ಬೆಂಗಳೂರು,ಜನವರಿ,25,2021(www.justkannada.in): ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ನಾಳೆ ರೈತಮುಖಂಡರು ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್ ಗಳು ಗಡಿ ದಾಟದಂತೆ ನಿಗಾ ವಹಿಸಿ ಎಂದು ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಖಡಕ್ ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಗಡಿಗಳಲ್ಲೇ ಟ್ರ್ಯಾಕ್ಟರ್ ಗಳನ್ನ ತಡೆಯಿರಿ. ಟ್ರ್ಯಾಕ್ಟರ್ ಗಳು ನಗರಕ್ಕೆ ಆಗಮಿಸದಂತೆ ನಿಗಾವಹಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

Key words: Keep – tractors- crossing- borders –districts- DG & IGP- all -SPs.