ಬೆಂಗಳೂರು, ಡಿ.೨೫, ೨೦೨೪ : ವಿಳಂಬದ ಬಳಿಕ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಂತಿಮವಾಗಿ ತನ್ನ ಬಹು ನಿರೀಕ್ಷಿತ ನಂದಿನಿ ಬ್ರ್ಯಾಂಡ್ ನ ಇಡ್ಲಿ-ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದೆ. ಕೆಎಂಎಫ್ ನ ಈ ನೂತನ ಉತ್ಪನ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಪ್ರೋಟೀನ್ನಿಂದ ಸಮೃದ್ಧವಾಗಿರುವ ಈ ಹಿಟ್ಟು, ಸದ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ ಉತ್ಪನ್ನವನ್ನು ಎರಡು ಅಳತೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, 450 ಗ್ರಾಂ ಪ್ಯಾಕ್ನ ಬೆಲೆ ₹40 ಮತ್ತು 900 ಗ್ರಾಂ ಪ್ಯಾಕ್ನ ಬೆಲೆ ₹80 ನಿಗಧಿಪಡಿಸಲಾಗಿದೆ.
ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಇತರ ನಗರಗಳಿಗೆ ನಂದಿನಿ ಇಡ್ಲಿ-ದೋಸೆ ಹಿಟ್ಟಿನ ಲಭ್ಯತೆಯನ್ನು ವಿಸ್ತರಿಸಲು ಯೋಜಿಸಿದೆ.
“ನಂದಿನಿ ಬ್ರ್ಯಾಂಡ್ ಗುಣಮಟ್ಟಕ್ಕಾಗಿ ಜಾಗತಿಕ ಖ್ಯಾತಿಯನ್ನು ಗಳಿಸಿದೆ ಮತ್ತು ಇದು ಕರ್ನಾಟಕ ಮತ್ತು ಅದರಾಚೆ ಗ್ರಾಹಕರು ಇಟ್ಟಿರುವ ನಂಬಿಕೆಯನ್ನು ಗೌರವಿಸುತ್ತದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ನವೀನ ಉತ್ಪನ್ನಗಳಿಗೆ ಬೇಡಿಕೆಯನ್ನು ಸೃಷ್ಟಿಸಿದೆ ಎಂದು ಫೆಡರೇಶನ್ ವಿಶ್ವಾಸ ವ್ಯಕ್ತಪಡಿಸಿದೆ.
ಈ ಬೇಡಿಕೆಯನ್ನು ಪೂರೈಸಲು, ಗ್ರಾಹಕರ ಆದ್ಯತೆಗಳನ್ನು ಪೂರೈಸಲು KMF ಹೊಸ ವಸ್ತುಗಳನ್ನು ಪರಿಚಯಿಸುತ್ತಿದೆ,” ಎಂದಿರುವ ಸಂಸ್ಥೆ, ನಗರ ಗ್ರಾಹಕರು, ವಿಶೇಷವಾಗಿ ಕೆಲಸದ ಒತ್ತಡದಿಂದಾಗಿ ಸಮಯಕ್ಕೆ ಒತ್ತು ಕೊಡುವವರನ್ನು ಗಮನದಲ್ಲಿರಿಸಿ ಹೆಚ್ಚು ಸಿದ್ಧ-ಅಡುಗೆ ಊಟವನ್ನು ಬಯಸುತ್ತಿರುವವರ ಅನುಕೂಲಕ್ಕಾಗಿ ಈ ಉತ್ಪನನ್ನಗಳನ್ನು ಪರಿಚಯಿಸಲಾಗುತ್ತಿದೆ ಎಂದು ಒಕ್ಕೂಟ ಹೇಳಿದೆ.
key words: Karnataka. KMF’s Nandini, Idli-dosa batter,launched, Bengaluru
SUMMARY:
Karnataka KMF’s Nandini Idli-dosa batter finally launched in Bengaluru. This protein-rich batter is currently available only in Bengaluru. The product is sold in two sizes, with the 450-gram pack priced at ₹40 and the 900-gram pack priced at ₹80.