ಬೆಂಗಳೂರು , ಮೇ 16, 2021 (www.justkannada.in): ಶಿಕ್ಷಣ ಇಲಾಖೆಯ ಸೂಚನೆಯೊಂದು ಶಿಕ್ಷಕರನ್ನು ಗೊಂದಲಕ್ಕೀಡು ಮಾಡಿದೆ.
ಎರಡು ದಿನದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡುವಂತೆ ಸೂಚನೆ ನೀಡಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಕೊರೊನಾ 2ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಇದೀಗ ಏಕಾಏಕಿ ಈ ಸೂಚನೆ ಶಿಕ್ಷಕರಲ್ಲಿ ಆತಂಕದ ಜತೆಗೆ ಗೊಂದಲ ಮೂಡಿಸಿದೆ.
ಲಾಕ್ಡೌನ್ ಕಾರಣ ಶಿಕ್ಷಕರು ಶಾಲೆಗಳಿಗೆ ಭೇಟಿ ನೀಡಲಾಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡಲು ಎರಡು ದಿನ ಕಾಲಾವಕಾಶ ಕೊಟ್ಟು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಪರೀಕ್ಷೆ ಇಲ್ಲದೇ 1 ರಿಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಸರ್ಕಾರ ಆದೇಶಿಸಿದೆ. ಆನ್ಲೈನ್ ಮತ್ತು ವಿದ್ಯಾಗಮ ಅಡಿ ಕಲಿತ ಮಕ್ಕಳಿಗೆ ಈಗಾಗಲೇ ನಡೆಸಿರುವ ಪರೀಕ್ಷೆಗಳನ್ನು ಆಧರಿಸಿ ಅಂಕ ನೀಡಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸೂಚಿಸಿತ್ತು.