ಕೇರಳ- ಕರ್ನಾಟಕ ಗಡಿಯಲ್ಲಿ‌ ಕಟ್ಟೆಚ್ಚರ: ರಾಜ್ಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ.

ಮೈಸೂರು,ಜುಲೈ,10,2021(www.justkannada.in): ಕೇರಳದಲ್ಲಿ  ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ, ಕೇರಳ- ಕರ್ನಾಟಕ ಗಡಿಯಲ್ಲಿ‌ ಕಟ್ಟೆಚ್ಚರ ವಹಿಸಲಾಗಿದ್ದು,  ಕೋವಿಡ್ ನೆಗಿಟಿವ್ ರಿಪೋರ್ಟ್ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ.jk

ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಉದ್ಬೂರು ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಲಾಗುತ್ತಿದ್ದು. ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ರ್ಯಾಪಿಡ್ ಟೆಸ್ಟ್ ಮಾಡಿ ನೆಗಿಟಿವ್ ಇದ್ರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ.

ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಕರ್ನಾಟಕ ಪ್ರವೇಶಕ್ಕೆ ಆರ್ ಟಿಪಿಸಿಆರ್ ನೆಗಿಟಿವ್ ರಿಪೋರ್ಟ್ ಕಡ್ಡಾಯವಾಗಿದೆ. 72 ಗಂಟೆಯೊಳಗಿನ ನೆಗಿಟಿವ್ ವರದಿ ಇದ್ರೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ದಿನನಿತ್ಯದ ಓಡಾಟ, ವಿದ್ಯಾಭ್ಯಾಸ, ವ್ಯಾಪರ ವಹಿವಾಟಿಗೆ ದಿನನಿತ್ಯ ಸಂಚರಿಸುವವರು 15. ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ENGLISH SUMMARY….

Alert on Karnataka-Kerala border: Negative report compulsory for those who enter Karnataka
Mysuru, July 10, 2021 (www.justkannada.in): Following an increase in cases of Coronavirus cases in Kerala, vigil at the Karnataka-Kerala border has been increased, and producing COVID-19 Pandemic negative report has been made compulsory for all those who enter Karnataka.
All the people who come from Kerala are being checked at the Udburu check-post in H.D. Kote Taluk of Mysuru District. COVID tests are being conducted on tourists. Only those who get the negative report in the rapid test are being allowed to enter the State.
Strict vigil has been maintained on the travelers who are coming from Kerala. Only those who possess 72 hours old COVID negative reports are being permitted to enter the state.
RTPCR test has been made compulsory once in 15 days for those who travel daily for education, business, and other purposes.
Keywords: Karnataka-Kerala border/ COVID-19 Pandemic/ Coronavirus/ negative report/ compulsory/ RTPCR test

Key words: Kerala-Karnataka –border- Covid Negative- Report -Mandatory