ನಾಳೆಯಿಂದ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರಿಗೆ ಅವಕಾಶ…

ಕೇರಳ,ನವೆಂಬರ್,15,2020(www.justkannada.in):  ಕೊರೋನಾ ಹಿನ್ನೆಲೆ ಬಂದ್ ಆಗಿದ್ಧ ಶಬರಿಬಲೆ ಅಯ್ಯಪ್ಪ ದೇಗುಲ ನಾಳೆಯಿಂದ ತೆರೆಯಲಿದ್ದು ನಾಳೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

 ಕೇರಳದ ಪಟ್ಟಣಂತಿಟ್ಟವಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಾಳೆಯಿಂದ ತೆರೆಯಲಿದೆ.   ದೇವರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ನಂತರ ದರ್ಶನ ಆರಂಭವಾಗಲಿದೆ. ಇಂದು ಸ್ಥಳೀಯರು ಮತ್ತು ದೇವಾಲಯದ ಸಿಬ್ಬಂದಿಗೆ ದರ್ಶನಕ್ಕೆ ಅವಕಾಶವಿದ್ದು ನಾಳೆಯಿಂದ ಯಾತ್ರಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. kerala-Sabarimala Ayyappa –Darshana-  tomorrow-devotees

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಕೋವಿಡ್ ನೆಗೆಟಿವ್  ಬಂದರೇ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಕೇರಳ ಸರ್ಕಾರದಿಂದ ನೀಲಕ್ಕಲ್ ನಲ್ಲಿ ಸ್ವಾಮಿ ಅಯ್ಯಪ್ಪ ಭಕ್ತರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎನ್ನಲಾಗುತ್ತಿದೆ.

English summary….

shabarimala open for devotees from tomorrow
Kerala, Nov. 15, 2020 (www.justkannada.in): The famous Ayyappa temple in Sabarimala, Kerala which was closed down due to the corona pandemic will be open for darshan for devotees from tomorrow. The temple will be opened for darshan for Ayyappa devotees after performing the traditional pooja.
Devotees who visit the temple should have undergone Covid-19 test compulsorily. Only devotees who have corona negative report will be allowed to have the darshan. Corona tests will also be conducted by the Kerala government at Neelakkal. Apart from this, wearing masks, maintenance of social distancing and other government guidelines will be mandatory.
Keywords: Sabarimala-Ayyappa-Kerala-Corona
——————————————–

 

 

Key words: kerala-Sabarimala Ayyappa –Darshana-  tomorrow-devotees