ಮೈಸೂರು, ಜೂ.02, 2020 : ( www.justkannada.in news ) ಹತ್ತು ಸಾವಿರ ವೋಲ್ಟ್ಸ್ ಬಲ್ಬ್ ಹಾಕಿ ಹುಡುಕಿದರು ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂಥ ನಾಯಕ ಸಿಗಲ್ಲ. ಆದರೆ ಯಡಿಯೂರಪ್ಪನಿಗೆ ಹಿತ್ತಾಳೆ ಕಿವಿ. ಚಾಡಿ ಮಾತುಗಳನ್ನ ಹೆಚ್ಚಾಗಿ ಕೇಳ್ತಾರೆ. ಅವರ ಸುತ್ತಮುತ್ತ ಇರುವವರೆ ಚಾಡಿ ಹೇಳ್ತಾರೆ. ಚಾಡಿ ಹೇಳಲೆಂದೇ ಇಬ್ಬರು ಸಲಹೆಗಾರರನ್ನು ಇಟ್ಟುಕೊಂಡಿದ್ದಾರೆ.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿ ಹೇಳಿದಿಷ್ಟು….
ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಾಟಾಳ್, ಸಿಎಂ ಯಡಿಯೂರಪ್ಪರನ್ನ ಕೆಳಗಿಸಿದ್ರೆ ಬಿಜೆಪಿಗೆ ಉಳಿಗಾಲವಿಲ್ಲ. ಯಡಿಯೂರಪ್ಪ ಮತ್ತು ಅವರ ಸರ್ಕಾರ ಭದ್ರವಾಗಿದೆ. ಈಗಿರುವ ರಾಜ್ಯದ ಎಲ್ಲ ಶಾಸಕರು,ಸಂಸದರು ಯಡಿಯೂರಪ್ಪ ಅವರಿಂದಲೇ ಬೆಳೆದಿದ್ದು. ಬಿಜೆಪಿ ಅಂದ್ರೆ ಯಡಿಯೂರಪ್ಪ, ಯಡಿಯೂರಪ್ಪ ಅಂದ್ರೆ ಬಿಜೆಪಿ.
ಆದರೆ, ಚಾಡಿ ಮಾತು ಕೇಳುವುದು ಮತ್ತು ದ್ವೇಷ ರಾಜಕೀಯವನ್ನ ಯಡಿಯೂರಪ್ಪ ಬಿಡಬೇಕು. ಯಡಿಯೂರಪ್ಪನಿಗೆ ಹಿತ್ತಾಳೆ ಕಿವಿ. ಚಾಡಿ ಮಾತುಗಳನ್ನ ಹೆಚ್ಚಾಗಿ ಕೇಳ್ತಾರೆ. ಅವರ ಸುತ್ತಮುತ್ತ ಇರುವವರೆ ಚಾಡಿ ಹೇಳ್ತಾರೆ. ಚಾಡಿ ಹೇಳಲೆಂದೆ ಇಬ್ಬರು ಸಲಹೆಗಾರರನ್ನು ಇಟ್ಟುಕೊಂಡಿದ್ದಾರೆ. ಚಾಡಿ ಮಾತು ಕೇಳುವುದು ಮತ್ತು ದ್ವೇಷ ರಾಜಕೀಯವನ್ನ ಯಡಿಯೂರಪ್ಪ ಬಿಡಬೇಕು. ಇಂತಹ ವಿಚಾರಗಳನ್ನ ಯಡಿಯೂರಪ್ಪ ಬಿಟ್ಟಲ್ಲಿ ಇಂತಹ ನಾಯಕ ಬಿಜೆಪಿಯಲ್ಲಿ ಮತ್ತೊಬ್ಬ ಇಲ್ಲ ಎಂದು ಗುಣಗಾನ ಮಾಡಿದರು.
ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ :
ನನ್ನದು ಅವರದ್ದು 40 ವರ್ಷದ ಸ್ನೇಹ. ಹೀಗಾಗಿ ಅವರ ಅರೋಗ್ಯ ವಿಚಾರಿಸಿದೆ ಅಷ್ಟೇ. ಬಿಜೆಪಿಯವ್ರು ನನ್ನನ್ನ ಎಂ ಎಲ್ ಸಿ ಮಾಡಿದ್ರೆ ಬಿಜೆಪಿ ಗೆ ಶಕ್ತಿ ಗೌರವ ಬರುತ್ತೆ. ರಾಜ್ಯದ ಜನ ಅವರನ್ನ ಮೆಚ್ಚುತ್ತಾರೆ. ನಾನು ಯಾರನ್ನು ಎಂ ಎಲ್ ಸಿ ಮಾಡಿ ಅಂತಾ ಕೇಳಿಲ್ಲ. ನಾನು ಎಂ ಎಲ್ ಎ ಅಗಿದ್ದವನು. ಎಂ ಎಲ್ ಸಿ ಮಾಡಿದ್ರೆ ರಾಜ್ಯಕ್ಕೆ, ಅವರಿಗೆ ಗೌರವ. ಇದು ಅವರಿಗೆ ಬಿಟ್ಟಿದ್ದು.
ಚುನಾವಣೆ ಸ್ಪರ್ಧೆ :
ಗುಲ್ಬರ್ಗ ಈಶಾನ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯವಿದೆ. ಇನ್ನೂ ಯಾವ ಕ್ಷೇತ್ರ ಅಂತ ನಿರ್ಧಾರ ಮಾಡಿಲ್ಲ. ಒಟ್ಟಿನಲ್ಲಿ ಚುನಾವಣೆಲಿ ಸ್ಪರ್ಧೆ ಮಾಡೋದು ಖಚಿತ ಎಂದು ಸ್ಪಷ್ಟವಾಗಿ ಹೇಳಿದ ವಾಟಾಳ್ ನಾಗರಾಜ್, ಇನ್ನೂ ಮೂರು ಜನ್ಮ ಕಳೆದ್ರು ಬಿಜೆಪಿ ಸೇರೊಲ್ಲ ಎಂದು ಖಡಾಖಂಡಿತವಾಗಿ ನುಡಿದರು.
ಪರೀಕ್ಷೆ ಕೈಬಿಡಿ :
ಎಸ್ ಎಸ್ ಎಲ್ ಸಿ, ಪದವಿ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಜತೆಗೆ ಆನ್ ಲೈನ್ ಶಿಕ್ಷಣ ಪದ್ದತಿ ಕೈಬಿಡವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.
ನಗರದ ಹಾರ್ಡ್ಜಿಂಗ್ ವೃತ್ತದ ಬಳಿ ಮೊಬೈಲ್ ಪೋನ್ ಹಿಡಿದು ಪ್ರತಿಭಟನೆ. ಆನ್ ಲೈನ್ ಇದೊಂದು ದೊಡ್ಡ ನರಕ. ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಸರಿ ಇಲ್ಲ, ಕೆಲವರಿಗೆ ಮೊಬೈಲ್ ಬಳಸೋಕೆ ಬರೋಲ್ಲ. ಕೊರೊನ ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಮಂತ್ರಿಗಳು ಜವಬ್ದಾರಿ ತೆಗೆದುಕೊಳ್ಳಬೇಕು. ಎಸ್ ಎಸ್ ಎಲ್ ಸಿ, ಡಿಗ್ರಿ ಪರೀಕ್ಷೆಗಳನ್ನ ನಡೆಸಕೂಡದು. ಯಾವುದೇ ಕಾರಣಕ್ಕ ಆನ್ ಲೈನ್ ಶಿಕ್ಷಣ ಮಾಡಕೂಡದು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
oooo
key words : karnataka-vatal.nagaraj-mysore-protest-against-online-exams