ದುಬೈ, ನವೆಂಬರ್ 26, 2020 (www.justkannada.in): ಐಸಿಸಿ ಮಂಗಳವಾರ ಟೆಸ್ಟ್, ಏಕದಿನ ಮತ್ತು ಟಿ-20 ಸೇರಿದಂತೆ ಮೂರು ಮಾದರಿಯ ಮಹಿಳಾ ಮತ್ತು ಪುರುಷರ ನಾಮಿನೇಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೂರೂ ಮಾದರಿಯ ಆಟದಲ್ಲೂ ಕೊಹ್ಲಿ ನಾಮಿನೇಟ್ ಆಗಿ, ಮೂರು ಮಾದರಿಯ ಲಿಸ್ಟ್ ನಲ್ಲಿ ಆಯ್ಕೆಯಾದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಕೊಹ್ಲಿಯವರನ್ನು ಬಿಟ್ಟರೆ ಬೇರೆ ಯಾವುದೇ ಆಟಗಾರ ಈ ಮೂರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಕಳೆದ ಒಂದು ದಶಕದಿಂದ ಮೂರು ಮಾದರಿಯ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನು ಹರಿಸುತ್ತಿರುವ ಕೊಹ್ಲಿಯವರು ರನ್ ಮಷಿನ್ ಎಂಬ ಹೆಸರು ಪಡೆದುಕೊಂಡಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವವ ಆಟಗಾರರ ಪಟ್ಟಿ ಇಲ್ಲಿದೆ…
ದಶಕದ ಪುರುಷ ಆಟಗಾರ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ರವಿಚಂದ್ರನ್ ಅಶ್ವಿನ್ (ಭಾರತ), ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ)
ಪುರುಷರ ದಶಕದ ಏಕದಿನ ಆಟಗಾರ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ರೋಹಿತ್ ಶರ್ಮಾ (ಭಾರತ), ಎಂಎಸ್ ಧೋನಿ (ಭಾರತ) ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ)
ಪುರುಷರ ದಶಕದ ಟೆಸ್ಟ್ ಆಟಗಾರ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ), ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್), ರಂಗನಾ ಹೆರಾತ್ (ಶ್ರೀಲಂಕಾ) ಮತ್ತು ಯಾಸಿರ್ ಷಾ (ಪಾಕಿಸ್ತಾನ)
ಪುರುಷರ ದಶಕದ ಟಿ-20 ಆಟಗಾರ ಪ್ರಶಸ್ತಿ: ರಶೀದ್ ಖಾನ್ (ಅಫ್ಘಾನಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ಆರೋನ್ ಫಿಂಚ್ (ಆಸ್ಟ್ರೇಲಿಯಾ), ಲಸಿತ್ ಮಾಲಿಂಗ (ಶ್ರೀಲಂಕಾ), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ಮತ್ತು ರೋಹಿತ್ ಶರ್ಮಾ (ಭಾರತ)