ಭಾರತದ ವೇಗದ ಬೌಲಿಂಗ್ ‘ಡೇಂಜರಸ್’ ಎಂದ ಕೆ.ಎಲ್.ರಾಹುಲ್

ಬೆಂಗಳೂರು, ಡಿಸೆಂಬರ್ 31, 2021 (www.justkannada.in): ವೇಗದ ಬೌಲಿಂಗ್ ದಾಳಿಯನ್ನು ನೆಟ್ಸ್‌ನಲ್ಲಿ ಆಡುವುದು ಕೂಡ ಕಷ್ಟಕರವಾಗಿದೆ ಎಂದು ಕೆ.ಎಲ್.ರಾಹುಲ್ ಹೇಳಿದ್ದಾರೆ.

ನನಗೆ ನೆಟ್ ಸೆಷನ್‌ನಲ್ಲಿ ತುಂಬಾ ಹೆದರಿಕೆಯಾಗುತ್ತದೆ. ಅಂತಹ ಬೌಲಿಂಗ್ ದಾಳಿಯನ್ನು ಹೊಂದಲು ನಮಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಭಾರತದ ಬೌಲರ್‌ಗಳು ನೆಟ್ಸ್‌ನಲ್ಲಿ ಭಯ ಹುಟ್ಟಿಸಿದ್ದಾರೆ ಎಂದ ರಾಹುಲ್, ಭಾರತದ ವೇಗದ ಬೌಲರ್‌ಗಳನ್ನು ಹೊಗಳಿದರು. ಈ ವೇಗದ ಬೌಲರ್‌ಗಳು ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕರುಣೆ ತೋರುವುದಿಲ್ಲ ಎಂದು ಅವರು ಹೇಳಿದರು.

ವೇಗದ ಬೌಲರ್‌ಗಳ ಬಗ್ಗೆ ಹೇಳುವುದಾದರೆ, ಅವರ ಸಾಮರ್ಥ್ಯ ಅದ್ಭುತವಾಗಿದೆ. ಅವರು ಬೌಲಿಂಗ್ ಮಾಡುವ ರೀತಿ ನಿಜಕ್ಕೂ ದೊಡ್ಡ ವಿಚಾರ. ಶಮಿ ಯಾವಾಗಲೂ ಚೆಂಡಿನ ಸಹಾಯ ಪಡೆಯುತ್ತಾರೆ ಎಂದಿದ್ದಾರೆ.

ಅಂದಹಾಗೆ ಸೆಂಚುರಿಯನ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಇತಿಹಾಸ ನಿರ್ಮಿಸಲು ರಾಹುಲ್ ಸೆಂಚುರಿ ನೆರವಾಗಿತ್ತು.