‘ ಮಂಗಳ’ ಕಾರ್ಯದತ್ತ ‘ಮುಖ’ ಮಾಡಿದ ಕರ್ನಾಟಕ ಪೊಲೀಸ್ ಇಲಾಖೆ..!

Karnataka State Police- is an equal opportunity - recruiting -men- women- transgenders.

 

ಬೆಂಗಳೂರು, ಡಿಸೆಂಬರ್ ೨೧, ೨೦೨೧ (www.justkannada.in news ): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ( transgenders ) ಮಂಗಳಮುಖಿಯರಿಗೂ ಹುದ್ದೆ ಸೇರ್ಪಡೆಗೆ ಅವಕಾಶ ಕಲ್ಪಿಸಿರುವುದು.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಹೌದು ನೀವು ಓದುತ್ತಿರುವುದು ನಿಜ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಮಾನ ಅವಕಾಶ ಕಲ್ಪಿಸುವ ಒಂದು ಸಂಸ್ಥೆ. ಈಗ ನಾವು ಪುರುಷರು, ಮಹಿಳೆಯರು ಹಾಗೂ ಟ್ರಾನ್ಸ್ ಜೆಂಡರ್ (ಮಂಗಳಮುಖಿಯರು) ರನ್ನು ಸಹ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿಶೇಷ ಮೀಸಲು ಉಪನಿರೀಕ್ಷಕರು (ಕೆಎಸ್‌ಆರ್‌ಪಿ & ಐಆರ್‌ಬಿ) (ಪುರುಷರು, ಮಹಿಳೆಯರು ಹಾಗೂ ಮಂಗಳಮುಖಿಯರು) ಮತ್ತು (ಇನ್-ಸರ್ವೀಸ್) ಕಲ್ಯಾಣ ಕರ್ನಾಟಕ (ಸ್ಥಳೀಯ) ಹಾಗೂ ಅವಶಿಷ್ಟ ವರ್ಗ-೭೦ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಡಿಸೆಂಬರ್ ೨೦, ೨೦೨೧ ರಿಂದ ಜನವರಿ ೧೮, ೨೦೨೨ರವರೆಗೆ ಸಲ್ಲಿಸಬಹುದು. ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ.

ಇಲಾಖೆ ನಿಗಧಿಪಡಿಸುವ ಅರ್ಜಿ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ www.recruitment.ksp.gov.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

 

 

ತಮಿಳು ನಾಡು ಮೊದಲು :

ದೇಶದ ಮೊದಲ ಮಂಗಳಮುಖಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದು ತಮಿಳು ನಾಡಿನಲ್ಲಿ. 2017 ರಲ್ಲಿ ಕೆ.ಪ್ರಿತೀಕ ಯಾಶೀನಿ ಚೆನ್ನೈನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದರು. ಇದೀಗ ಕರ್ನಾಟಕ ರಾಜ್ಯ ಸರಕಾರದ ಪೊಲೀಸ್ ಇಲಾಖೆ ಸಹ ಮಂಗಳಮುಖಿಯರಿಗೆ ಹುದ್ದೆ ಸೇರ್ಪಡೆಗೆ ಅವಕಾಶ ಕಲ್ಪಿಸಲು ಮುಂದಾಗಿದೆ.

key words : Karnataka State Police- is an equal opportunity – recruiting -men- women- transgenders.

  • Yes. You read it right! Karnataka State Police is an equal opportunity organisation. We are recruiting men, women and even transgenders.

* K Prithika Yashini has become the first Indian transgender to induct in the Chennai Police as a Sub-Inspector on October 9. She is country’s first transgender cop who has taken the charge of SI among the 111 sub-inspectors