ಕೊಡಗು,ಆ,9,2019(www.justkannada.in): ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಬಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರಿ ಮಳೆಯಿಂದಾಗಿ ಭಗಂಡೇಶ್ವರ ದೇವಾಲಯದ ಒಳಗೆ ನೀರು ನುಗ್ಗಿದ್ದು, ಭಗಂಡೇಶ್ವರ ದೇವಾಯಲ ಸಂಪೂರ್ಣ ಜಲಾವೃತವಾಗಿದೆ. ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥೀತಿ ಉಂಟಾಗಿದ್ದು ಸ್ಥಳೀಯರು ಬೋಟ್ ಆಶ್ರಯಿಸಿ ಸಂಚರಿಸುತ್ತಿದ್ದಾರೆ. ಇನ್ನು ಭಾರಿ ಮಳೆಯಿಂದಾಘಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಮುಳುಗಡೆ ಹಂತಕ್ಕೆ ತಲುಪಿದೆ. ಕುಶಾಲನಗರದ ತಾವರೆಕೆರೆ ಬಳಿ ರಸ್ತೆಗೆ ನೀರು ನುಗ್ಗಿದ್ದು, ಮಡಿಕೇರಿಯಿಂದ ಮೈಸೂರು ತೆರಳೊ ವಾಹನ ಸವಾರರ ಪರದಾಡುತ್ತಿದ್ದಾರೆ. ಮಳೆ ಹೀಗೆ ಮುಂದುವರೆದರೆ ಮೈಸೂರು ಮಡಿಕೇರಿ ರಾಷ್ಟೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಲಿದೆ.
Key words: Kodagu District.heavy rain- Water – Bhagandeswara temple- Mysore -Madikeri -National Highway