ಹಾಡಹಗಲೇ ದಂಪತಿ-ಮಗು ಕಿಡ್ನಾಪ್

ಚಾಮರಾಜನಗರ,ಮಾರ್ಚ್,4,2025 (www.justkannada.in): ಹಾಡಹಗಲೇ ದಂಪತಿ ಮತ್ತು ಮಗುವನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ ಘಟನೆ ಬಂಡೀಪುರದಲ್ಲಿ ನಡೆದಿದೆ.

ಬೆಂಗಳೂರು ಮೂಲದ ನಿಶಾಂತ್, ಪತ್ನಿ ಹಾಗೂ ಮಗುವನ್ನ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಬಂಡೀಪುರದ ಮಂಗಲ ಬಳಿ ಇರುವ ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ದಂಪತಿ ವಾಸ್ತವ್ಯ ಹೂಡಿದ್ದರು. ನಿನ್ನೆ ಬಂದು ವಾಸ್ತವ್ಯ ಹೂಡಿದ್ದ ನಿಶಾಂತ್ ದಂಪತಿ ಇಂದು (ಮಂಗಳವಾರ) ಚೆಕ್ ಔಟ್ ಆಗಬೇಕಿತ್ತು. ಆದರೆ ಕಿಡ್ನಾಪರ್ಸ್ ಗಳು  ಕಂಟ್ರಿ ಕ್ಲಬ್ ರೆಸಾರ್ಟ್ ಸಮೀಪದಲ್ಲೇ ದೊಣ್ಣೆ, ಮಾರಕಾಸ್ತ್ರಗಳನ್ನು ಹಿಡಿದು ದಂಪತಿಯನ್ನ ಅಪಹರಿಸಿದ್ದಾರೆ.

ನಿಶಾಂತ್ ಬಿಬಿಎಂಪಿ ನೌಕರನಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಹರಣಕಾರರು ನಿಶಾಂತ್ ಬಂದಿದ್ದ ಕಾರನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.  ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ ಸೇರಿ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಶ್ವಾನದಳ, ಬೆರಳಚ್ಚು ತಂಡದಿಂದ ತನಿಖೆ ಮುಂದುವರೆದಿದೆ.

Key words: Couple, child, kidnapped, Bandipur