ಮೈಸೂರು,ಆಗಸ್ಟ್,22,2022(www.justkannada.in): ಮೊಟ್ಟೆ, ಕೋಳಿ, ಮಾಂಸ, ದೇವರು ಎಲ್ಲ ಆಮೇಲೆ ಮಾತಾಡೋಣ. ಕೊಡಗು ಜಿಲ್ಲೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಕು. ಇದು ಕೊಡವರ ಬಹುದಿನಗಳ ಬೇಡಿಕೆ ಇದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಸಲಹೆ ನೀಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಕೊಡಗು ಹಿಂದೆ ಮಂಗಳೂರು ಕ್ಷೇತ್ರದೊಂದಿಗೆ ಸೇರಿತ್ತು. ಈಗ ಮೈಸೂರು ಕ್ಷೇತ್ರದೊಂದಿಗೆ ಇದೆ. ಈಶಾನ್ಯ ರಾಜ್ಯಗಳಲ್ಲಿ 3-4 ಲಕ್ಷ ಜನಸಂಖ್ಯೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳು ಇವೆ. ಹೀಗಿರುವಾಗ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ಯಾಕಾಗಬಾರದು ? ಕೊಡಗು ಅತ್ಯುತ್ತಮ ಪ್ರವಾಸಿ ತಾಣ. ಮಳೆಯಿಂದ ಇತ್ತೀಚೆಗೆ ಅಪಾರ ಹಾನಿ ಆಗಿದೆ. ಕೊಡಗು ಜನರಿಗೆ ಕಾಂಗ್ರೆಸ್- ಬಿಜೆಪಿ ಎರಡೂ ಪಕ್ಷಗಳ ಮೇಲೆ ಆಕ್ರೋಶ ಇದೆ. ಎರಡೂ ಪಕ್ಷಗಳು ಪ್ರಾತಿನಿಧ್ಯ ಕೊಟ್ಟಿಲ್ಲ. ಇದೆಲ್ಲವನ್ನೂ ಚರ್ಚೆ ಮಾಡಿ. ಮೊಟ್ಟೆ, ಕೋಳಿ, ದೇವರು ಆಮೇಲೆ ಮಾತಾಡೋಣ ಎಂದರು.
ಜನ ರಾಜಕೀಯ ನಾಯಕರ ಮೇಲೆ ಮೊಟ್ಟೆ, ಕಲ್ಲು, ಟೊಮ್ಯಾಟೋ, ಸಗಣಿ ಹೊಡೀತಾರೆ, ಇದು ಸಹಜ. ಒಳ್ಳೆಯವರು ಇರುವ ರೀತಿಯಲ್ಲಿ ಪುಂಡ ಪೋಕರಿಗಳು ಇರುತ್ತಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಕೊಡಗು ಯಾತ್ರೆ ಬಗ್ಗೆ ಪುನರ್ ಅವಲೋಕನ ಮಾಡಬೇಕು ಎಂದು ಎಚ್.ವಿಶ್ವನಾಥ್ ಸಲಹೆ. ನೀಡಿದರು.
ಮೊರಾರ್ಜಿ ನಾಗಪುರದಲ್ಲಿ ಚಪ್ಪಲಿ ಎಸೆದಿದ್ದರು. ಇಂದಿರಾ ಗಾಂಧಿ ಅವರಿಗೆ ಕಲ್ಲು ಹೊಡೆದು ಮೂಗು ಒಡೆದು ಹೋಯಿತು. ದೇವರಾಜ ಅರಸು ಮೇಲೆ ಎಷ್ಟು ಬಾರಿ ಅಟ್ಯಾಕ್ ಆಯ್ತು. ಚಿದಂಬರ್ ಅವರಿಗೆ ಸುದ್ದಿಗೋಷ್ಠಿಯಲ್ಲಿ ಶೂ ತೋರಿಸಲಾಯ್ತು. ಮಡಿಕೇರಿ ಪಾದಯಾತ್ರೆ ಹಿಂಪಡೆಯಬೇಕು. ಚುನಾವಣೆ ಬರುತ್ತಿದೆ. ಏನೇನೋ ಆಗಬಹುದು. ಅದಕ್ಕೆ ನೀವು ಹೊಣೆ ಆಗಬೇಡಿ. ಬೇಕಿದ್ದರೆ ವಿಧಾನಸಭೆಯಲ್ಲಿ ಅವಿಶ್ವಾಸ ಮಂಡಿಸಿ. ಮೊಟ್ಟೆ ವಿಚಾರ ರಾಷ್ಟ್ರೀಯ ಸುದ್ದಿ ಆಗಿದೆ. ಮಳೆಯಿಂದ ಮಕ್ಕಳು ತೇಲಿ ಹೋಗಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಮುತ್ತಿಗೆ ಹಾಕುವುದು ನಿಮ್ಮಂಥ ನಾಯಕರಿಗೆ ಶೋಭಾಯಮಾನ ಅಲ್ಲ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ.
ಸಿದ್ದರಾಮಯ್ಯ ಅವರಂತಹ ಮುತ್ಸದ್ಧಿ ರಾಜಕಾರಣಿ ಮೇಲೆ ಮೊಟ್ಟೆ ಎಸೆದಿದ್ದು ಸರಿಯಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಯಡಿಯೂರಪ್ಪ ಅವರು ಮಧ್ಯಸ್ಥಿಕೆ ವಹಿಸಬೇಕು. ಎರಡೂ ಕಡೆಯವರನ್ನು ಮನವೊಲಿಸಬೇಕು. ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ನೀವು ಹೋರಾಟ ಮಾಡಿ. ನಿಮ್ಮ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ದೊಡ್ಡದು ಮಾಡಬೇಡಿ. ಇದು ಶಾಂತಿ ಸುವ್ಯವಸ್ಥೆಯ ವಿಚಾರ, ಪಕ್ಷದ ವಿಚಾರ ಅಲ್ಲ ಎಂದು ಎಚ್.ವಿಶ್ವನಾಥ್ ಹೇಳಿದರು.
Key words: Kodagu –district- Lok Sabha –constituency-H. Vishwanath
ENGLISH SUMMARY…
MLC H. Vishwanath demands a separate MP constituency for Kodagu
Mysuru, August 22, 2022 (www.justkannada.in): “Let us speak about eggs, chicken, meat, god, etc., afterward. We want a separate Lok Sabha constituency for the Kodagu district. It is a long pending demand of the Kodavas, let us talk about the problems of the district,” said BJP MLC Adaguru H. Vishwanath.
Speaking in Mysuru today, he informed that earlier Kodagu belonged to the Mangaluru constituency and now is a part of the Mysuru Lok Sabha constituency. “There are separate Lok Sabha constituencies for just 3-4 lakh population in the Northeastern states. Then why Kodagu cannot have a separate Lok Sabha constituency? Kodagu is a good tourist place. The district witnessed a huge loss due to heavy rainfall in recent days. Kodavas are angry with both Congress and BJP. Both the parties have not given representation for Kodavas. Talk about all these issues, let us talk about eggs, chicken, god, and other things later,” he said.
“People will hurl eggs, stones, tomatoes, cow dung, etc., on elected representatives, it is common. There are both good and bad people in this world. Hence, Siddaramaiah should re-introspect his Kodagu visit,” he suggested.
“A person had hurled slippers at the former PM Morarji Desai in Nagpur. Indira Gandhi had broken her nose due to stone pelting. There were several attacks on former CM Devaraj Urs. Chidambar was shown a shoe at a press meet. The Madikeri padayatra should be withdrawn. Elections are nearing, anything can happen. Please don’t become responsible for it. If you want to move confidence of motion in the assembly. The egg matter has become national news. But, many children have flown away in rainwater. It is incorrect for leaders like you to siege during such a time of difficulty. Our leaders B.S. Yediyurappa and all others have condemned this issue,” he added.
Keywords: BJP MLC H. Vishwanath/ Kodagu/ separate LS constituency