KEA SCAM : ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಅಮಾನತು ಪ್ರಾಧ್ಯಾಪಕ ಮರು ನೇಮಕ ಪ್ರಸ್ತಾಪ.

ಮೈಸೂರು,ಡಿಸೆಂಬರ್,10,2022(www.justkannada.in):  ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತುಗೊಂಡಿದ್ದ ಮೈಸೂರು ವಿವಿ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್.ನಾಗರಾಜ್ ತಮ್ಮನ್ನು ಮತ್ತೆ ವಿವಿಗೆ ಕರೆಯಿಸಿಕೊಳ್ಳುವಂತೆ ಪತ್ರ ಬರೆದಿದ್ದಾರೆ.

ಅಮಾನತು ಅವಧಿ 6 ತಿಂಗಳು ಮುಗಿದಿರುವುದರಿಂದ ಆದೇಶ ರದ್ದುಗೊಳಿಸಿ ಮತ್ತೆ ತಮ್ಮನ್ನು ವಿವಿಗೆ ಸೇರಿಸಿಕೊಳ್ಳಬೇಕೆಂದು ನಾಗರಾಜ್ ಅವರು ಮೈಸೂರು ವಿವಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಸಂಬಂಧ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆದಿತ್ತು. ಕೆಲವರು ನಾಗರಾಜ್ ಅವರಿಗೆ ಅವಕಾಶ ನೀಡುವಂತೆಯೂ ಮತ್ತೆ ಕೆಲವರು ಬೇಡವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಇದು ನ್ಯಾಯಾಲಯದಲ್ಲಿ ಇರುವುದರಿಂದ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುವ ನಿರ್ಧಾರಕ್ಕೆ ಸಿಂಡಿಕೇಟ್ ಸಭೆ ಬಂದಿದೆ ಎನ್ನಲಾಗಿದೆ.

‘‘ತಮ್ಮ ಅಮಾನತು ಅವಧಿ ಮುಗಿದಿದ್ದು, ಮತ್ತೆ ತಮ್ಮನ್ನು ವಿಭಾಗಕ್ಕೆ ಸೇರಿಸಿಕೊಳ್ಳುವಂತೆ ಪ್ರೊ.ನಾಗರಾಜ್ ಅವರು ಪತ್ರ ಬರೆದಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಇದನ್ನು ಮಂಡಿಸಲಾಗಿದೆ. ಚರ್ಚೆ ಮಾಡಲಾಗಿದೆ. ಪರ-ವಿರೋಧ ಅಭಿಪ್ರಾಯ ವ್ಯಕ್ಯವಾಗಿದೆ. ಈ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು,’’ ಎಂದು ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದಾರೆ.

ಪ್ರೊ. ನಾಗರಾಜ್ ಅವರು ಧಾರವಾಡ ವಿವಿ ಕುಲಸಚಿವರೂ ಆಗಿದ್ದರು. ಆದರೆ, ಇವರು ಮಾರ್ಗದರ್ಶನ ಮಾಡಿದ್ದ ಸೌಮ್ಯ ಎಂಬ ಯುವತಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಸಿಕ್ಕಿ ಬಿದ್ದಳು. ಅಲ್ಲದೆ, ಆಕೆ ಪ್ರೊ.ನಾಗರಾಜ್ ಅವರ ಹೆಸರನ್ನು ಬಹಿರಂಗಪಡಿಸಿದ್ದರು. ಇದರಿಂದ ಪ್ರೊ. ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರೊ.ಎಚ್.ನಾಗರಾಜ್ ಅವರ ವಿರುದ್ಧ ಆರೋಪ ಕೇಳಿ ಬಂದಾಗ ಮೈಸೂರು ವಿವಿ ಹಿಂದಿನ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಇವರನ್ನು ಅಮಾನತುಗೊಳಿಸಿದ್ದರು.

Key words: KEA SCAM – Proposed -reappointment – suspended -professor -Mysore University

ENGLISH SUMMARY…

KEA Scam: Proposal of reappointing suspended Prof. in UoM Syndicate meeting
Mysuru, December 10, 2022 (www.justkannada.in): Prof. H. Nagaraj, of the Department of Geology, University of Mysore, who was suspended from his duty in relation with the Assistant Professors’ Examination question paper leak scam has appealed the University requesting his re-appointment.
In his letter, the suspended Prof. Nagaraj has appealed to cancel his suspension order and allow him to rejoin duty as he has already completed six months after suspension. A discussion of his appeal was held in the Syndicate meeting, where a few members agreed and a few others disagreed. However, finally it is learnt that the Syndicate arrived at a decision to obtain the opinion of legal experts as the matter is in the Court.
“Prof. Nagaraj has written a letter mentioning that his suspension period is completed and appealed to allow him to rejoin duty. His proposal is submitted in the Syndicate meeting and discussed. However there were mixed responses. As the matter is in the court, finally the meeting decided to get legal advice and take a final decision,” Prof. H. Rajashekar, Vice-Chancellor, University of Mysore informed.
Prof. Nagaraj has also served as the Registrar of the Dharwad University. One of his student Sowmya was caught in the question paper scam. She also had disclosed his name, following which the police had arrested him and released later. However, this case is still in the court in the interrogation level. Former VC Prof. G. Hemanth Kumar had suspended Prof. Nagaraj after this incident.
Keywords: University of Mysore/ Prof. Nagaraj/ Suspension/ Syndicate meeting