ಮೂಲಗಳಿಂದ ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ಲಭ್ಯ.
ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡ 13 ಶಾಸಕರು ರಾಜೀನಾಮೆಗೆ ಮುಂದಾಗಿದ್ದರು. ಈ ಸಲುವಾಗಿಯೇ ಸ್ಪೀಕರ್ ಭೇಟಿಗೆ ಸಮಯ ನಿಗದಿ ಪಡಿಸಿ ತೆರಳಿದ್ದರು. ಆದರೆ ದಿಢೀರ್ ನಡೆದ ಬೆಳವಣಿಗೆಯಲ್ಲಿ ಅತೃಪ್ತ ಶಾಸಕರಿಗೆ ಸ್ಪೀಕರ್ ಭೇಟಿ ಅಸಾಧ್ಯ ಎನ್ನಲಾಗಿದೆ.