ಬೆಂಗಳೂರು,ಸೆಪ್ಟಂಬರ್,21,2021(www.justknnada.in): ಲಂಚ ಸ್ವೀಕರಿಸುತ್ತಿದ್ದ ವೇಳೆ ‘KIADB’ ವಿಶೇಷ ಭೂಸ್ವಾಧೀನಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಭಾರತ್ ಸ್ಕೌಟ್ಸ್ ಕಟ್ಟಡದಲ್ಲಿರುವ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ KIADB’ ವಿಶೇಷ ಭೂಸ್ವಾಧೀನಾಧಿಕಾರಿ ತೇಜಸ್ ಕುಮಾರ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಮಲ್ಕಾಪುರದಲ್ಲಿ ಸರ್ಕಾರ ಭೂಮಿ ಖರೀದಿಸಿತ್ತು. ಇದಕ್ಕೆ ರೈತರಿಗೆ ಪರಿಹಾರ ನೀಡಲು ತೇಜಸ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
60 ಲಕ್ಷರೂ. ಬಿಡುಗಡೆಗೆ 10 ಲಕ್ಷ ರೂ. ಈಗಾಗಲೇ ಪಡೆದಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ತೇಜಸ್ ಇಂದು 2 ಲಕ್ಷ ರೂ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. KIADB ಮ್ಯಾನೇಜರ್ ದಾಸೇಗೌಡ ಸಹ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
Key words: KIADB –special- officer-ACB- trap -bribes.