ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ-ಸಚಿವ ಮುರುಗೇಶ್ ನಿರಾಣಿ.

ಬೆಂಗಳೂರು, ಸೆಪ್ಟೆಂಬರ್ 23,2021(www.justkannada.in):  ಕರ್ನಾಟಕವು ಜಾಗತಿಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿದ್ದು, ದೇಶದಲ್ಲೇ ಮೂರು ಕೈಗಾರಿಕಾ ‌ಕಾರಿಡಾರ್ ಗಳನ್ನು ‌ಹೊಂದಿದ ಏಕೈಕ ರಾಜ್ಯವಾಗಿದೆ ಎಂದು ‌ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಪ್ರಶಂಸಿದ್ದಾರೆ.

ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ ನಲ್ಲಿ ಕೆಐಎಡಿಬಿ ಆಯೋಜಿಸಿದ್ದ ಭಾರತದ 75ನೇ ಸ್ವಾತಂತ್ರ್ಯವದ ಸವಿನೆನಪಿಗಾಗಿ ಸಪ್ತಾಹದ ಸ್ವಾತಂತ್ರ್ಯ ಅಮೃತ ಮಹೋತ್ಸವ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹೂಡಿಕೆ ಮಾಡುವ ಜಾಗತಿಕ ಉದ್ಯಮಿಗಳಿಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ ತಾಣವಾಗಿದೆ. ಏಕೆಂದರೆ ನಾವು  ಇಲ್ಲಿಗೆ ಬರುವ ಉದ್ಯಮಿಗಳಿಗೆ ಅತ್ಯುತ್ತಮವಾದ ಹಾಗೂ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದು ಇಲ್ಲಿರುವ ಅವಕಾಶಗಳನ್ನು ತೆರೆದಿಟ್ಟರು.

“ಭಾರತದ ಮೂರು ಮಹಾನಗರಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸುವ ಮೂರು ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳನ್ನು ಹೊಂದಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (CBIC), ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ (BMEC) ಮತ್ತು ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ (HBIC) ಗಳನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್ (NICDC) ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.

ಕೈಗಾರಿಕಾ ವಲಯದಲ್ಲಿ ರಾಜ್ಯವು ಸಾಧಿಸಿರುವ ಪ್ರಗತಿಯನ್ನು ವಿವರಿಸಿದ ಅವರು, ಆಡಳಿತ ನಡೆಸಿರುವ ಸರ್ಕಾರಗಳು ದೇಶದಲ್ಲೇ  ಕರ್ನಾಟಕವನ್ನು ನಂ .1 ಸ್ಥಾನಕ್ಕೆ ‌ಕೊಂಡುಯ್ಯದು ಹೂಡಿಕೆದಾರ ಸ್ನೇಹಿ ರಾಜ್ಯವನ್ನಾಗಿ ಮಾಡಲು ಶ್ರಮಿಸಿದ್ದಾರೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕವು ಪ್ರಮುಖ ಉದ್ಯಮಗಳಿಗೆ ಆದ್ಯತೆಯ ತಾಣವಾಗಿ ಮಾರ್ಪಟ್ಟಿದೆ. ಏಕೆಂದರೆ ಇದು ವೆಚ್ಚದ ಸ್ಪರ್ಧಾತ್ಮಕ ಉತ್ಪಾದನಾ ವಾತಾವರಣವನ್ನು ಒದಗಿಸುತ್ತದೆ. ಕಳೆದ ದಶಕದಲ್ಲಿ 7.09 % ಜಿಎಸ್ ಡಿಪಿಯೊಂದಿಗೆ ಕರ್ನಾಟಕವು ಭಾರತದ 4 ನೇ ಅತಿದೊಡ್ಡ ಆರ್ಥಿಕತೆಯ ರಾಜ್ಯವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಶಂಸಿದರು.

2020- 21 ನೇ ಸಾಲಿನ ಮೊದಲ ‌ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲೇ ‘ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿ ಇನ್ನಷ್ಟು ದೊಡ್ಡ ‌ದೊಡ್ಡ ಉದ್ಯಮಿಗಳು ಹೂಡಿಕೆ ಮಾಡಲು ಮುಂದೆ ಬರಲಿದ್ದಾರೆ ಎಂಬ ವಿಶ್ವಾಸವನ್ನು  ವ್ಯಕ್ತಪಡಿಸಿದರು.

ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ತಲಾ ಆದಾಯವು 5 ನೇ ಸ್ಥಾನದಲ್ಲಿದೆ. 31 ಜಿಲ್ಲೆಗಳನ್ನು ಒಳಗೊಂಡಿರುವ ಜನಸಂಖ್ಯೆಯ ಪ್ರಕಾರ ಇದು 8ನೇ ಅತಿದೊಡ್ಡ ರಾಜ್ಯವಾಗಿದೆ, ಇದು ಕೇಂದ್ರೀಕೃತ ಹೂಡಿಕೆಗೆ ಆಯ್ಕೆಗಳನ್ನು ನೀಡುತ್ತದೆ. ಕಳೆದ 50 ವರ್ಷಗಳಲ್ಲಿ ಕರ್ನಾಟಕವು ಭಾರತದ ಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ. 400ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ನೆಲೆಯಾಗಿದೆ. “ಇದು ನಮಗೆ 75 ವರ್ಷಗಳ ಹೆಮ್ಮೆಯ ಪ್ರಯಾಣವಾಗಿದೆ” ಎಂದು ಹೇಳಿದರು.

700 ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ಜಾಗತಿಕ ಫಾರ್ಚೂನ್ 500 ಕಂಪನಿಗಳನ್ನು ಒಳಗೊಂಡಂತೆ ಕರ್ನಾಟಕವನ್ನು ತಮ್ಮ ಪ್ರಮುಖ ಹೂಡಿಕೆ ಪ್ರದೇಶವಾಗಿ ಬೆಂಗಳೂರಿನ ಸುತ್ತ ಕೇಂದ್ರೀಕರಿಸಿ ವಿಶ್ವದ 4 ನೇ ಅತಿದೊಡ್ಡ ಟೆಕ್ನಾಲಜಿ ಕ್ಲಸ್ಟರ್ ಆಗಿ ಮಾಡಿವೆ. ರಾಜ್ಯದಲ್ಲಿ ಅತ್ಯಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲು‌ ಇದು‌ ಕಾರಣೀಭೂತವಾಗಿದೆ ಎಂದು ವಿವರಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರವನ್ನು ವಿವರಿಸಿದ ಸಚಿವ ಮುರುಗೇಶ್ ನಿರಾಣಿ ಅವರು, ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ರಾಜ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

“ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಪಾತ್ರ ‌ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕಳೆದ 75 ವರ್ಷಗಳಲ್ಲಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯದ ಕೊಡುಗೆ ಅನುಕರಣೀಯವಾಗಿದೆ. ಕರ್ನಾಟಕವು ಯಾವಾಗಲೂ ಪ್ರವರ್ತಕ ರಾಜ್ಯವಾಗಿದೆ” ಎಂದು ಹೇಳಿದರು.

ಭೂ ಸುಧಾರಣೆಗಳು, ಪಂಚಾಯತ್ ರಾಜ್ ಸುಧಾರಣೆಗಳು, ಕೈಗಾರಿಕಾ ನೀತಿಗಳು, ನಾವೀನ್ಯತೆ ಮತ್ತು ವಿವಿಧ ಸಾರ್ವಜನಿಕ ನೀತಿಗಳು ಜ್ಞಾನ ಮತ್ತು ಕೌಶಲ್ಯ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆಗೆ ಬಾಗಿಲು ತೆರೆದಿದೆ ಎನ್ನುವ ‌ಮೂಲಕ ಹೂಡಿಕೆದಾರರನ್ನು ರಾಜ್ಯಕ್ಕೆ ನಿರಾಣಿ‌ ಅವರು ಆಹ್ವಾನ ‌ಕೊಟ್ಟರು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ರಮಣರೆಡ್ಡಿ,ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ.ಎನ್. ಶಿವಶಂಕರ್, ತುಮಕೂರು ಜಿಲ್ಲಾಧಿಕಾರಿ  ವೈ.ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ENGLISH SUMMARY…

KARNATAKA ONLY STATE TO HAVE THREE MAJOR NATIONAL INDUSTRIAL CORRIDORS: NIRANI

• Karnataka having three approved major industrial corridors
• Industrial Corridors connecting Bengaluru with three metropolis
• Nirani says state offers excellent investment opportunities
• CBIC will be a great success story for state and nation
• Karnataka is the top FDI recipient for Q1, FY 2021-22

Bengaluru, September 23: Pitching Karnataka as the best place for global investors, Large and Medium Industries Minister Murugesh Nirani on Thursday said Karnataka will be the only state in India to have three major Industrial Corridors. The minister was speaking at a programme organised by the KIADB as part of Azadi Ka Amrit Mahotsav (platinum jubilee celebrations of Independence) at a private hotel here.

Highlighting the thriving business ecosystem in the State, Minister Murugesh Nirani said Karnataka offers excellent investment opportunities. “Karnataka will be the only state in India to have three major Industrial Corridors connecting Bengaluru with three metropolises of India. The three Industrial Corridors; Chennai-Bangalore Industrial Corridor (CBIC), Bangalore-Mumbai Economic Corridor (BMEC) and Hyderabad-Bangalore Industrial Corridor (HBIC) are being developed by the National Industrial Corridor Development Corporation Ltd. (NICDC). And implementation of CBIC is gaining momentum. Our Government will take necessary measures to make sure that CBIC will be a great success story for Karnataka and the nation,” Nirani said.

Explaining the state’s dominant position in the industrial sector, Nirani said successive governments strived to make Karnataka no.1 investor-friendly state in India. “Karnataka has become a preferred destination for leading businesses as it provides a cost competitive manufacturing environment. With 7.09 % GSDP during the last decade Karnataka is emerging as the 4th largest economy in India and Per Capita Income is 5th highest among other states. It is the 8th largest state by population comprising 31 districts that offer choices for focused investments. We are in the 4th spot in terms of skilled workforce and now we have reached the pinnacle of attaining No. 1 position in terms of attracting FDIs in India for Q1,FY 2021-22,” stated the minister.

The minister said Karnataka has emerged as a knowledge hub of India in the last 50 years and home to more than 400 Research & Development centres. “It is a proud journey of 75 years for us wherein more than 700 MNCs including majority of the global Fortune 500 Companies have chosen Karnataka as their major investment area concentrating around Bengaluru and making it 4th largest Technology Cluster in the world. And highest employment opportunities are also created in the state,” Nirani added.

Pointing out Karnataka’s role in nation building, the minister said the state played a pivotal role in taking the country on the path of development. “Karnataka’s participation in the Independence movement is well recorded in history and during the last 75 years, the state’s contribution to the nation’s overall development is exemplary. Karnataka has always been a pioneering state, be it land reforms, Panchayati Raj reforms, industrial policies, innovation and various other public policies that have opened the doors for investments in knowledge and skill-based industries,” Nirani expressed.

Key words: Karnataka- three- approved -major –industrial- corridors-minister-murugesh nirani