ಬೆಂಗಳೂರು,ಡಿಸೆಂಬರ್,25,2021(www.justkannada.in): 2019 ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದೆ.
ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಘಟಕಗಳನ್ನು ಹೊಂದಿರುವ
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಬೃಹತ್ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ.
1932 ರಲ್ಲಿ ಡಿ.ವಿ.ಗುಂಡಪ್ಪ (ಡಿವಿಜಿ) ಹುಟ್ಟು ಹಾಕಿದ ಸಂಘಟನೆಗೆ ಈಗ ತೊಂಬತ್ತು ವಸಂತಗಳು ತುಂಬುತ್ತಿರುವುದು ವೃತ್ತಿ ಬಾಂಧವರಿಗೆ ಅಭಿಮಾನದ ಮತ್ತು ಹೆಮ್ಮೆಯ ಸಂಗತಿ. ಸಂಘಟನೆ ಪತ್ರಕರ್ತರ ಹಿತಕ್ಕಾಗಿ ನಿರಂತರವಾಗಿ ಬದ್ದತೆಯಿಂದ ಕೆಲಸ ಮಾಡುತ್ತಿರುವುದು ಭರವಸೆಯಾಗಿದೆ.
ಪ್ರತಿ ವರ್ಷವೂ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ವೃತ್ತಿ ಬಾಂಧವರ ಸೇವೆ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು ಕೋವಿಡ್ ಕಾರಣದಿಂದ ಈ ಬಾರಿ ತಡವಾಗಿದೆ. 2019 ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಪ್ರಶಸ್ತಿಯನ್ನು ಪಡೆದವರ ಪಟ್ಟಿ ಈ ಕೆಳಕಂಡಂತಿದೆ.
ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳು
ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:
ಹುಣಸವಾಡಿ ರಾಜನ್
ಸಂಪಾದಕರು
ಸಂಯುಕ್ತ ಕರ್ನಾಟಕ
ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ:
ದಿನೇಶ್ ಅಮೀನ್ ಮಟ್ಟು
ಹಿರಿಯ ಪತ್ರಕರ್ತರು
ಪಿ.ರಾಮಯ್ಯ ಪ್ರಶಸ್ತಿ:
ವಿಶ್ವೇಶ್ವರ ಭಟ್
ಸಂಪಾದಕರು, ವಿಶ್ವವಾಣಿ
ಮಹದೇವ ಪ್ರಕಾಶ್ ಪ್ರಶಸ್ತಿ:
ಎಂ.ಕೆ.ಭಾಸ್ಕರರಾವ್
ಹಿರಿಯ ಪತ್ರಕರ್ತರು
ಮಾ.ರಾಮಮೂರ್ತಿ ಪ್ರಶಸ್ತಿ:
(ನಾಡು ನುಡಿಗೆ ಸೇವೆ)
ವೆಂಕಟೇಶ್ ಸಂಪಾದಕರು, ಈ ಸಂಜೆ
ಅಚ್ಯುತ ಚೇವಾರ್, ಕಾಸರಗೋಡು
ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ :
ಜಗದೀಶ್ ಬುರ್ಲಬಡ್ಡಿ, ವಿಜಯವಾಣಿ, ಹುಬ್ಬಳ್ಳಿ.
ವಿನಾಯಕಭಟ್ ಮುರೂರು, ಹೊಸದಿಗಂತ
ಅಭಿಮಾನಿ ಪ್ರಕಾಶನ ಪ್ರಶಸ್ತಿ:
ಟಿ.ವಿ.ಶಿವಾನಂದನ್, ಕಲಬುರ್ಗಿ
ವಿ.ಎನ್.ತಾಳಿಕೋಟಿ, ಕೊಪ್ಪಳ
ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ:
ಅಶ್ವಿನಿ ಶ್ರೀಪಾದ್, ಇಂಡಿಯನ್ ಎಕ್ಸ್‌ಪ್ರೆಸ್
ಹೃಷಿಕೇಶ್ ಬಹದ್ದೂರ್ ದೇಸಾಯಿ, ದಿ ಹಿಂದು, ಬೆಳಗಾವಿ
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ:
ಬಿ.ಪಿ.ಮಲ್ಲಪ್ಪ, ಸಂಜೆವಾಣಿ
ಶ್ರೀನಿವಾಸ ಹಳಕಟ್ಟಿ,
ರಾಜ್ ಟಿವಿ.
ಎಂ.ಸಿ.ಶೋಭಾ, ಸುವರ್ಣ ಟಿವಿ
ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ:
ಗುಡಿಪುರ ನಂದೀಶ್, ಚಾಮರಾಜನಗರ
ಬಾ.ಮ.ಬಸವರಾಜಯ್ಯ, ದಾವಣಗೆರೆ.
ಬದರಿನಾಥ ಹೊಂಬಾಳೆ ಪ್ರಶಸ್ತಿ:
ಕೌಶಲ್ಯ ದತ್ತಾತ್ರೇಯ ಫಳನಾಕರ್, ವಿಜಯಪುರ
ಎಸ್.ಬಿ.ಜೋಷಿ, ಕಲಬುರ್ಗಿ
ರಾಜಶೇಖರ ಕೋಟಿ ಪ್ರಶಸ್ತಿ:
ನಾಗಣ್ಣ, ಸಂಪಾದಕರು, ಪ್ರಜಾಪ್ರಗತಿ, ತುಮಕೂರು.
ಜಿ.ರಾಜೇಂದ್ರ, ಪ್ರಧಾನ ಸಂಪಾದಕರು, ಶಕ್ತಿ ಪತ್ರಿಕೆ, ಕೊಡಗು.
ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ:
ವಿಜಯ ಭರಮಸಾಗರ,
ಕೆ.ಬಿ.ಪಂಕಜ
ಅತ್ಯುತ್ತಮ ಮುಖಪುಟ ಪ್ರಶಸ್ತಿ :
ವಿಜಯ ಕರ್ನಾಟಕ
——–
ಆಹ್ವಾನಿತ ಅತ್ಯುತ್ತಮ ವರದಿಗಳಿಗೆ ( ತೀರ್ಪುಗಾರರ ಆಯ್ಕೆ) ನೀಡುವ ಕೆಯುಡಬ್ಲ್ಯೂಜೆ ಪ್ರಶಸ್ತಿಗಳು:
ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ:
ಈಶ್ವರ ಹೋಟಿ, ಬೈಲಹೊಂಗಲ, ಬೆಳಗಾವಿ
ಎಂ.ಎಚ್.ನಧಾಫ್, ಮುಧೋಳ, ಬಾಗಲಕೋಟ
ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ:
ಸುಭಾಷ್ ಚಂದ್ರ ಎಂ.ಎಸ್., ಇಂಡಿಯನ್ ಎಕ್ಸ್‌ಪ್ರೆಸ್, ಕಾರವಾರ
ಕರಿಯಪ್ಪ ಎಚ್ ಚೌಡಕ್ಕನವರ, ರಟ್ಟಿಹಳ್ಳಿ, ಹಾವೇರಿ ಜಿಲ್ಲೆ
ಗಿರಿಧರ್ ಪ್ರಶಸ್ತಿ (ಅಪರಾಧ ವರದಿ):
ಬೆಂಗಳೂರು
ಗಿರೀಶ್ ಮಾದೇನಹಳ್ಳಿ,
ಕನ್ನಡ ಪ್ರಭ
ವಾದಿರಾಜ್, ಉದಯಕಾಲ
ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ:
ವಿಜಯ್ ಕೋಟ್ಯಾನ್, ವಿಜಯ ಕರ್ನಾಟಕ, ಮಂಗಳೂರು
ಕೃಷ್ಣಿಶಿರೂರು, ಹುಬ್ಬಳ್ಳಿ
ಕೆ.ಎ.ನೆಟ್ಟಕಲ್ಲಪ್ಪ (ಕ್ರೀಡಾ ವರದಿ):
ಕಾರ್ತಿಕ್. ಕೆ.ಕೆ., ಮೈಸೂರು
ಟಿ.ಎನ್.ಪದ್ಮನಾಭ, ಮಾಗಡಿ
ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ:
ಮುರುಳಿಪ್ರಸಾದ್, ಕೋಲಾರವಾಣಿ
ಶಿವಕುಮಾರ್ ಬೆಳ್ಳಿತಟ್ಟೆ, ವಿಶ್ವವಾಣಿ
ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ:
ಉಮಾ ವೇಣೂರು, ಸುಧಾ
ಎಸ್.ಜಯರಾಂ, ಬಂಟ್ವಾಳ
ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ:
ವಿಶ್ವನಾಥ್ ಸುವರ್ಣ
ಆಸ್ಟ್ರೋ ಮೋಹನ್, ಉಡುಪಿ
ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ:
ಸೋಮಶೇಖರ, ನಮ್ಮ ನಾಡು, ಶಿವಮೊಗ್ಗ
ಬಾಲಕೃಷ್ಣ ಭೀಮಗುಳಿ,
ಕುಕ್ಕೆ ಸುಬ್ರಹ್ಮಣ್ಯ
ಆರ್.ಎಲ್. ವಾಸುದೇವ ರಾವ್ (ವನ್ಯಪ್ರಾಣಿ)ಪ್ರಶಸ್ತಿ:
ಜೋಸೆಫ್ ಡಿಸೋಜ, ಸಕಲೇಶಪುರ.
ಶಿವು ಹುಣಸೂರು, ಮೈಸೂರು.
ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ:
ಕೆ.ಎಂ.ಮಂಜುನಾಥ್, ಕನ್ನಡ ಪ್ರಭ, ಬಳ್ಳಾರಿ.
ಬಸವರಾಜ ಪರಪ್ಪ ದಂಡಿನ, ಗದಗ
ಮಂಡಿಬೆಲೆ ಶಾಮಣ್ಣ ಪ್ರಶಸ್ತಿ :
ಶರಣಯ್ಯ ಒಡೆಯರ್, ಮುದಗಲ್, ಬಾಗಲಕೋಟೆ
ಮುರುಳೀಧರ ಎಸ್.ಎ., ಸೋಮವಾರಪೇಟೆ, ಕೊಡಗು
ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ:
ಶೇಖರ ಸಂಕಗೋಡನಹಳ್ಳಿ
ಅರಸೀಕೆರೆ.
ಎಚ್.ಎಸ್.ಶ್ರೀಹರಪ್ರಸಾದ್, ಮರಿಯಮ್ಮನಹಳ್ಳಿ ,
ಹೊಸಪೇಟೆ.
ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ:
ನರಸಿಂಹ ಹುಲಿಹೈದರ್
ಸಂಯುಕ್ತ ಕರ್ನಾಟಕ
ಚಂದ್ರಶೇಖರ ವಡ್ಡು, ಸಮಾಜಮುಖಿ
ಬೆಸ್ಟ್ ಡೆಸ್ಕ್ ನಿರ್ವಹಣೆ:
ಅ.ಮ.ಸುರೇಶ್, ಉದಯವಾಣಿ
ಮಲ್ಲಿಕ ಚರಣವಾಡಿ, ವಿಜಯವಾಣಿ
ಚಂದ್ರಕಲಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ
ಪುಟವಿನ್ಯಾಸ ಪ್ರಶಸ್ತಿ:
ಮಹೇಶ್ ವಿಜಯ ಕರ್ನಾಟಕ
ತಿಮ್ಮೇಶ್ ಎಸ್. ವಿಜಯಕರ್ನಾಟಕ, ದಾವಣಗೆರೆ
—-
ವಿದ್ಯುನ್ಮಾನ ವಿಭಾಗ ಪ್ರಶಸ್ತಿ:
ರಾಜಕೀಯ ವಿಶ್ಲೇಷಣೆ:
ಪಬ್ಲಿಕ್ ಟಿ.ವಿ., ಬೆಂಗಳೂರು
ಮಾನವೀಯ ವರದಿ;
ಪ್ರಶಾಂತ್ ಟಿವಿ 9, ಚಿಕ್ಕಮಗಳೂರು
ಆ್ಯಂಕರಿಂಗ್ ವಿಭಾಗ:
ರಾಧ ಹೀರೇಗೌಡರ್,
ಬಿಟಿವಿ ಬೆಂಗಳೂರು
ವಿಶೇಷ ಪ್ರಶಸ್ತಿ:
ಸುಶೀಲೇಂದ್ರ ಸೌಧೆಗಾರ್
ಅಜೀಜ್ ಮಸ್ಕಿ,
ರಾಯಚೂರು ಜಿಲ್ಲೆ
ಅನಂತರಾಮು ಸಂಕ್ಲಾಪುರ
ಸುಶೀಲೇಂದ್ರ ನಾಯಕ್, ವಿಜಯಪುರ
ಹನುಮೇಶ್ ಯಾವಗಲ್
ಆದಿನಾರಾಯಣ
ರವೀಂದ್ರ ಸುರೇಶ್ ದೇಶಮುಖ್
ಕರಾವಳಿ ತೀರದ ಮಂಗಳೂರು ಸಮ್ಮೇಳನದ ಬಳಿಕ 36 ನೇ ರಾಜ್ಯ ಸಮ್ಮೇಳನ ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3&4 ರಂದು ನಡೆಯಲಿದೆ. ಜ.4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
key words: Karnataka -Working- Journalists- Association -Award Announced