ಮಂಗಳೂರು,ಸೆಪ್ಟಂಬರ್,22,2020(www.justkannada.in): ಡ್ಯಾನ್ಸರ್ ಕಮ್ ಬಾಲಿವುಡ್ ನಟ ಕಿಶೋರ್ ಅಮನ್ ಬಂಧನ ಪ್ರಕರಣ ಸಂಬಂಧ ಆಸ್ಕಾ ಎಂಬ ಯುವತಿಯನ್ನ ಬಂಧಿಸಲಾಗಿದ್ದು ಈಕೆ ಡ್ರಗ್ಸ್ ಸೇವಿಸಿದ್ಧಾಗಲೇ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ನಶೆ ಇಳಿದ ಮೇಲೆ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಿಶೋರ್ ಶೆಟ್ಟಿ ಜೊತೆ ಪಾರ್ಟಿಮಾಡಿದ್ದ ಯುವತಿ ಮೂಲದ ಯುವತಿ ಆಸ್ಕಾಳನ್ನ ಬಂಧಿಸಿದ ವೇಳೆ ಆಕೆ ಡ್ರಗ್ಸ್ ಸೇವಿಸಿದ್ದಳು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಕಿಶೋರ್ ಅಮನ್ ಪ್ರಕರಣದಲ್ಲಿ ಆಸ್ಕಾ ಬಂಧನ ವಿಚಾರ. ಆಕೆಯನ್ನು ಇನ್ನು ವಿಚಾರಣೆ ಮಾಡಲಾಗಿಲ್ಲ. ಆಕೆಯ ಡ್ರಗ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಆಕೆ ಡ್ರಗ್ ತೆಗೆದುಕೊಂಡಿದ್ರಿಂದ ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ನಶೆ ಇಳಿದ ಮೇಲೆ ಆಕೆಯ ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಂಧಿತ ಆರೋಪಿ ಕಿಶೋರ್ ಪ್ರಕರಣದಲ್ಲಿ ಆಕೆಯನ್ನು ಅರೆಸ್ಟ್ ಮಾಡಲಾಗಿದೆ. ಡ್ರಗ್ ಸೇವಿಸಿದಾಗಲೇ ಆಸ್ಕಾ ಸಿಕ್ಕಿ ಬಿದ್ದಿದ್ದು ಇನ್ನು ಕೂಡ ಮತ್ತು ಇಳಿಯದೇ ಇರೋದ್ರಿಂದ ತನಿಖೆ ವಿಳಂಬವಾಗಿದೆ ಎಂದು ಹೇಳಿದರು.
ಆಸ್ಕಾ ಪೊಲೀಸ್ ಕಸ್ಟಡಿಯಲ್ಲೇ ನಶೆಯಲ್ಲಿ ತೇಲಾಡುತ್ತಿದ್ದು, ಕಳೆದು ಒಂದು ದಿನದಿಂದ ನಶೆಯಲ್ಲಿ ತೇಲಾಡುತ್ತಿರುವ ಆಸ್ಕಾಳನ್ನ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
Key words: kishor-arrest –case- Asca -Drug – inquiry -Mangalore -Police Commissioner -Vikas Kumar.