ಮಂಗಳೂರು, ಜೂ 08, 2022 : ಬಂಟ್ವಾಳ ತಾಲ್ಲೂಕು ಇರಾ ಗ್ರಾಮ ಪಂಚಾಯಿತಿಯ ಪರ್ಲಡ್ಕ ದಲ್ಲಿ ರಾಜ್ಯದ ಮೊದಲ ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಬುಧವಾರ ಉದ್ಘಾಟನೆಗೊಳ್ಳಲಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವು ವರ್ಷಗಳ ಕಾಲ ದುಡಿದು, ಅ ನಂತರ ಇರಾದಲ್ಲಿ ಐಸಿರಿ ಫಾರ್ಮ್’ ಆರಂಭಿಸಿರುವ, ರಾಮನಗರ ಮೂಲದ ಶ್ರೀನಿವಾಸ ಗೌಡ ಅವರು ಈ ಕೇಂದ್ರ ಸ್ಥಾಪಿಸಿದ್ದಾರೆ. ಪ್ರಸಕ್ತ ಈ ಕೇಂದ್ರದಲ್ಲಿ 20 ಕತ್ತೆಗಳಿವೆ. ಅವುಗಳಲ್ಲಿ 12 ಕತ್ತೆಗಳು ಹಾಲು ಕೊಡುತ್ತಿವೆ. ಒಂದು ಕತ್ತೆ ಸಾಧಾರಣವಾಗಿ ಅರ್ಧ ಲೀಟರ್ ಹಾಲು ಕೊಡುತ್ತಿದ್ದು, ನಿತ್ಯ 6ರಿಂದ 7 ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ಶ್ರೀನಿವಾಸ ಅವರು ಈಗಾಗಲೇ ಖಡಕನಾಥ ಕೋಳಿ, ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ.
‘ಕತ್ತೆ ಹಾಲಿನಲ್ಲಿ ಕೊಬ್ಬಿನ ಅಂಶ ಹಾಗೂ ಕ್ಯಾಲೊರಿ ಪ್ರಮಾಣ ಕಡಿಮೆ ಇರುತ್ತದೆ. ಜನಸಾಮಾನ್ಯರಿಗೂ ಇದು ಲಭ್ಯವಾಗುವಂತೆ ಮಾಡಲು ಯೋಜನ ರೂಪಿಸಿದ್ದೇನೆ, ಸ್ವತಃ ಬಾಟ್ಲಿಂಗ್ ಘಟಕ ಆರಂಭಿಸಿ, 30, 60, 100 ಹಾಗೂ 200 ಮಿ.ಲೀ ಬಾಟಲ್‌ಗಳನ್ನು ಮಾರು ಕಟ್ಟೆಗೆ ಬಿಡಲಾಗುವುದು. 30 ಮಿ.ಲೀ. ಹಾಲು ಸುಮಾರು 2150 ದರಕ್ಕೆ ಲಭ್ಯವಾಗಲಿದೆ’ ಎಂದು ಶ್ರೀನಿವಾಸಗೌಡ ತಿಳಿಸಿದರು.
‘ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ಸ್ ಅಂಡ್ ವೆಟರ್ನರಿ ಬಯಲಾಜಿಕಲ್ಸ್ ‘ ಸಂಸ್ಥೆ ಮಾಜಿ ನಿರ್ದೇಶಕ ಡಾ. ಆರ್.ಎನ್. ಶ್ರೀನಿವಾಸ ಗೌಡ ಅವರಿಂದ ಪ್ರೇರಣೆ ಪಡೆದು ಇದನ್ನು ಆರಂಭಿಸಿದ್ದೇನೆ. ದೇಶದಲ್ಲಿ ಕತ್ತೆ ಗಳ ಸಂಖ್ಯೆಯಲ್ಲಿ ಶೇ 61.2ರಷ್ಟು ಇಳಿಕೆ ಯಾಗಿರುವುದನ್ನು ಗಮನಿಸಿದ್ದ ಡಾ. ಶ್ರೀನಿವಾಸ ಗೌಡ ಅವರು, ಕತ್ತೆ ಸಾಕಾಣಿಕ ಯನ್ನು ಉತ್ತೇಜಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ದೇಶದಲ್ಲಿ ಪ್ರಸಕ್ತ 1.2 ಲಕ್ಷ ಕತ್ತೆಗಳು ಇವೆ’ ಎಂದು ಅವರು ತಿಳಿಸಿದರು.
ಗುಜರಾತ್‌ನ (ಹಲರಿ) ಹಾಗೂ ಆಂಧ್ರದ ತಳಿಗಳ ಕತ್ತೆಗಳನ್ನು ಶ್ರೀನಿವಾಸ ಗೌಡ ಅವರು ತಮ್ಮ ಫಾರ್ಮ್‌ನಲ್ಲಿ ಸಾಕು ತ್ತಿದ್ದಾರೆ. ಪ್ರಸಕ್ತ 2.5 ಎಕರೆ ವಿಸ್ತೀರ್ಣ ದಲ್ಲಿ ಐಸಿರಿ ಫಾರ್ಮ್ ಹಬ್ಬಿದೆ.
ಸ್ವ ಉದ್ಯೋಗ ಆರಂಭಿಸಲು ಬಯಸುವ, ಆಸಕ್ತ ಯುವಕರಿಗೆ ಕತ್ತೆ ಸಾಕಾಣಿಕೆ ಬಗ್ಗೆ ಉಚಿತವಾಗಿ ತರಬೇತಿ ನೀಡಲು ಸಹ ಶ್ರೀನಿವಾಸಗೌಡ (ಮೊ.96322 64308) ಮುಂದಾಗಿದ್ದಾರೆ.
ಉತ್ಪನ್ನ ದುಬಾರಿ:
`ಕತ್ತೆ ಹಾಲಿಗೆ ಲೀಟರ್ ಗೆ 5,000 ದಿಂದ 7,000 ವರೆಗೆ ದರ ಇದೆ. ಮೂತ್ರಕ್ಕೆ ಲೀಟರ್‌ಗೆ 500 ರಿಂದ 600 ರೂ.ಗಳು ಹಾಗೂ ಲದ್ದಿ ಕೆ.ಜಿ.ಗೆ 600 ರಿಂದ 700 ರೂ.ದರ ಇದೆ’ ಎಂದು ಶ್ರೀನಿವಾಸ ಗೌಡ ತಿಳಿಸಿದರು.
ಈ ಹಾಲು ಮಧುಮೇಹ ನಿಯಂತ್ರಣ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೇ ಈ ಹಾಲನ್ನು ಸೌಂದರ್ಯವರ್ಧಕ ತಯಾರಿಕೆಗೂ ಬಳಸಲಾಗುತ್ತಿದೆ ಎಂದು ಹೇಳಿದರು.
ಕೃಪೆ : ಪ್ರಜಾವಾಣಿ
key words : donkey-farming-in-mangalore-Karnataka
Karnataka’s first donkey farm at Parladka village in Ira gram panchayat, 37 km from Mangaluru, is all set to prove that it is a highly profitable business.