1 ಟ್ರಕ್, 25 ಮಂದಿ : ತಮಿಳುನಾಡಿನಿಂದ ಬೆಂಗಳೂರಿಗೆ ಕದ್ದು ಮುಚ್ಚಿ ವಲಸಿಗರ ಆಗಮನ.

 

ಬೆಂಗಳೂರು, ಜೂ.04, 2020 : ( www.justkannada.in news ) ರಾಜಧಾನಿ ಬೆಂಗಳೂರಿಗೆ ಯಾವುದೇ ಅಡೆತಡೆ ಇಲ್ಲದೆ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಕದ್ದುಮುಚ್ಚಿ ಬರುತ್ತಿದ್ದಾರೆ. ಟ್ರಕ್ ಗಳ ಮೂಲಕ ಈ ಕಾರ್ಮಿಕರನ್ನು ಕದ್ದು ಕರೆತರುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವ ಅನುಮಾನವಿದೆ.

ಇಂದಿರಾನಗರದ ಎಚ್.ಎ.ಎಲ್.ಮೂರನೇ ಹಂತದ ಸಮೀಪ ಇಂದು ತಮಿಳುನಾಡಿನ 25ಕ್ಕೂ ಹೆಚ್ಚು ಮಂದಿ ಟ್ರಕ್ ಮೂಲಕ ಆಗಮಿಸಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಇದ್ಯಾವುದನ್ನು ಲೆಕ್ಕಿಸದೆ ಈ ಮಂದಿ ಪ್ರಯಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸಪ್ನಾ ಬುಕ್ ಹೌಸ್ ನ ಹಿಂಭಾಗದ ರಸ್ತೆಯಲ್ಲೇ ಈ ವಲಸೆ ಕಾರ್ಮಿಕರು ಇಳಿದಿರುವುದು. ಇಂದು ಬೆಳಗ್ಗೆ ಇವರೆನ್ನೆಲ್ಲಾ ಇಲ್ಲಿ ಇಳಿಸಿದ ಬಳಿಕ, ಟ್ರಕ್ ನಲ್ಲಿದ್ದ ಒರ್ವ ವ್ಯಕ್ತಿ ಅವರಿಂದ ತಲಾ 500 ರೂ. ಹಣ ಪಡೆದುಕೊಳ್ಳುತ್ತಿದ್ದ.

karnataka-tamilnadu-truk-labour-coming-illegally-to-bangalore

ಈ ಘಟನಾವಳಿಗಳು ಸಮೀಪದ ನಿವಾಸಿಯೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಬೇಕು. ಯಾವುದೇ ಮುನ್ನೆಚರಿಕೆ ಇಲ್ಲದೆ ನೆರೆರಾಜ್ಯ ತಮಿಳುನಾಡಿನಿಂದ ಬಂದ ಈ ಜನರನ್ನು ಮೊದಲಿಗೆ ಪತ್ತೆಹಚ್ಚಿ ಅವರನ್ನು ಕರೋನಾ ಪರೀಕ್ಷೆಗೆ ಒಳಪಡಿಸಬೇಕಾಗಿದೆ.

ಕರ್ನಾಟಕ ಹಾಗೂ ತಮಿಳುನಾಡು ಸಂಪರ್ಕಿಸುವ 12ಕ್ಕೂ ಹೆಚ್ಚು ರಸ್ತೆಗಳಿವೆ. ಆದರೆ ಸರಕಾರ ಕೇವಲ ಕೋಲಾರ, ಹೊಸರು ಮತ್ತು ಮೈಸೂರು ಭಾಗಗಳಲ್ಲಿ ಮಾತ್ರ ತಪಾಸಣೆ ನಡೆಸುತ್ತಿದೆ. ಉಳಿದ ಕಡೆಗಳಲ್ಲಿ ಯಾರು ಗಮನ ಹರಿಸದ ಕಾರಣ, ಇಂಥ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರು ಕೇಳಿ ಬಂದಿದೆ.

karnataka-tamilnadu-truk-labour-coming-illegally-to-bangalore

ಮಾಹಿತಿ, ಕೃಪೆ :  ಜಿ.ಉಲಗನಾಥನ್, ಹಿರಿಯ ಪತ್ರಕರ್ತ. (G Ulaganathan, senior journalist)

 

key words : karnataka-tamilnadu-truk-labour-coming-illegally-to-bangalore