ಕಾವೇರಿ ನೀರು ವಿವಾದ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ: ಕಟೀಲ್ ಇಸ್ ಆಲ್ಸೊ ಟೆರೆರಿಸ್ಟ್ ಎಂದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ .

ಮೈಸೂರು,ಸೆಪ್ಟಂಬರ್,30,2021(www.justkannada.in): ಬಿಜೆಪಿ ಸರ್ಕಾರ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕುತ್ತಿದೆ. ಈಗಾಗಲೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಬಿಜೆಪಿ ಸರ್ಕಾರ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕುತ್ತಿದೆ. ಈಗಾಗಲೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಈಗ ನೀರಾವರಿ ಇಲಾಖೆ ಸಭೆ ನಡೆಸಿ ರಾಜ್ಯಕ್ಕೆ ಈ ಬಾರಿ ನೀರಿನ ಅಭಾವ ಎಂದಿದ್ದಾರೆ. ಕಾವೇರಿ ನೀರಾವರಿ ನಿಗಮದ ನಿರ್ಯಣ ಅಪಾಯಕಾರಿ ಎಂದಿದ್ದಾರೆ. ಕೆಆರ್ ಎಸ್ ಸೇರಿದಂತೆ ನಾಲ್ಕು ಡ್ಯಾಮ್ ಗಳಲ್ಲಿ 209 ಟಿಎಂಸಿ ನೀರು ಸಂಗ್ರಹವಾಗಿತ್ತು. ಅದರೆ ಈಗ ಕೇವಲ 156 ಟಿಎಂಸಿ ಶೇಖರಣೆ ಯಾಗಿದೆ. 57 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ 67 ಟಿಎಂಸಿ ನೀರು ಹರಿಸಬೇಕು ಎಂದು  ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಡಿಸೆಂಬರ್ ಅತ್ಯಂಕ್ಕೆ  ಬೆಂಗಳೂರು ಸೇರಿ 7 ಜಿಲ್ಲೆಗಳಿಗೆ ನೀರಿಗೆ ಅಹಕಾರ ಉಂಟಾಗಲಿದೆ. ನೀರು ನಿರ್ವಹಣೆ ವಿಚಾರದಲ್ಲಿ ಸರ್ಕಾರ ಜಾಣಕುರುಡುತನ ತೋರುತ್ತಿದೆ. ಮಂಡ್ಯದ ಜನರು ಬುದ್ದಿವಂತರು ಈ ಬಗ್ಗೆ ಹೋರಾಟಕ್ಕೆ ಮುಂದಾಗಬೇಕು. ಕೆಆರ್ ಎಸ್ ನಲ್ಲಿ ಕೇವಲ 25 ಟಿಎಂಸಿ ನೀರು ಇದೆ. ನಮ್ಮ ರಾಜ್ಯದ ನೀರನ್ನು ತಮಿಳುನಾಡಿಗೆ ಬಿಡುವುದೇ ಸರ್ಕಾರದ ಉದ್ದೇಶವಾ ಎಂದು ಪ್ರಶ್ನಿಸಿದರು.

ಕಟೀಲ್ ಈಸ್ ಅಲ್ಸೋ ಟೆರರಿಸ್ಟ್, ಅದು ನಿಮ್ಮ ರಕ್ತದಲ್ಲೇ ಇದೆ.

ಸಿದ್ಧರಾಮಯ್ಯರನ್ನ  ದೊಡ್ಡ ಭಯೋತ್ಪಾದಕ ಎಂದು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಟಾಂಗ್ ನೀಡಿದ ಎಂ. ಲಕ್ಷ್ಮಣ್, ಸಿದ್ದರಾಮಯ್ಯನವರು ಆರ್ ಎಸ್ ಎಸ್ ಮತ್ತು ತಾಲಿಬಾನ್ ರವರಿಗೆ ವ್ಯತ್ಯಾಸ ಇಲ್ಲ ಎಂದಿದ್ದಾರೆ. ತಾಲಿಬಾನ್ ಒಂದು ವಿದ್ಯಾರ್ಥಿ ಸಂಘಟನೆ. ತಾಲಿಬಾನಿಗಳು 1986ರಲ್ಲಿ ಬುದ್ಧ ವಿಗ್ರಹ ಹೊಡೆದ್ರು. ಅದೆ ರೀತಿಯಲ್ಲಿ ಆರ್ಎಸ್ಎಸ್ ರವರು ಗಯಾದಲ್ಲಿ ಬುದ್ಧ ವಿಗ್ರಹ ಹೊಡೆದರು. ಮಹಿಳೆಯರಿಗೆ ತಾಲಿಬಾನ್ ಗೌರವ ಕೊಡುವುದಿಲ್ಲ. ಅದೇ ರೀತಿ ಆರ್ಎಸ್ಎಸ್ ಕೂಡಾ ಮಹಿಳೆಯರಿಗೆ ಗೌರವ ನೀಡುವುದಿಲ್ಲ. ತಾಲಿಬಾನ್ಗೆ ಮುಸ್ಲಿಮರನ್ನು ಬಿಟ್ಟು, ಬೇರೆಯವರ ಬಗ್ಗೆ ಒಲವಿಲ್ಲ. ಅದೆ ರೀತಿ ಅರ್ ಎಸ್ಎಸ್ ಹಿಂದುಗಳನ್ನು ಬಿಟ್ಟು ಬೇರೆಯವರ ಬಗ್ಗೆ ಗೌರವ ಇಲ್ಲ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಬೇರೆ ಧರ್ಮದ ಬಗ್ಗೆ ಒಲವಿಲ್ಲ. ತಾಲಿಬಾನ್ ರಕ್ತ ಪಾತವನ್ನ ಇಷ್ಟ ಪಡುತ್ತಾರೆ. ಅದೆ ರೀತಿಯಲ್ಲಿ ಆರ್ಎಸ್ಎಸ್ ನಡೆದುಕೊಳ್ಳುತ್ತಿದೆ. ತಾಲಿಬಾನ್ ನವರು ಗನ್  ಹಿಡಿಯುತ್ತಾರೆ, ಆರ್ ಎಸ್ ಎಸ್ ಲಾಠಿ ಹಿಡಿಯುತ್ತಾರೆ. ತಾಲಿಬಾನ್ ಗಳು ಬ್ಯಾಚುಲರ್, ಆರ್ ಎಸ್ ಎಸ್ ನವರೂ ಕೂಡಾ ಬ್ಯಾಚುಲರ್ ಗಳೇ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಬ್ಬ ಜೋಕರ್. ಸಿದ್ದರಾಮಯ್ಯ ಟೆರರಿಸ್ಟ್  ಅಂತ ಹೇಳಿದ್ದಾರೆ. ಕಟೀಲ್ ಈಸ್ ಅಲ್ಸೋ ಟೆರರಿಸ್ಟ್, ಅದು ನಿಮ್ಮ ರಕ್ತದಲ್ಲೇ ಇದೆ. ಸಿ.ಟಿ.ರವಿ ಕೂಡಾ ಇನ್ನೊಬ್ಬ ಜೋಕರ್. ಇಬ್ಬರೂ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕರೋನ ಇರುವುದರಿಂದ ಸಿನಿಮಾ ರಿಲೀಸ್ ಅಗಿಲ್ಲ. ಹಾಗಾಗಿ ನಿಮ್ಮ ಸಿನಿಮಾ ರಿಲೀಸ್ ಅಗಿದೆ. ಹಿರೋಯಿನ್ ಯಾರು ಅಂತ ನೀವೆ ಹೇಳಬೇಕು ಎಂದು  ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ ಕಾಡಿದರು.

Key words:  Kaveri -water -dispute – against -government –kpcc –spoksperson-M.Laxman