ಬೆಂಗಳೂರು, ಫೆಬ್ರವರಿ 01, 2019 (www.justkannada.in): ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ದೀಪಿಕಾ ಪಡುಕೋಣೆ ಇಂಟು ದಿ ವೈಲ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ಸೋಮವಾರದಿಂದ ಆರಂಭವಾಗಿರೋ ಚಿತ್ರೀಕರಣದಲ್ಲಿ ತಲೈವಾ ರಜಿನಿಕಾಂತ್ ಮತ್ತು ಆಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದಾರೆ. ನಿಗದಿಯಂತೆ ಕಾರ್ಯಕ್ರಮದ 14 ನೇ ಭಾಗದ 2ನೇ ಮತ್ತು 3ನೇ ಎಪಿಸೋಡ್ಗಳ ಚೀತ್ರೀಕರಣ ಮುಗಿದಿದೆ.
ನಿರೂಪಕ ಬೇರ್ ಗ್ರಿಲ್ಸ್ ಜೊತೆ ತಲೈವಾ ರಜಿನಿಕಾಂತ್ 6 ಗಂಟೆಗಳ ಕಾಲ ಬಂಡೀಪುರದ ಚುಮ್ಮನಹಳ್ಳ, ಮೂಲೆಹೊಳೆ ಅರಣ್ಯದಲ್ಲಿ ಹಾಗೂ ವಯನಾಡು ಸಂಪರ್ಕಿಸುವ ಟೈಗರ್ ರಸ್ತೆಯಲ್ಲಿ ಕಾಡು-ಮೇಡು, ಹಳ್ಳ ಕೊಳ್ಳದಲ್ಲಿ ಓಡಾಡಿದ್ದರು.