ಕೇರಳ ಪ್ರಕೃತಿ ವಿಕೋಪ: ಜನ ಸೇವೆಗೆ ಹೊರಟ ಮೈಸೂರು ವೈದ್ಯರ ತಂಡ

ಮೈಸೂರು,ಜುಲೈ,31,2024 (www.justkannada.in): ಕೇರಳದ ವೈನಾಡಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು,  ಅತಿ ಹೆಚ್ಚು ಮಳೆಯಿಂದಾಗಿ ಭೂಕುಸಿತ ಉಂಟಾಗಿ 200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನರ ರಕ್ಷಣೆಗೆ ಜನ ಸೇವೆಗೆ ಮೈಸೂರು ವೈದ್ಯರ ತಂಡ ಕೇರಳದತ್ತ ಹೊರಟಿದೆ.

ಜನರನ್ನು ರಕ್ಷಿಸಲು, ಮತ್ತು ಜನರ ಆರೋಗ್ಯ ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ತಜ್ಞ ವೈದ್ಯರು ಮತ್ತು  ತಂಡವನ್ನು ಔಷಧಿ ಗಳೊಂದಿಗೆ ನಿಯೋಜನೆ ಮಾಡಲಾಗಿದೆ .

ಈ ತಂಡವನ್ನು ಕರ್ನಾಟಕ ಮತ್ತು ಕೇರಳ ಗಡಿಭಾಗವಾದ ಬಾವಲಿ  ಚೆಕ್ ಪೋಸ್ಟ್ ನಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು  ತಹಶೀಲ್ದಾರ್  ಶ್ರೀನಿವಾಸ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ರವರು  ತಜ್ಞ ವೈದ್ಯ ಡಾ”ಶ್ರೀನಿವಾಸ್, ಡಾ. ನಾಗೇಶ್ ರಾವ್, ಡಾ. ಶೇಷಾದ್ರಿ, ಹಿರಿಯ ಔಷಧ ವಿತರಣಾಧಿಕಾರಿ ಉಮೇಶ್ ತಂಡವನ್ನು  ಕೇರಳ ವೈನಾಡಿಗೆ ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಹುಣಸೂರು  ಉಪ ವಿಭಾಗಾಧಿಕಾರಿ ವೆಂಕಟರಾಜು ಮಾತನಾಡಿ, ನಮ್ಮ ಜಿಲ್ಲಾ ಆಡಳಿತ ವತಿಯಿಂದ ನುರಿತ ತಜ್ಞರನ್ನು ನಿಯೋಜನೆ ಮಾಡಿ ಕೇರಳ ವೈನಾಡಿಗೆ  ಕಳಿಸಿ ಕೊಡುತ್ತಿದ್ದೇವೆ ಹಾಗೂ ನಮ್ಮ ಜಿಲ್ಲೆಯಲ್ಲೂ ಸಹ ಅಗತ್ಯ ಔಷಧಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ , ನುರಿತ ತಜ್ಞ ವೈದ್ಯರನ್ನು ಕೇರಳದ ವೈನಾಡಿಗೆ ಜಿಲ್ಲಾಡಳಿತ ವತಿಯಿಂದ ಕಳುಹಿಸುತ್ತಿದ್ದೇವೆ, ಜೊತೆಗೆ ನಮ್ಮ ತಾಲೂಕಿನ ದೊಡ್ಡ ಬೈರನಕುಪ್ಪೆ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ತುರ್ತು ವಾಹನವನ್ನು ನಿಯೋಜನೆ ಮಾಡಿಕೊಂಡಿದ್ದೇವೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತುರ್ತು ವಾಹನ ಮತ್ತು 10 ಬೆಡ್ ಗಳನ್ನೂ ಸಿದ್ದಪಡಿಸಿಕೊಂಡಿದ್ದೇವೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಹ ಇಟ್ಟುಕೊಳಲಾಗಿದೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ವರ್ಷ  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ರವಿರಾಜ್, RI ಗೌಸ್ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು, ಇನ್ನಿತರರು ಹಾಜರಿದ್ದರು.

Key words: Kerala, Natural Disaster, mysore, doctors, team