ಬೆಂಗಳೂರು,ನವೆಂಬರ್,23,2022(www.justkannada.in): ‘ಕೆಜಿಎಫ್’ ಎಂಬುದೇ ಒಂದು ಬ್ರಾಂಡ್. ಈ ‘ಕೆಜಿಎಫ್’ ಸಿನಿಮಾದ ಹೆಸರೇ ಇದೀಗ ಹೊಟೇಲ್‌ವೊಂದಕ್ಕೆ ನಾಮಕರಣ ಮಾಡಲಾಗಿದೆ.
ಹೌದು, ಸಿನಿಮಾದಲ್ಲಿ ‘ಕೆಜಿಎಫ್’ ಎಂದರೆ ಕೋಲಾರ ಗೋಲ್ಡ್ ಫೀಲ್ಡ್ ಎಂದಿದ್ದರೆ, ಈ ಹೊಟೇಲ್ ಉದ್ಯಮದಲ್ಲಿ ‘ಕೆಜಿಎಫ್’ ಎಂದರೆ ‘ಕನ್ನಡಿಗಾಸ್ ಗೋಲ್ಡನ್ ಫುಡ್’ ಎಂದರ್ಥ. ನರಾಚಿಯ ಮುಖ್ಯದ್ವಾರವನ್ನೇ ಹೋಲುವ ರೀತಿಯಲ್ಲಿ ಆರ್ಟ್ ವರ್ಕ್ ಮಾಡಿ ನಿರ್ಮಿಸಲಾಗಿದೆ. ಅಲ್ಲದೇ ನರಾಚಿ ಮಾದರಿಯಲ್ಲಿ ಒಳಾಂಗಣವನ್ನು ನಿರ್ಮಿಸಲಾಗಿದೆ. ಸುಮಾರು 200 ಆಸನಗಳ ವ್ಯವಸ್ಥೆಯೊಂದಿಗೆ ಬೆಂಗಳೂರಿನ ಸಹಕಾರನಗರದಲ್ಲಿ ಈ ಹೊಟೇಲ್ ತಲೆ ಎತ್ತಿದ್ದು, ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಬೃಹತ್ ಗೋಡೆ, ಗೋಡೆಗೆ ಕಲ್ಲುಗಳ ರೀತಿಯ ಕೆತ್ತನೆ. ದೊಡ್ಡದಾದ ಮುಖ್ಯದ್ವಾರ ಥೇಟ್ ರಣರೋಚಕ ಕಥೆ ಹೇಳಿದ್ದ ‘ಕೆಜಿಎಫ್’ ನರಾಚಿಯನ್ನೇ ನೆನಪಿಸುತ್ತಿದೆ. ಇಲ್ಲಿ ಬಗೆಬಗೆ ತಿಂಡಿಯ ನಳಪಾಕದ ರುಚಿ ಸಿಗಲಿದೆ. ಈ ವಿಶಿಷ್ಟ ಹೊಟೇಲ್ ನ ಸೌಂದರ್ಯ ಕಣ್ತುಂಬಿಕೊಳ್ಳಲು ಭೇಟಿ ನೀಡಿ.
ಸ್ಥಳ: ನಂ.15-16, 5ನೇ ಮುಖ್ಯರಸ್ತೆ, ಶಾಂತಿವನ, ಸಹಕಾರ ನಗರ, ಸ್ಟೆರ್ಲಿಂಗ್ ಹೈಟ್ಸ್ ಅಪಾರ್ಟ್ಮೆಂಟ್ ಪಕ್ಕ. ಬೆಂಗಳೂರು-92
Contact: 8495880088, 8496880088
ಶ್ರೀನಿವಾಸ್ ಮುರುಳಿ, ಮಾಲೀಕರು
Key words: KGF -Theme Hotel -raised -head – Bangalore.